ಬಿಸಿ ಬಿಸಿ ಸುದ್ದಿ

ವಿವಿಧ ಕಲೆಗಳಿಂದ ಮೆರಗುಗೊಂಡ ಜನಪ್ರಿಯ ಕಲೋತ್ಸವ

ಕಲಬುರಗಿ: ಜನಪ್ರಿಯ ಸಾಂಸ್ಕøತಿಕ ಕಲಾ ಸಂಘ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಬಸವತೀರ್ಥ ನಗರದಲ್ಲಿ ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ, ಸಮುಚ್ಛ ಆವರಣದಲ್ಲಿ ಹಮ್ಮಿಕೊಂಡಿದ್ದ “ಜನಪ್ರಿಯ ಕಲೋತ್ಸವ” ವಿವಿಧ ಕಲೆಗಳು ಪ್ರದರ್ಶನಗೊಂಡ ಕಲೋತ್ಸವ ಮೆರಗುಗೊಂಡಿತ್ತು. ನ್ಯಾಯವಾದಿ ಈರಣ್ಣಗೌಡ ಪೋಲಿಸ್ ಪಾಟೀಲ್ ಕಾಂiÀರ್iಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಲೆಗಳು ನಮ್ಮ ದೈನಂದಿನ ಒತ್ತಡಗಳಿಂದ ಮುಕ್ತಿ ಹೊಂದಲು ಸಹಾಯಕವಾಗುತ್ತವೆ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಎನ್.ಎಸ್ ಹಿರೇಮಠ ಮಾತನಾಡಿ ಕಲೆಗಳು ಮನರಂಜನೆ ಜೊತೆಗೆ ಮನೋವಿಕಾಶಕ್ಕೆ ಬೇಕಾದ ಅಂಶಗಳನ್ನು ಒದಗಿಸುವ ಕೆಲಸ ಮಾಡುತ್ತವೆ ಎಂದರು.

ಅತಿಥಿ ಖ್ಯಾತ ನಾಟಕಕಾರ ಮಾಹಾಂತೇಶ ನವಲಕಲ್, ಶಾಂತಲಿಂಗಯ್ಯ ಎಸ್ ಮಠಪತಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಮೊದಲಿಗೆ ಕು. ವೈಷ್ಣವಿ ಭರತನಾಟ್ಯವನ್ನು ಪ್ರಧರ್ಶನ ಮಾಡಿದರು.

ನಂತರ ಪ್ರಕಾಶ ಪೂಜಾರಿಯಿಂದ ರಂಗಗೀತೆಗಳು, ರೇಣುಕಾ ಭಜಂತ್ರಿ ಅವರಿಂದ ಶಾಸ್ತ್ರೀಯ ಸಂಗೀತ ನೆರೆವೇರಿದವು. ಖ್ಯಾತ ನಾಟಕಕಾರ ಮಾಹಾಂತಯ್ಯ ಸ್ವಾಮಿ ನವಲಕಲ್ ಅವರಿದ ರಂಗ ಉಪನ್ಯಾಸ ನಡೆಯಿತು. ಮಹೇಶ ಗುತ್ತೆದಾರ ಅವರಿಂದ ಸುಗಮ ಸಂಗೀತ ಹಾಗೂ ಉದಯಕುಮಾರ ಎ ಪುಲಾರಿಯವರಿಂದ ಸೊಲೊ ತಬಲಾ ವಾದನ ನಡೆಸಿಕೊಟ್ಟರು. ಗೊಂಗೋತ್ರಿ ಮಠಪತಿ ನಿರೂಪಿಸಿದರು. ಕಾರ್ಯದರ್ಶಿ ದೇವಕಿ ಎ ಗುಡಿ ವಂದಿಸಿದರು. ಅಪಾರ ಜನರು ಕಲೋತ್ಸದಲ್ಲಿ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago