ವಾಡಿ: ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಲಂಚಾವತಾರ ಹೆಡೆಯಾಡುತ್ತಿದೆ. ಅನ್ಯಾಯ, ಮೋಸ, ವಂಚನೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇಂತಹ ಕೊಳಕು ವ್ಯವಸ್ಥೆಯ ವಿರುದ್ಧ ಜನರನ್ನು ಬಡಿದೆಬ್ಬಿಸಬಲ್ಲ ಸಾಹಿತ್ಯ ರಚನೆಯಾಗಬೇಕು. ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಸಿನೆಮಾಗಳು ಹೆಚ್ಚೆಚ್ಚು ತೆರೆಗೆ ಬರಬೇಕು ಎಂದು ಅಖಲಿ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಎಸ್.ಜಿ ಹೇಳಿದರು.
ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆ ವತಿಯಿಂದ ಪಟ್ಟಣದ ಚಕ್ರವರ್ತಿ ಪ್ರೌಢ ಶಾಲೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಂಸೋರೆ ನಿರ್ದೇಶನದ ‘ಆಕ್ಟ್-1978’ ಸಿನೆಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಶೋಷಣೆ ಮತ್ತು ದಬ್ಬಾಳಿಕೆ ಎಂಬುದು ಇಡೀ ಸಮಾಜವನ್ನು ಆವರಿಸಿಕೊಂಡಿದೆ. ಇಂತಹ ರೋಗಗ್ರಸ್ಥ ಸಮಾಜದಲ್ಲಿ ಬದುಕುತ್ತಿರುವ ಜನಸಾಮಾನ್ಯರು ಕಣ್ಣೀರು ಹಾಕುವಂತಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು ನರಕಸದೃಶ್ಯ ವ್ಯವಸ್ಥೆಗೆ ಬಲಿಯಾಗುತ್ತಿದ್ದಾರೆ.
ರಾಜಕೀಯ, ನ್ಯಾಯಾಂಗ, ಕಾರ್ಯಾಂಗ, ಮಧ್ಯಮರಂಗಗಳು ನೊಂದ ಜನಗಳ ನೆರವಿಗೆ ನಿಲ್ಲದೆ ತಮ್ಮನ್ನೇ ತಾವು ಮಾರಿಕೊಂಡಿವೆ ಎಂಬ ನಗ್ನಸತ್ಯವನ್ನು ಆಕ್ಟ್-1978 ಸಿನೆಮಾ ಬಿಚ್ಚಿಟ್ಟಿದೆ. ಕಲೆ, ಸಾಹಿತ್ಯ ಮತ್ತು ಸಿನೆಮಾಗಳು ಅನ್ಯಾಯಗಳ ವಿರುದ್ಧ ದನಿಯಾಗುವುದಷ್ಟೆಯಲ್ಲ ಜನರಲ್ಲಿ ಹೋರಾಟದ ಮನೋಭಾವ ಸೃಷ್ಠಿಸುವಂತಿರಬೇಕು. ಜನತೆ ಕೂಡ ಮೌನ ಮುರಿದು ಉತ್ತಮ ಸಮಾಜದ ಸ್ಥಾಪನೆಗಾಗಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಅತಿಥಿಯಾಗಿ ಮಾತನಾಡಿದ ನಗರದ ಹಿರಿಯರಾದ ಜೋ.ಮ.ಜಯದೇವ, ಉತ್ತಮ ಸದಭಿರುಚಿಯ ಸಿನೆಮಾಗಳ ಪ್ರದರ್ಶನ ಏರ್ಪಡಿಸುವ ಮೂಲಕ ಆವಿಷ್ಕಾರ ವೇದಿಕೆಯ ಕಾರ್ಯಕರ್ತರು ತಮ್ಮ ಸಾಮಾಜಿಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಸಿನೆಮಾಗಳು ಕೇವಲ ಮನರಂಜನೆಗಾಗಿ ಸಿದ್ಧಗೊಳ್ಳದೆ ಜನಸಮಾನ್ಯರ ನೋವುಗಳಿಗೆ ಸ್ಪಂಧಿಸುವ ಕಲೆಯಾಗಿ ಮೂಡಿ ಬರಬೇಕು. ಆದರೆ ಇಂದಿನ ಬಹುತೇಕ ಸಿನೆಮಾ ಕಥೆಗಳು ಸಾಮಾಜಿಕ ಹೊಣೆಗಾರಿಕೆಯಿಂದ ನುಣಿಚಿಕೊಂಡಿವೆ. ಇಲ್ಲಿ ಬರೀ ಆಡಂಬರ ಮತ್ತು ಅಬ್ಬರ ಎದ್ದು ಕುಣಿಯುತ್ತಿದೆ. ಹಣಗಳಿಕೆಯೊಂದೆ ಸಿನೆಮಾ ತಯಾರಕರ ಮುಖ್ಯ ಉದ್ದೇಶವಾಗುತ್ತಿದೆ ಎಂದು ವಿಷಾಧಿಸಿದರು.
ಆವಿಷ್ಕಾರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಡಿವಾಳಪ್ಪ ಹೇರೂರ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಸಹ ಕಾರ್ಯದರ್ಶಿ ಸುಮಂಗಲಾ ಜಾಧವ ಅತಿಥಿಗಳಾಗಿದ್ದರು. ಡಾ.ಮಲ್ಲಿನಾಥ ಎಸ್.ತಳವಾರ, ಯೇಸಪ್ಪ ಕೇದಾರ, ಪದ್ಮರೇಖಾ, ಶ್ರೀದೇವಿ ಮಲಕಂಡಿ, ಸಿದ್ದರಾಜ ಮಲಕಂಡಿ, ರಮೇಶ ಮಾಶಾಳ, ಪ್ರಕಾಶ ಚಂದನಕೇರಿ, ಅರ್ಜುನ ಕಾಳೇಕರ, ವಿ.ಕೆ.ಕೇದಿಲಾಯ, ದೇವಿಂದ್ರ ದೊಡ್ಡಮನಿ, ಬಸವರಾಜ ಕೇಶ್ವಾರ, ಶಿವಾನಂದ ಪೂಜಾರಿ, ರವಿ ಕೋಳಕೂರ, ರಾಜು ಒಡೆಯರಾಜ ಸೇರಿದಂತೆ ಮತ್ತಿತರರು ಸಿನೆಮಾ ವೀಕ್ಷಿಸಿದ ಬಳಿಕ ಪ್ರಶ್ನೆಗಳನ್ನು ಕೇಳಿ ಸಂವಾದದಲ್ಲಿ ಪಾಲ್ಗೊಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…