ಕಲಬುರಗಿ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲೂಕಾ ಮಟ್ಟದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶತಾಯುಷಿ ಶ್ರೀ ಕರಿಬಸವೇಶ್ವರ ಶಿವಾಚಾರ್ಯರ ವೇದಿಕೆಯಲ್ಲಿ ನ.12 ರಂದು ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಾಂಸ್ಕøತಿಕ ಭವನದಲಿ ್ಲಆಯೋಜಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಎಸ್.ಸಜ್ಜನಶೆಟ್ಟಿ ತಿಳಿಸಿದರು.
ನಮ್ಮ ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾದರಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ಸಾಹಿತಿ ಡಾ.ನಾಗೇಂದ್ರ ಮಸೂತಿ ಅವರ ಸರ್ವಾಧ್ಯಕ್ಷತೆಯಲ್ಲಿ ನ.12 ರ ಬೆಳಗ್ಗೆ 7.30 ಕ್ಕೆ ಧ್ವಜಾರೋಹಣ ಜರುಗಲಿದ್ದು, ಬೆಳಗ್ಗೆ 8.30 ಕ್ಕೆ ಜರುಗಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಹೊನ್ನಕಿರಣಗಿ ಗ್ರಾಪಂ ಅಧ್ಯಕ್ಷ ಬಸವರಾಜ ಚಿಂಚೋಳಿ ಚಾಲನೆ ನೀಡಲಿದ್ದು, ಅನೇಕ ಕಲಾತಂಡಗಳು ಸೇರಿದಂತೆ ಗಣ್ಯರು ಉಪಸ್ಥಿರಿರುವರು.
ಬೆ.10.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಹೊನ್ನಕಿರಣಗಿಯ ಶ್ರೀ ರಾಚೋಟೇಶ್ವರ ಸಂಸ್ಥಾನಮಠದ ಶ್ರೀ ಚಂದ್ರಗುಂಡ ಶಿವಾಚಾರ್ಯರು, ಫಿರೋಜಾಬಾದ ಶ್ರೀ ಅನ್ನದಾನೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು ವಹಿಸಲಿದ್ದು, ಶಾಸಕ ಎಂ.ವೈ.ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಶಯ ನುಡಿಗಳನ್ನಾಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ.ಮಾನು ಸಗರ, ಸಮ್ಮೇಳನಾಧ್ಯಕ್ಷ ಡಾ.ನಾಗೇಂದ್ರ ಮಸೂತಿ, ಜಿಪಂ ನ ಮಾಜಿ ಸದಸ್ಯ ದಿಲೀಪ್ ಆರ್.ಪಾಟೀಲ, ಇಓ ವೀರಣ್ಣ ಕೌಲಗಿ, ಬಿಇಓ ಶಂಕ್ರೆಮ್ಮಾ ಡವಳಗಿ, ಜಿಪಂ ನ ಮಾಜಿ ಅಧ್ಯಕ್ಷ ಸಾಯಬಣ್ಣಾ ನೀಲಪ್ಪಗೋಳ, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಆರ್.ಸಜ್ಜನ್, ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಈಶ್ವರಗೌಡ ಪಾಟೀಲ, ಡಾ.ಅಂಬಾರಾಯ ರುದ್ರವಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಹಿತಿ ಡಾ.ಶಿವರಂಜನ ಸತ್ಯಂಪೇಟೆ ಸಂಪಾದಿತ `ಹೊನ್ನ ನೇಸರ’ ಸ್ಮರಣ ಸಂಚಿಕೆಯನ್ನು ಎಂಎಲ್ಸಿ ಡಾ.ಬಿ.ಜಿ.ಪಾಟೀಲ ಬಿಡುಗಡೆ ಮಾಡಲಿದ್ದಾರೆ.
ಬೆಳಗ್ಗೆ 11.30 ಕ್ಕೆ ಜನಪರ ಹೋರಾಟಗಾರ್ತಿ ಸೋನುಬಾಯಿ ಜೆ.ಕೋಣಿನ್ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಕಲಬುರಗಿ ಜಿಲ್ಲೆಯ ತತ್ವಪದಕಾರರು ವಿಷಯದ ಕುರಿತು ಸಿಂಡಿಕೇಟ್ ಸದಸ್ಯ ಡಾ.ಧರ್ಮಣ್ಣ ಕೆ.ಬಡಿಗೇರ, ನೈತಿಕ ಬದುಕೆ-ನೈಜ ಬದುಕು ವಿಷಯದ ಕುರಿತು ಸಾಹಿತಿ ಸಿ.ಎಸ್.ಆನಂದ ಮಾತನಾಡಲಿದ್ದಾರೆ. ಅನೇಕ ಕವಿ-ಸಾಹಿತಿಗಳು, ಪ್ರಮುಖರು ಉಪಸ್ಥಿತರಿರುವರು.
ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮ್ಮೇಳನಾಧ್ಯಕ್ಷರ ಬದುಕು-ಬರಹದ ಕುರಿತು ಡಾ.ಶಿವಶರಣಪ್ಪ ಮೋತಕಪಳ್ಳಿ ಮಾತನಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಹಿರಿಯ ಸಾಹಿತಿ ಶಿವಕವಿ ಜೋಗೂರ ಅಧ್ಯಕ್ಷತೆಯಲ್ಲಿಕವಿಗೋಷ್ಠಿ ಜರುಗಲಿದೆ ಎಂದು ಹೇಳಿದರು.
ಮಧ್ಯಾಹ್ನ 4 ಕ್ಕೆ ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಹಾಗರಗುಂಡಗಿ ವಿರಕ್ತ ಮಠದ ಶ್ರೀ ಶಿವಾನಂದ ದೇವರು, ಹೊನ್ನಕಿರಣಗಿ ಕೂಡಲೂರು ಬಸವಲಿಂಗೇಶ್ವರ ಮಠದ ಡಾ.ಶಿವರಾಜಪ್ಪ ಅಪ್ಪ ವಹಿಸಲಿದ್ದಾರೆ. ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಅಧ್ಯಕ್ಷತೆ ವಹಿಸಲಿದ್ದು, ಪ್ರಸಿದ್ಧ ಚಿತ್ರಕಲಾವಿದ ಡಾ.ವಿ.ಜಿ.ಅಂದಾನಿ ನೇತೃತ್ವ ವಹಿಸಲಿದ್ದಾರೆ. ಅನೇಕ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಸಮಾಜದ ವಿವಿಧ ರಂಗಗಳಲ್ಲಿ ವಿಶೇಷ ಕೊಡುಗೆ ನೀಡಿರುವವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂ.ಕಾರ್ಯದರ್ಶಿ ಶರಣಬಸಪ್ಪ ನರೂಣಿ, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿಗಳಾದ ವಿಶ್ವನಾಥ ತೊಟ್ನಳ್ಳಿ, ಮೋನಪ್ಪ ಕೆ.ಬಡಿಗೇರ, ಪ್ರಭವ ಪಟ್ಟಣಕರ್, ಕವಿತಾ ಕಾವಳೆ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಶಿವಶರಣ ಪರಪ್ಪಗೋಳ ಇತರರು ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…