ಬಿಸಿ ಬಿಸಿ ಸುದ್ದಿ

ಅಪ್ರಾಪ್ತೆ ಕೊಲೆ ಖಂಡಿಸಿ ಹೆದ್ದಾರಿ ತಡೆದ್ದು ಜೆಡಿಎಸ್ ಪ್ರತಿಭಟನೆ

ಕಲಬುರಗಿ: ಸ್ಥಳೀಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ 14 ವರ್ಷದ ಅಪ್ರಾಪ್ತೆ ಬಾಲಕಿಯ ಕೊಲೆ ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹೆದ್ದಾರಿ ತಡೆದು ಟಾಯರಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಆಳಂದ ಪಟ್ಟಣದ ಬಸ್ ನಿಲ್ದಾಣ ಮುಂದೆ ಹಾದುಹೋಗಿರುವ ಕರ್ನಾಟಕ ಮಹಾರಾಷ್ಟ್ರ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಕೈಗೊಂಡ ಕಾರ್ಯಕರ್ತರು ಟಾಯರ್‍ಗೆ ಬೆಂಕಿ ಹಚ್ಚಿ ತಪ್ಪಿತಸ್ಥರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆ ವೇಳೆ ಹೆದ್ದಾರಿ ತಡೆಯಿಂದ ಸಂಚಾರಕ್ಕೆ ಅಡೆ, ತಡೆಯಾಯಿತು. ಗುರುವಾರ ಸಂತೆಯಾಗಿದ್ದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿ ಜನ ಪರದಾಡಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾ ವಕ್ತಾರ ಮಹೇಶ್ವರಿ ಎಸ್. ವಾಲಿ ಅವರು ಮಾತನಾಡಿ, 14 ವರ್ಷದ ಅಪ್ರಾಪ್ತ ಬಾಲಕಿ ಬಹಿರ್ದೇಸೆಗೆ ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು ಕಬ್ಬಿನ ಗದ್ದೆಯಲ್ಲಿ ಎತ್ತಿಕೊಂಡು ಹೋಗಿ ಮನುಷ್ಯತ್ವ ಮರೆತು ಪಿಶಾಚಿಗಳಂತೆ ಕ್ರೂರವಾಗಿ ಕೊಲೆ ಮಾಡಿದ ಪಾಪಿಗಳನ್ನು ಕೂಡಲೆ ಬಂಧಿಸಿ ಗಲ್ಲಿಗೇರಿಸಬೇಕು. ಒಂದು ವೇಳೆ ಕ್ರೂರಿಯನ್ನು ಹಾಗೆಯೇ ಬಿಟ್ಟರೆ ಇಂಥ ಹೀನ ಕೃತ್ಯಗಳಿಗೆ ಮತ್ತಷ್ಟು ಎಳೆ ಜೀವಗಳ ಜೊತೆ ಚಲ್ಲಾಟವಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ನಿಜವಾಅಗಿಯೂ ನಮ್ಮ ರಾಜ್ಯದಲ್ಲಿ ಕಾನೂನು, ನ್ಯಾಯಾಲಯ ಸರ್ಕಾರ ಜೀವಂತವಾಗಿದ್ದರೆ ತಕ್ಷಣವೇ ಇಂತ ಹೀನ ಮನಸ್ಥಿತಿಯುಳ್ಳ ಪಾಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಶಿಕ್ಷೆ ಕಾನೂನು ಬಾಹಿರ ಕೃತ್ಯಗಳನ್ನು ಎಸುಗುವರಿಗೆ ಎಚ್ಚರಿಕೆ ಘಂಟೆಯಾಗಬೇಕು ಎಂದು ಅವರು ಹೇಳಿದರು. ಗ್ರಾಮದ ನೆರೆ ಹೊರೆಯಲ್ಲಿ ಮೂರಾರ್ಜಿ ದೇಸಾಯಿ ಮತ್ತು ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳಿದ್ದರು ಗ್ರಾಪಂನಿಂದ ಸಿಸಿ ಕ್ಯಾಮಿರಾಗಳು ಅಳವಡಿಸದೇ ಇರುವುದು ಬೇಜವಾಬ್ದಾರಿಯಾಗಿದೆ. ಮುಂದೆ ಇಂಥ ಘಟನೆ ಮರುಕಳಿಸದೆ ಎಚ್ಚರವಹಿಸಬೇಕು. ಪ್ರತಿ ಗ್ರಾಪಂಗಳ ಸುತ್ತಲೂ ಪ್ರಮುಖ ಬೀದಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.

ಬಾಲಕಿಯ ಸಂತ್ರಸ್ಥ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು ಮತ್ತು ಕುಟುಂಬದ ಓರ್ವರಿಗೆ ಸರ್ಕಾರಿ ನೌಕರಿ ಕೊಡಬೇಕು ಮತ್ತು ಆರೋಪಿಗಳನ್ನು ಕೂಡಲೇ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಮೂಲಕ ರಾಜ್ಯದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಶರಣ ಕುಲಕರ್ಣಿ, ಮುಖಂಡ ರಾಜಶೇಖರ ಚೌದ್ರಿ, ಶ್ರೀಶೈಲ ಬಿರಾದಾರ ನಿಂಬರಗಾ, ಕಿರಣ ಪಾಟೀಲ ಹೊನ್ನಳ್ಳಿ, ಮಹಿಬೂಬ ಹಡಲಗಿ, ಶರಣು ಉಜಳಂಬೆ, ಮಂಜುನಾಥ ಪೂಜಾರಿ, ಜೈರಾಮ ರಾಠೋಡ, ರೇವಣಸಿದ್ಧ ಪೂಜಾರಿ ನಾವದಗಿ, ರವಿ ಪೂಜಾರಿ ಬಾಳಿ ಮತ್ತು ಕಸ್ತೂರಬಾಯಿ ಪಾಟೀಲ, ಸುಮಾ ಹೊನ್ನಳ್ಳಿ, ಕಲ್ಲವ್ವ ಗುತ್ತಿ, ಸಂಗೀತಾ ರೆಡ್ಡಿ, ಇಟಾಬಾಯಿ ಬಿರಾದಾರ, ಭಾರತಿ ಬಾಳಿ, ಗೋದಾಬಾಯಿ, ಆಯುಷ್ಯ ಪಟೇಲ ಅನೇಕರು ಭಾಗವಹಿಸಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

5 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

5 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

7 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

7 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

7 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

8 hours ago