ಶಹಾಬಾದ: ಸಾರ್ವಜನಿಕರು, ಶಾಲಾ-ಕಾಲೇಜಿನ ಮಕ್ಕಳು ತಮ್ಮ ಮನೆಗಳಲ್ಲಿರುವ ತ್ಯಾಜ್ಯಗಳನ್ನು ಒಣ,ಹಸಿ, ಪ್ಲಾಸ್ಟಿಕ್ ಎಂದು ಬೇರ್ಪಡಿಸಿ ಸಂಗ್ರಹಿಸಿ ಮನೆಯಲ್ಲಿ ಇಟ್ಟುಕೊಂಡು ಕಸದ ವಾಹನ ಬಂದಾಗ ನೀಡುವ ಮೂಲಕ ನಗರದ ಸ್ವಚ್ಛತೆಗೆ ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಹೇಳಿದರು.
ಅವರು ಶನಿವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ನಗರಸಭೆ ಹಾಗೂ ಕಲಬುರಗಿ ಸನ್ ರೈಸ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಹಸಿ ಕಸ-ಒಣಕಸ ಹಾಗೂ ಟ್ರೈಕೋಥಾನ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಗ್ಗೆ ನಗರಸಭೆ ಪೌರಕಾರ್ಮಿಕರು ಕೆಲಸ ಮಾಡಿ ಹೋಗಿರುತ್ತಾರೆ. ಕಾರ್ಮಿಕರು ಹೋದ ಬಳಿಕ ಸಾರ್ವಜನಿಕರು ಕಸವನ್ನು ರಸ್ತೆಯ ಬದಿಯಲ್ಲಿ ಬಿಸಾಕಿ ಹೋಗುತ್ತಿದ್ದಾರೆ. ಇದರಿಂದಾಗಿ ಕಸ ಮುಕ್ತ ನಗರ ಮಾಡಲು ಸಾಧ್ಯವಾಗುವುದಿಲ್ಲ.ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ.ಅಲ್ಲದೇ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ.ಆದ್ದರಿಂದ ಕಸ ಮುಕ್ತ ನಗರ ಮಾಡಲು ಸಾರ್ವಜನಿಕರು ಸಹ ಕೈ ಜೋಡಿಸಿ ಕಸವನ್ನು ನೀಡುವ ಮುನ್ನವೇ ವಿಂಗಡಣೆ ಮಾಡಿ ನೀಡಿದ್ರೆ ಹಸಿಕಸ ಮತ್ತು ಒಣಕಸ ಮಾಡಿ ನೀಡಬೇಕು. ಅಲ್ಲದೆ ಪೌರಕಾರ್ಮಿಕರು ಬಂದಾಗ ಕಸವನ್ನು ನೀಡಬೇಕು. ಬೇಕಾಬಿಟ್ಟಿಯಾಗಿ ರಸ್ತೆ ಬದಿಯಲ್ಲಿ ಕಸವನ್ನು ಬಿಸಾಕುವುದು ಸಾರ್ವಜನಿಕರು ನಿಲ್ಲಿಸಬೇಕಾಗಿದೆ ಎಂದರು.
ನಗರಸಭೆಯ ಪರಿಸರ ಅಭಿಯಂತರ ಮುಜಾಮಿಲ್ ಅಲಂ ಮಾತನಾಡಿ,ಸಾರ್ವಜನಿಕರು ಕಸವನ್ನು ರಸ್ತೆಗೆ ಎಸೆಯುವ ಚಾಳಿ ಬಿಟ್ಟು, ಒಂದು ಕಡೆ ಸಂಗ್ರಹಿಸಿ ಪೌರಕಾರ್ಮಿಕರು ತಮ್ಮ ಮನೆಗಳ ಬಳಿ ಬಂದಾಗ ಅವರಿಗೆ ಒಪ್ಪಿಸಿ ಎಂದು ತಿಳಿಸಿದರು. ಅನುಪಯುಕ್ತ ಸೊಪ್ಪು, ತರಕಾರಿ, ಹಣ್ಣು ಹಂಪಲು, ಹೂವು, ಆಹಾರ ಪದಾರ್ಥಗಳು, ಉದುರಿದ ಎಲೆಗಳು ಹಾಗೂ ಮನೆ ಕಸವನ್ನು ಹಾಕಿ ಸಂಗ್ರಹಿಸಿ ಹಾಗೂ ಉಪಯೋಗಿಸಿದ ಪ್ಲಾಸ್ಟಿಕ್ ವಸ್ತುಗಳು, ರಬ್ಬರ್, ಗಾಜಿನ ಬಾಟಲ್‍ಗಳು, ಮರದ ವಸ್ತುಗಳು, ಚರ್ಮ ವಸ್ತುಗಳು, ಪೇಪರ್, ತೆಂಗಿನ ಚಿಪ್ಪುಗಳು, ಎಲೆಕ್ಟ್ರಿಕಲ್ ವೈರ್, ಹಳೆಯ ಪಾದರಕ್ಷೆಗಳು ಸಂಗ್ರಹಿಸಿ, ಕಸದ ಆಟೋಗೆ ನೀಡಿ. ಕೊಳೆಯುವ, ಕೊಳೆಯದ ತ್ಯಾಜ್ಯ ರಸ್ತೆ, ಚರಂಡಿಗಳಿಗೆ ಬಿಸಾಕುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಡೆಂಗೆ, ಚಿಕ್ಯೂನ್ ಗುನ್ಯಾ, ಮಲೇರಿಯಾ ಮತ್ತಿತರ ಜ್ವರಗಳು ಕಾಣಿಸಿಕೊಂಡು ಸಾರ್ವಜನಿಕರು ಆಸ್ಪತ್ರೆಗಳಿಗೆ ಅನಗತ್ಯವಾಗಿ ಅಲೆದು ಹಣ ವ್ಯರ್ಥ ಮಾಡಿಕೊಳ್ಳುತ್ತೀರಾ. ಸರಕಾರ ಕಸವನ್ನು ಸಂಗ್ರಹಿಸಿಲು ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯ ಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯಯುತ ಜೀವನ ನಡೆಸಿ ಎಂದರು.
ಇದೇ ಸಂದರ್ಭದಲ್ಲಿ ಟೈಕೋಥಾನ್ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಕಲಬುರಗಿ ಸನ್ ರೈಸ್ ಆಸ್ಪತ್ರೆಯಿಂದ ನಗದು ಬಹುಮಾನ, ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.
ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ದಿಲೀಪ್ ಯಲಶೆಟ್ಟಿ,ಸದಸ್ಯರಾದ ಅಶೋಕ ಸೋಮ್ಯಾಜಿ, ಸನ್ ರೈಸ್ ಆಸ್ಪತ್ರೆಯ ಆಡಳಿತಾಧಿಕಾರಿಗಳಾದಮ.ಇರ್ಫಾನ್ ಪಟವಾರಿ ಹಾಗೂಮ.ಮುಜಿಬೂರ್ ರೆಹಮಾನ್,ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಪ್ರಾಂಶುಪಾಲ ರಾಜಗೋಪಾಲ ಜೂಜಾರೆ, ಮುಖ್ಯಗುರು ಬಾಬಾಸಾಹೇಬ ಸಾಳುಂಕೆ, ನಗರಸಭೆಯ ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಶರಣು,ರಾಜೇಶ,ಮೋಹಿನೋದ್ದಿನ್,ಸುರೇಶ ಹೊನ್ನಳ್ಳಿ ಸೇರಿದಂತೆ ನಗರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…