ಕಲುಬುರಗಿ: ನಗರದಲ್ಲಿ ನಾಲ್ಕುಚಕ್ರ ಚಾರಿಟೇಬಲ್ ವತಿಯಿಂದ ಕುಕೃತ್ಯೆ ಮತ್ತು ಕೊಲೆಗೆ ಬಲಿಯಾದ ಬಾಲಕಿಗಾಗಿ ನಗರೇಶ್ವರ ಶಾಲಾ ಆವರಣದಲ್ಲಿ ಸಾವಿರಾರು ಮಕ್ಕಳೊಂದಿಗೆ ಶ್ರದ್ದಾಂಜಲಿ ನಮನ ಸಲ್ಲಿಸಸಿ ಕೃತ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಅವಮಾನವಿಯ ಕೃತ್ಯವನ್ನು ಖಂಡಿಸಿ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿಗ ಕಛೆರಿ ವರೆಗೆ ನಾಲ್ಕುಚಕ್ರ ತಂಡ ಮತ್ತು ವಿವಿಧ ಸಂಘಟನೆಯ ಬೆಂಬಲದೊಂದಿಗೆ ಘೋರ ಕೃತ್ಯಕ್ಕೆ ಧಿಕ್ಕಾರದ ಘೋಷಣೆಗಳ ಫಲಕವನ್ನು ಕೈಯಲ್ಲಿ ಹಿಡಿದು ಮೌನ ಮೆರವಣಿಗೆ ಮಾಡಲಾಯಿತು.
ಆಳಂದ ತಾಲೂಕಿನ ಗ್ರಾಮದಲ್ಲಿ ನೀಚ ಕೃತ್ಯ ಮತ್ತು ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲುಶಿಕ್ಷೆ ಮತ್ತು ಶೂಟ್ @ ಸೈಟ್ ಕಾನೂನು ಜಾರಿಗೆ ಗೋಳಿಸುಬೇಕೆಂದು ರಸ್ತೆಯುದ್ದಕ್ಕೂ ಘೊಷಣೆಗಳನ್ನು ಕೂಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಕ್ಕಮಾಹದೇವಿ ಆಶ್ರಮದ ಮಾತೋಶ್ರೀ ಪ್ರಭುಶ್ರೀ ತಾಯಿ ಮಾತನಾಡ ಮುಗ್ಧ ಮಗುವಿನ ಮೇಲೆ ವಿಕೃತಿ ಮೆರೆದಿರುವ ವ್ಯಕ್ತಿಯನ್ನು ಕಠಿಣ ಶಿಕ್ಷೆಗೆ ಗುರಿಮಾಡಬೇಕು. ಹೆಣ್ಣು ಮಕ್ಕಳು ಧೈರ್ಯವಂತರಾಗಿ ಹೊರಗೆ ಬರುವಂತಹ ಸಮಾಜ ನಿರ್ಮಾಣವಾಗಬೇಕು. ಸುರಕ್ಷತೆಗಾಗಿ ಹೆಣ್ಣು ಮಕ್ಕಳಿಗೆ ಕರಾಟೆ ಅಂತಹ ತರಬೇತಿ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಮಾಲಾದ್ವಯರು ಮಾತನಾಡಿ, ಇದು ಅವಮಾನವಿಯ ಘಟನೆ.. ಈ ಘಟನೆಯಿಂದನೆ ಇಲ್ಲಿಗೆ ಕಾಮುಕರ ಅಟ್ಟಹಾಸ ಕ್ಕೆ ಬ್ರೆಕ್ ಬಿಳಲಿ. ಹೆಣ್ಣು ಮಕ್ಕಳ ಸುರಕ್ಷತೆಗಾಗಿ, ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಯಾರೇ ಆಗಿರಲಿ ಅವರಿಗೆ ಗಲ್ಲು ಶಿಕ್ಷೆ ಮತ್ತು ಅಪಾರಾಧಿ ಬಂಧಿಸುವ ಸ್ಥಳದಲ್ಲಿಯೇ ಶೂಟ್ @ ಸೈಟ್ ಕಾನೂನು ಜಾರಿಗೆ ತರಲು ಅಗ್ರಹಿಸಿದರು.
ಈ ಸಂದರ್ಭದಲ್ಲಿ ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ದಣ್ಣೂರ್ ಮಾಲಾ ಕಣ್ಣಿ ಕಲ್ಯಾಣರಾವ್ ಪಾಟೀಲ್ ಕಣ್ಣಿ ಮತ್ತು ಸದಸ್ಯರಾದ ಸಂಗೀತಾ ಕೊರಳ್ಳಿ, ವಿಜಯಲಕ್ಷ್ಮಿ ಹೀರೆಮಠ, ಜ್ಯೋತಿ ಕೊಟನೂರ್, ಪೂರ್ಣಿಮಾ ಕುಲಕರ್ಣಿ, ವೈಶಾಲಿ ನಾಟಿಕಾರ್, ಕವಿತಾ ದೇಗಾವ್, ಸುಮಂಗಲಾ ಚಕ್ರವರ್ತಿ, ಲತಾ ಬಿಲಗುಂದಿ, ಪೂರ್ಣಿಮಾ, ಜ್ಯೋತಿ ನಿಪ್ಪಾಣಿ, ನಾಗರಾಜ್ ಹೆಂಬಾಡಿ, ಶ್ರೀಕಾಂತ್ ನಾಟಿಕಾರ್, ಆನಂದತೀರ್ಥ ಜೋಷಿ, ವಿಜಯ ಪುರಾಣಿಕಮಠ, ಸುಭಾಷ್ ಮೇತ್ರೆ, ಕಾರ್ತಿಕ ದಣ್ಣೂರ್, ಸಚಿನ್ ಫರತಾಬಾದ್, ಗೋಪಾಲ್ ನಾಟಿಕಾರ್, ಮನೋಹರ ಬಿರನೂರ್, ಮಲ್ಲಿಕಾರ್ಜುನ್ ಸರವಾಡ್, ಮಹೇಶ್ ಕೆಂಭಾವಿ, ಸತೀಶ್ ಸಜ್ಜನ್, ಲಿಂಗರಾಜ್ ಸಿರಗಾಪೂರ್, ದಯಾನಂದ್ ಪಾಟೀಲ್, ಶ್ರೀಧರ್ ನಾಗನಹಳ್ಳಿ, ಸತೀಶ್ ಮಾಹೂರ್, ವಿರೆಶಗೌಡ ಪಾಟೀಲ್, ಲಕ್ಶ್ಮಿಕಾಂತ್ ಜೋಳದ್ ನಗರೇಶ್ವರ ಶಾಲೆಯ ವ್ಯವಸ್ಥಾಪಕ ಮಂಡಳಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಶರಬಯ್ಯಾ ಗಾದಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…