ಸುರಪುರ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಕ್ರೀಯಾಯೋಜನೆ ಪ್ರಕಾರ ಮದ್ಯ ವರ್ಜನ ಶಿಬಿರ ನಡೆಸಲು ಸಮಿತಿ ರಚನೆ ಅಂಗವಾಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ಪೂರ್ವ ಭಾವಿ ಸಭೆ ನಡೆಸಲಾಯಿತು.
ಡಿಸೆಂಬರ್ 25 ರಿಂದ ಜನೆವರಿ 1ನೇ ತಾರೀಖಿನವರೆಗೆ ನಡೆಯಲಿರುವ ಶಿಬಿರದ ನಿರ್ವಹಣೆಗಾಗಿ ಸಮಿತಿಯನ್ನು ರಚಿಸಲಾಯಿತು.ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರ ಅಭಿಪ್ರಾಯದಂತೆ ಸಮಿತಿಯ ಅಧ್ಯಕ್ಷರನ್ನಾಗಿ ಸೂಗುರೇಶ ವಾರದ ಅವರನ್ನು ನೇಮಕಗೊಳಿಸಲಾಯಿತು. ಉಪಾಧ್ಯಕ್ಷರನ್ನಾಗಿ ಸುಜಾತಾ ವೇಣುಗೋಪಾಲ ಜೇವರ್ಗಿ,ನರಸಿಂಹಕಾಂತ ಪಂಚಮಗಿರಿ,ಸಿತಾರಾಮ ಎಲಿಗಾರ,ಜಯಲಲಿತಾ ಪಾಟೀಲ್,ಶಿವರಾಜ ಕಲಕೇರಿ,ಹೊನ್ನಪ್ಪ ತಳವಾರ,ಚಂದ್ರಕಾಂತ ಪಾಡಮುಖಿ,ಸಂಗನಗೌಡ ನಾಗರಾಳ,ತಿಪ್ಪಣ್ಣ ವಕೀಲರು,ಸಿದ್ದನಗೌಡ ಹೆಬ್ಬಾಳ ಅವರನ್ನು ನೇಮಿಸಲಾಯಿತು.
ಗೌರವ ಸಲಹೆಗಾರರನ್ನಾಗಿ ಹಣಮಂತ್ರಾಯ ಕಕ್ಕೇರಾ,ಸುವರ್ಣ ಎಲಿಗಾರ,ಬಸವರಾಜ ಜಮದರಖಾನಿ,ಬಸವರಾಜ ಸ್ಥಾವರಮಠ ಹುಣಸಗಿ,ಅಮರಯ್ಯಸ್ವಾಮಿ ಜಾಲಿಬೆಂಚಿ,ಶಿವಶರಣಪ್ಪ ಹೆಡಗಿನಾಳ ಹಾಗೂ ಕಾರ್ಯದರ್ಶಿಗಳನ್ನಾಗಿ ಸುಮಂಗಲಾ ಸುರಪುರ,ಬಸಮ್ಮ ಹಸನಾಪುರ ಮತ್ತು ಸಲಹಾ ಸಮಿತಿ ಸದಸ್ಯರನ್ನಾಗಿ ಸಿದ್ದಯ್ಯ ಪಾಟೀಲ್,ಗಿರಿಶೀ ಶಹಾಬಾದಿಯವರನ್ನು ನೇಮಕಗೊಳಿಸಲಾಯಿತು.
ಸಭೆಯಲ್ಲಿ ಮುಖಂಡರಾದ ಬಸವರಾಜಪ್ಪ ನಿಷ್ಟಿ ದೇಶಮುಖ,ಶಾಂತಪ್ಪ ಬೂದಿಹಾಳ,ಬಸವರಾಜ ಜಮದ್ರಖಾನಿ,ಶ್ರೀನಿವಾಸ ಜಾಲವಾದಿ,ಸೋಮಶೇಖರ ಶಹಾಬಾದಿ,ಸಂಗಣ್ಣ ಎಕ್ಕೆಳ್ಳಿ,ಜಯಲಲಿತಾ ಪಾಟೀಲ್ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕ್ಷೇತ್ರ ಯೋಜನಾಧಿಕಾರಿ ಸಂತೋಷ ಎ.ಎಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…