ಫರತಾಬಾದ: ಮುಂಬರುವ ನವೆಂಬರ್ ತಿಂಗಳಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಹೊನ್ನ ಕಿರಣಗಿಯಲ್ಲಿ ಆಯೋಜಿಸಲಾಗಿದೆ, ಗ್ರಾಮದ ಜನರು ಯಶಸ್ವಿಗೊಳಿಸಲು ಮನವಿ ಮಾಡಿದರು.
ಕಲಬುರಗಿ ತಾಲೂಕಿನಲ್ಲೇ ಅತಿ ಹೆಚ್ಚು ಸಾಹಿತ್ಯ ಪರಿಷತ್ತಿನ ಸದಸ್ಯರು ಹೊಂದಿದ್ದಾರೆ. ಕನ್ನಡ ನಾಡು ನುಡಿ ಜಲದ ಬಗ್ಗೆ ಮತ್ತು ಸಾಹಿತ್ಯದ ಬಗ್ಗೆ ಅಪಾರ ಜ್ಞಾನವನ್ನು ಉಳ್ಳವರಾಗಿದ್ದಾರೆ. ಇದರಿಂದ ಈ ಸಮ್ಮೇಳನಕ್ಕೆ ಹುರುಪು ತುಂಬಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಹೊನ್ನ ಕಿರಣಗಿ ವಲಯ ಘಟಕದ ನೂತನ ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಷ.ಬ್ರ.ಚಂದ್ರಗುಂಡ ಶಿವಾಚಾರ್ಯರು ಸಾಹಿತ್ಯದ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆದಾಗ ಸಾಹಿತ್ಯದ ಜೊತೆಗೆ ಪುಸ್ತಕ ಓದುವ ಹವ್ಯಾಸ ಹಾಗೂ ಜ್ಞಾನ ಸಮೃದ್ದಿಯಾಗುತ್ತದೆ. ಯುವಕರು ದಿನನಿತ್ಯದ ಕಾರ್ಯಕ್ರಮದ ಚಟುವಟಿಕೆಯಾಗಿ ಕೆಲಸ ಮಾಡಿದಾಗ ಹುಮ್ಮಸ್ಸು ಹೆಚ್ಚಾಗುತ್ತದೆ ಎಂದು ಶಿವಾಚಾರ್ಯರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸೃತರಾದ ಶ್ರೀ ಅಣ್ಣಾರಾವ ಅಲಮೇಲಕರ್ ಮಾಡಿದರು. ವೇದಿಕೆ ಮೇಲೆ ಹೊನ್ನ ಕಿರಣಗಿ ವಲಯದ ನಿಕಟಪೂರ್ವ ಅಧ್ಯಕ್ಷ ಆನಂದಪ್ಪ ಮುಸಾವಳಗಿ, ತಾಲೂಕ ಗೌರವ ಕಾರ್ಯದರ್ಶಿ ಮೌನೇಶ ಬಡಿಗೇರ ಇದ್ದರು.
ಕಾರ್ಯಕ್ರಮದಲ್ಲಿ ವಲಯದ ಕೋಶಾಧ್ಯಕ್ಷ ಮಂಜುನಾಥ ಕ್ವಾಟಿ, ಗೌರವ ಕಾರ್ಯದರ್ಶಿಗಳಾದ ರೇವಣಸಿದ್ದ ಸ್ಥಾವರಮಠ, ಪರಿಷತ್ತಿನ ಸದಸ್ಯರಾದ ಶಾಂತಯ್ಯ ಡೆಂಗಿಮಠ, ವಿಶ್ವನಾಥ ಹಿರೇಮಠ, ಅಶೋಕ ಯನಗುಂಟಿ, ಪ್ರಕಾಶ ಕಾಬಾ, ರಾಚಯ್ಯ ನಂದಿಕೋಲು, ರೇವಣಸಿದ್ದ ಹರಳಯ್ಯ, ಭೀಮಶಂಕರ ಚಿತ್ತಾಪುರ, ಜಟ್ಟೆಪ್ಪ ಸೀತನೂರ, ಖಲೀಲ್ ಪಾಶ ಮಳಖೇಡ, ಬಸವರಾಜ ಹರಳಯ್ಯ, ಶರಣಮ್ಮ ಹಿರೇಮಠ, ಈರಣ್ಣ ಸಿನ್ನೂರ, ದೇವಣ್ಣ ಕಾಬಾ, ಶಿವಪ್ಪ ಜುಲಪಿ, ಶಿವಪ್ಪ ಅಳ್ಳಳ್ಳಿ, ನಾಗು ಪಡಶೆಟ್ಟಿ, ನಿಂಗಪ್ಪ ಕಾಬಾ, ಬಸವರಾಜ ಮಹಾಶೆಟ್ಟಿ, ಲಕ್ಷ್ಮಿಬಾಯಿ ಜಾಪುರ, ಶಿವರಾಯ ಹಡಪದ, ಚಿನ್ನಪ್ಪ ಕಾಬಾ, ರಾಜು ಇಟಗಿ, ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಇದ್ದರು. ಪ್ರಾರ್ಥನಾ ಗೀತೆಯನ್ನು ಕು.ವಿಜಯಲಕ್ಷ್ಮಿ, ಕು.ಐಶ್ವರ್ಯ, ನಿರೂಪಣೆಯನ್ನು ಸಂಘ ಸಂಸ್ಥೆಯ ಪ್ರತಿನಿಧಿ ಡಿ.ಪಿ.ಸಜ್ಜನ, ಸ್ವಾಗತವನ್ನು ಗೌರವ ಕಾರ್ಯದರ್ಶಿ ರವಿಕುಮಾರ ಪಣದಿ, ವಂದನಾರ್ಪಣೆಯನ್ನು ವಲಯ ಅಧ್ಯಕ್ಷರಾದ ವಿಶ್ವನಾಥ.ಜೆ.ಆಲಮೇಲ ಗೈದರು.
ಹೊನ್ನ ಕಿರಣಗಿ ಗ್ರಾಮದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ: ಯುವ ಕವಿಯತ್ರಿ ಕು.ನಿತಾ.ಡಿ.ಕಾಬಾ, ಅತ್ಯುತ್ತಮ ಚಿತ್ರ ಕಲಾವಿದ ಮಲ್ಲಿಕಾರ್ಜುನ ಜಾಪುರ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸೃತರು ಅಣ್ಣಾರಾವ ಆಲಮೇಲಕರ, ಉಚಿತ ವೈದ್ಯ ಸೇವೆ ಡಾ.ಕೇಶವ ಕಾಬಾ, ಜಾನಪದ ಲೋಕ ಪ್ರಶಸ್ತಿ ಪುರಸ್ಕøಕರಾದ ಶರಣಮ್ಮ ಪಿ ಸಜ್ಜನ ಇವರಿಗೆ ಸನ್ಮಾನಿಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ಬಿಜೆಪಿ ಪಕ್ಷದ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…