ಕಲಬುರಗಿ: ಸಂವಿಧಾನ ಇರುವುದರಿಂದಲೇ ನಾನು ಇಂದು ನಿಮ್ಮೆದರು ನಿಂತು ಮಾತನಾಡುತ್ತಿದ್ದೇನೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಾದಿಸಿದರು.
ಅವರು ಇಂದು ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ( ಎಡಗೈ) ಸಮುದಾಯದ ಸಭೆಯಲ್ಲಿ ಅವರು ಮಾತನಾಡಿ, ಸಂವಿಧಾನದ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ ಅದು ನನ್ನ ಕರ್ತವ್ಯವೂ ಕೂಡ. ಕೆಲ ದಿನಗಳ ಹಿಂದೆ ಕೆಲವರು ದೇಶಬಿಟ್ಟು ಹೋಗುವ ಮಾತನಾಡಿದ್ದರು. ಆದರೆ, ಅಂಬೇಡ್ಕರ್ ಅವರಿಗೆ ಅನ್ಯಾಯವಾದಾಗ ಯಾರೂ ಹಾಗೆ ಹೇಳಿರಲಿಲ್ಲ. ಬಿಜೆಪಿಯವರು ಶೋಷಿತರನ್ನು ನುಂಗಿ ಜೀವಿಸುವ ಹುನ್ನಾರ ಹೊಂದಿದ್ದಾರೆ. ಸಮಾನ ಹಕ್ಕುಗಳನ್ನು ದೇಶದ ನಾಗರಿಕರಿಗೆ ಒದಗಿಸಿರುವ ಸಂವಿಧಾನವನ್ನೇ ಬದಲಿಸುವ ಮಾತನಾಡುತ್ತಾರೆ. ಬಿಜೆಪಿ ಅಂತ ನಾಯಕರನ್ನು ಮೋದಿ ಖಂಡಿಸಲಿಲ್ಲ ಅಥವಾ ಅವರ ಪರವಾಗಿ ಕ್ಷಮೆಯೂ ಕೇಳಲಿಲ್ಲ ಎಂದರು.
” ಸಮುದಾಯದ ಎರಡೂ ವರ್ಗದವರು ಕುಳಿತುಕೊಂಡು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಹೋಗುವುದಾದರೆ ಇಬ್ಬರೂ ಒಗ್ಗಟ್ಟಾಗಿ ಹೋಗೋಣ ” ಎಂದು ಅಭಯ ನೀಡಿದರು. ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ ಅವರು ಮಾತನಾಡಿ ಖರ್ಗೆ ಸಾಹೇಬರು 11 ಸಲ ಗೆದ್ದಿದ್ದಾರೆ ಇನ್ನೊಂದು ಸಲ ಗೆಲ್ಲುತ್ತಾರೆ ಇದರಲ್ಲಿ ಯಾವುದೇ ಅನುಮಾನ ಬೇಡ. “ಖರ್ಗೆ ಅವರ ಸಲುವಾಗಿ ರಕ್ತ ಕೊಟ್ಟಾದರೂ ಅವರನ್ನು ಗೆಲ್ಲಿಸುತ್ತೇವೆ” ಎಂದು ಘೋಷಿಸಿದರು.
ಮಾಜಿ ಸಚಿವ ಡಾ ಶರಣಪ್ರಕಾಶ ಪಾಟೀಲ್ ಮಾತನಾಡಿ ಖರ್ಗೆ ಸಾಹೇಬರ ಪರಿಶ್ರಮದಿಂದಾಗಿ ಆರ್ಟಿಕಲ್ 371 ( ಜೆ) ಜಾರಿಗೆ ಬಂದು ಈ ಭಾಗಕ್ಕೆ ಅನುಕೂಲವಾಗಿದೆ ಈಗಾಗಲೇ 32000 ಜನರು ಉದ್ಯೋಗಪಡೆದುಕೊಂಡಿದ್ದಾರೆ ಅದರಲ್ಲಿ ಎಲ್ಲ ಸಮುದಾಯದ ಅಭ್ಯರ್ಥಿ ಗಳಿದ್ದಾರೆ. ಹಾಗಾಗಿ, ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಮತ್ತೊಮ್ಮೆ ಗೆಲ್ಲಿಸಬೇಕೆಂದು ಕರೆ ನೀಡಿದರು.
ವೇದಿಕೆಯ ಮೇಲೆ ಅಲ್ಲಮಪ್ರಭು ಪಾಟೀಲ್, ಫ್ರೊ ಹನುಮಂತಯ್ಯ, ಚಂದ್ರಿಕಾ ಪರಮೇಶ್ವರಿ, ಶ್ಯಾಮ್ ನಾಟೀಕಾರ್ ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…