ಬಿಸಿ ಬಿಸಿ ಸುದ್ದಿ

“ಶರಣಬಸವೇಶ್ವರ ವಸತಿ ಶಾಲೆ ಮತ್ತು ಅಪ್ಪಾ ಪಬ್ಲಿಕ್ ಶಾಲೆಗೆ ಸಮಗ್ರ ಪ್ರಶಸ್ತಿಗಳು”

ಕಲಬುರಗಿ:ಇನ್‍ಟ್ಯಾಕ ಅಧ್ಯಾಯ ಹಾಗೂ ರೋಟರಿ ಕ್ಲಬ್ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಹೆರಿಟೆಜ್‍ಕ್ವಿಜ್-2022 ಸ್ವರ್ಧೆಯನ್ನು ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ಕಲಬುರಗಿ ರೋಟರಿ ಕ್ಲಬ್ ಅಧ್ಯಕ್ಷ ರಮೇಶ ಪಾಟೀಲ ಉದ್ಘಾಟಿಸಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕ್ವಿಜ್ ಸ್ಪರ್ಧೇಯು ಅತ್ಯಂತ ಉಪಯುಕ್ತವಾಗಿದೆ.

ವಿದ್ಯಾರ್ಥಿಗಳು ಪ್ರತಿಹಂತದಲ್ಲಿ ಸ್ಪರ್ಧೇಯ ಮೂಲಕ ಉತ್ತಮ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಲಬುರಗಿ ಇನ್‍ಟ್ಯಾಕ ಅಧ್ಯಾಯದ ಪ್ರತಿಯೊಂದು ಕಾರ್ಯಕ್ರಮವು ಮಕ್ಕಳಿಗೆ, ಯುವಕರಿಗೆ, ಹಿರಿಯರಿಗೆ ಸಹಾಯಕವಾಗಿರುತ್ತದೆ ಎಂದು ಹೇಳಿದರು.
ಡಾ. ಬಿ.ಎಸ್. ಗುಳಶೆಟ್ಟಿ ಅಧ್ಯಕ್ಷತೆವಹಿಸಿದ್ದರು.

ಗೌರವ ಉಪಸ್ಥಿತಿ ವಿದ್ಯಾಸಾಗರ ರೋಟರಿ ಸದಸ್ಯರು, ಬಹುಮಾನ ವಿತರಕರಾಗಿ ರಿಜ್‍ವಾನ್-ಉರ್-ರಹಮಾನ್ ಸಿದ್ದಿಕಿ ಯವರು, ಕ್ವಿಜ್ ಸ್ಪರ್ಧೇಯನ್ನು ಡಾ. ಎಂ.ಎಸ್. ಕುಂಬಾರ ಪ್ರಾಧ್ಯಾಪಕರು ಸರಕಾರಿ ಮಹಾವಿದ್ಯಾಲಯ ಕಲಬುರಗಿ ಹಾಗೂ ಪ್ರೋ. ಚಂದ್ರಶೇಖರ ಅನಾದಿ ನಡೆಸಿಕೊಟ್ಟರು ಡಾ. ಎಸ್.ಎಸ್.ವಾಣಿ ಇನ್‍ಟ್ಯಾಕ ಸಂಯೋಜಕರು ಸ್ವಾಗತ ಮತ್ತು ಪ್ರಸ್ತಾವಿಕ ನುಡಿಗಳನ್ನು ಹೇಳಿದರು.

ಕಲಬುರಗಿ ನಗರದ ಶರಣಬಸವೇಶ್ವರ ವಸತಿ ಶಾಲೆ, ಅಪ್ಪಾ ಪಬ್ಲಿಕ್ ಶಾಲೆ, ಮೀಲೆನಿಯಂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳು, ರೋಟರಿ ಶಾಲೆ, ಹ್ಯೂಮನ್ ಏಜ್ ಉರ್ದು ಶಾಲೆ, ಶಾಂತಲಿಂಗೇಶ್ವರ ಪ್ರೌಢ ಶಾಲೆ, ಫರ್‍ಹಾನ್ ಪ್ರೌಢಶಾಲೆ, ಎಸ್.ವಿ.ಪಿ.ಎಂ. ಪ್ರೌಢಶಾಲೆ, ಎಸ್.ಎಂ. ಪ್ರೌಢಶಾಲೆಗಳಿಂದ ಒಟ್ಟು 110 ವಿದ್ಯಾರ್ಥಿಗಳು ಭಾಗವಹಿಸಿದರು.

ಮೊದಲು ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಹತ್ತು ತಂಡಗಳಾಗಿ ವಿಂಗಡಿಸಿ, ಐದು ಸುತ್ತಿನಲ್ಲಿ ಕ್ಲಿಜ್ ಸ್ಪರ್ಧೇಯನ್ನು ನಡೆಸಲಾಯಿತು.

ಶರಣಬಸವೇಶ್ವರ ವಸತಿ ಶಾಲೆಯ ಅಶುತೋಷಿ ಮತ್ತು ಶ್ರವಣ ಮೊದಲನೇಯ ಬಹುಮಾನ, ಅಪ್ಪ ವಸತಿ ಶಾಲೆಯ ಅವಿನಾಶ ಶೀಲವಂತ ಮತ್ತು ಅಭಿಷೇಕ ರೆಡ್ಡಿ ಎರಡನೆಯ ಬಹುಮಾನ ಹಾಗೂ ಶರಣಬಸವೇಶ್ವರ ವಸತಿ ಶಾಲೆಯ ಶ್ರೀಕಾಂತ ಮತ್ತು ಪ್ರಯುಮ್ ತೃತೀಯ ಬಹುಮಾನ ಪಡೆದುಕೊಳ್ಳುವುದರ ಮೂಲಕ ಶ್ರೀ ಶರಣಬಸವೇಶ್ವರ ಸಂಸ್ಥೆಯ ಮಕ್ಕಳು ಎಲ್ಲಾ ಬಹುಮಾನಗಳನ್ನು ಪಡೆದುಕೊಂಡರು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಗೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಡಾ. ಶರಣಬಸಪ್ಪ ಗುಂಡಗುರತಿ, ಡಾ. ರವೀಂದ್ರ ಬೀರವಾರ, ಡಾ. ನಬಿಸಾ, ಹಾಗೂ ಇನ್‍ಟ್ಯಾಕ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago