ಬಿಸಿ ಬಿಸಿ ಸುದ್ದಿ

ಆಳಂದ: ಘಟನೆ ಮರುಕಳಿಸದಂತೆ ಜನ ಜಾಗೃತಿ ಸಮಾವೇಶಕ್ಕೆ ಧಾರ್ಮಿಕ ಗುರುಗಳ ಸಲಹೆ

ಆಳಂದ: ತಾಲೂಕಿನಲ್ಲಿ ಈಚೆಗೆ ನಡೆದ ಅಫರಾದ ಕೃತ್ಯ ಹಾಗೂ ಕೊಲೆಯ ಘಟನೆಯನ್ನು ಖಂಡಿಸಿದ ಇಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಇಂಥ ಘಟನೆಯನ್ನು ಮರುಕಳಿಸದಂತೆ ಶೀಘ್ರವೇ ಸಮಾವೇಶ ಕರೆದ ಜನ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಆಡಳಿತಕ್ಕೆ ಸಲಹೆ ನೀಡಿದರು.

ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ಶುಕ್ರವಾರ ತಹಸೀಲ್ದಾರ ಯಲ್ಲಪ್ಪ ಸುಬೇದಾರಗೆ ಮನವಿ ಸಲ್ಲಿಸಿ ಅವರ ಜೊತೆ ಚರ್ಚಿಸಿದ ಶ್ರೀಗಳು ಮತ್ತು ಮುಖಂಡರು, ಅಪರಾಧ ಕೃತ್ಯ ಮತ್ತು ಕೊಲೆಯಂತ ಘಟನೆಗಳ ಹತ್ತಿಕಲು ತುರ್ತಾಗಿ ಸಮಾವೇಶ ಕೈಗೊಂಡ ಜನ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ಬಾಲಕಿಯ ಮೇಲೆ ನಡೆದ ಘೋರ ಕೃತ್ಯವನ್ನು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಬಾಲಕಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿ ಅವರ ಕುಟುಂಬಕ್ಕೆ ಸಹಾಯ ಸಹನುಭೂತಿ ನೀಡುವ ಕರ್ತವ್ಯವನ್ನು ಸರ್ಕಾರ ನಿರ್ವಹಿಸಬೇಕು ಎಂದರು.

ಸಮಾಜದಲ್ಲಿ ಇಂಥ ಕೆಟ್ಟ ಘಟನೆಗಳನ್ನು ಮರುಕಳಿಸದಂತೆ ಜಾಗೃತಿ ಸಮಾವೇಶ ಮಾಡಿಸಲು ಸರ್ಕಾರ ಮತ್ತು ಜನ ಪ್ರತಿನಿಧಿಗಳ ಕರ್ತವ್ಯವಾಗಿದೆ. ಜೊತೆಗೆ ಧರ್ಮಗುರುಗಳ ಸಮಾಜ ಚಿಂತಕರು ಸೇವಕರು, ಶಾಲಾ ಶಿಕ್ಷಕರು, ಜನ ಪ್ರತಿನಿಧಿಗಳು, ಯುವಕ, ಯುವತಿಯರು, ಪಾಲಕರು ಮತ್ತು ಸರ್ಕಾರಿ ನೌಕರರು ಸೇರಿಸಿ ಜಾಗೃತಿ ಸಮಾವೇಶ ನಡೆಸಿ ಕೆಟ್ಟ ಘಟನೆಗಳು ಹತ್ತಿಕ್ಕಲು ಜನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಈ ವೇಳೆ ಧುತ್ತರಗಾಂವ, ಉಸ್ತುರಿ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ, ಬೆಳಮಗಿಯ ಧ್ಯಾನಭೂಮಿ ಬುದ್ಧವಿಹಾರದ ಬಂತೇ ಅಮರಜ್ಯೋತಿ, ಶಾಂತಿವನಚರ್ಚ್ ಪಾಧರ ಸಂತೋಷ ಬಾಪು, ಮೌಲಾ ಖಾಲಿದ ರಾಜಾಸಾಹೇಬ, ಜಾಗತಿಕ ಲಿಂಗಾಯತ್ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಹಿರಿಯ ಮುಖಂಡ ಮಲ್ಲಿನಾಥ ಯಲಶೆಟ್ಟಿ, ಕಿಸಾನಸಭಾ ಮುಖಂಡ ಮೌಲಾ ಮುಲ್ಲಾ, ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಬಾಬುರಾವ್ ಅರಣೋದಯ, ಎ.ಆರ್.ಬೇಗ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.

ಲಿಖಿತ ಸಲಹೆ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಡೆ ಅನುಸರಿಸಲಾಗುವುದು ಎಂದು ಹೇಳಿದರು.

ವ್ಯಾಪಕ ಖಂಡನೆ: ಅಪ್ರಾಪ್ತ ಮೇಲೆ ಹೀನ ಕೃತ್ಯ ಕೊಲೆ ಘಟನೆಗೆ ನಾಗರಿಕ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಂಥ ಘಟನೆ ಮುರುಕಳಿಸದಂತೆ ಸರ್ಕಾರ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಘಟನೆಗಳ ಆಗ್ರಹ ಮುಂದುವರೆದಿದೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago