ಆಳಂದ: ಶಾಸಕ ಸುಭಾಷ ಗುತ್ತೇದಾರ ಬೆಂಬಲಿತ ಕಬ್ಬು ಬೆಳೆಗಾರ ಹೋರಾಟಕ್ಕೆ ಕೊನೆಗೂ ಮಣಿದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಇದೇ ಮೊದಲು ಬಾರಿಗೆ ಪ್ರತಿಟನ್ ಕಬ್ಬಿಗೆ 150 ರೂಪಾಯಿ ಹೆಚ್ಚಿನ ಬೆಲೆ ನೀಡುವ ಭರವಸೆ ನೀಡಿದ್ದರಿಂದ ಗುರುವಾರದಂದು ಸತ್ಯಾಗ್ರಹ ತಾತ್ಕಾಲಿಕವಾಗಿ ವಾಪಸ್ ಪಡೆಯಲಾಯಿತು.
ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆ ನೀಡಬೇಕು ಎಂದು ಕಾರ್ಖಾನೆ ಮುಂದೆ ಕಬ್ಬು ಬೆಳೆಗಾರರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬೇಡಿಕೆಗೆ 2450 ರೂಪಾಯಿ ನೀಡುವ ಕುರಿತು ಆಡಳಿತ ಮಂಡಳಿ ಭರವಸೆ ಗುರುವಾರ ನೀಡಿದೆ.
ಪ್ರತಿಟನ್ ಕಬ್ಬಿಗೆ 2500 ರೂಪಾಯಿ ನೀಡಬೇಕು ಎಂದು ಕಳೆದ ನ. 2ರಿಂದ ಸತ್ಯಾಗ್ರಹ ನಡೆದಿತು. ಆದರೆ ಕಾರ್ಖಾನೆ ಆಡಳಿತ ಮಂಡಳಿ ಇದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಶಾಸಕ ಗುತ್ತೇದಾರ ಅವರು ಸತ್ಯಾಗ್ರಹಕ್ಕೆ ಬೆಂಬಲಿಸಿದ ಪರಿಣಾಮ ಹೋರಾಟ ಬುಧವಾರ ತೀವ್ರ ಸ್ವರೂಪ ಪಡೆದುಕೊಂಡಿತು.
ಈ ಮುಂಚೆ ಕಾರ್ಖಾನೆ 2300 ರೂಪಾಯಿ ನೀಡಲು ಮುಂದಾಗಿತ್ತು. ಒಪ್ಪದ ಬೆಳೆಗಾರರು ಈ ನಡುವೆ ಸತ್ಯಾಗ್ರಹ ಮುಂದುವರೆಸಿದ ಕಬ್ಬು ಬೆಳೆಗಾರರು ಪಟ್ಟುಹಿಡಿದ 2500 ರೂಪಾಯಿ ಕೊಡಬೇಕು ಎಂದು ಒತ್ತಾಯಿಸಿದಾಗ ಕೊನೆಗೂ 2400 ರೂಪಾಯಿ ಕೊಡುವುದಾಗಿ ಹೇಳಿತ್ತು. ಇದಕ್ಕೆ ಒಪ್ಪದೇ ರೈತರು ಸತ್ಯಾಗ್ರಹ ಮತ್ತಷ್ಟು ಪ್ರಕರಗೊಳಿಸಿದ್ದರಿಂದ ಅಂತಿಮವಾಗಿ 2450 ರೂಪಾಯಿ ಕೊಡಲು ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿಕೊಂಡಿದ್ದು, ಅಲ್ಲದೆ, ಮುಂದೆ ಸರ್ಕಾರ ನಿಗದಿ ಪಡಿಸುವ ದರವನ್ನು ಬೆಳೆಗಾರರಿಗೆ ಕೊಡಲಾಗುವುದು ಎಂದು ತನ್ನ ನಿರ್ಧಾರ ಪ್ರಕಟಿಸಿದ್ದರಿಂದ ಅಂತು ಇಂತು ಶಾಸಕರ ಬೆಂಬಲಿತ ಸತ್ಯಾಗ್ರಹ ಅಂತ್ಯಕಂಡಿತು.
ರೈತರ ಹೋರಾಟದಿಂದಾಗಿ 150 ರೂಪಾಯಿ ಪ್ರತಿಟನ್‍ಗೆ ದೊರೆದಂತಾಗಿದೆ. ಗುರುವಾರ ಸಂಜೆಯ ವೇಳೆ ಆಡಳಿತ ಮಂಡಳಿಯ ಉಪಾಧ್ಯಕ್ಷ ದೇವರಾಜಲು ಹಾಗೂ ಶಾಸಕ ಸುಭಾಷ ಗುತ್ತೇದಾರ ಮತ್ತು ಕಬ್ಬು ಬೆಳೆಗಾರ ಮುಖಂಡರ ಎದುರು ಸತ್ಯಾಗ್ರಹ ಸ್ಥಳದಲ್ಲಿ ಉಪಾಧ್ಯಕ್ಷರು ಚರ್ಚಿಸಿ 2450 ರೂಪಾಯಿ ಪ್ರತಿಟನ್ ಕಬ್ಬಿಗೆ ನೀಡುವ ನಿರ್ಧಾರವನ್ನು ಅವರು ಪ್ರಕಟಿಸಿದರು.
ಇದರಿಂದಾಗಿ ಕಾರ್ಖಾನೆ ಆರಂಭಿಸಿ ಎಂದು ಸತ್ಯಾಗ್ರಹ ವಾಪಸ್ ಪಡೆದ ರೈತರು ಶಾಸಕರಿಗೆ ಸಿಹಿ ತಿನ್ನಿಸಿದರು ಅಲ್ಲದೆ, ಪರಸ್ಪರ ಸಿಹಿ ತಿಂದು ವಿಜಯೋತ್ಸವ ಆಚರಿಸಿದರು. ಇದು ಶಾಸಕರ ಹೋರಾಟಕ್ಕೆ ಸಂದಜಯ ಎಂದೇ ಬೆಳೆಗಾರರು ಹೇಳಿಕೊಂಡರು.
ಮುಖಂಡರಾದ ರಾಜಶೇಖರ ಮಲಶೆಟ್ಟಿ, ಸಹಕಾರಿ ಧುರೀಣ ಮಹಾಂತಪ್ಪ ಆಲೂರೆ ಸರಸಂಬಾ, ಅನಂತರಾಜ ಸಾಹು, ಮಲ್ಲಿಕಾರ್ಜುನ ಕಂದಗೂಳೆ, ಚಂದ್ರಶೇಖರ ಸಾಹು, ಅಶೋಕ ಗುತ್ತೇದಾರ, ಆನಂದ ಪಾಟೀಲ ಕೊರಳ್ಳಿ, ಮಲ್ಲಿಕಾರ್ಜುನ ತಡಕಲ, ಅಶೋಕ ಹತ್ತರಕಿ, ಗುರುಶಾಂತ ಪಾಟೀಲ ನಿಂಬಾಳ, ಸಂತೋಷ ಹಾದಿಮನಿ, ಪ್ರಭಾಕರ ರಾಮಜಿ, ಶಿವಲಿಂಗಪ್ಪ ಜಮಾದಾರ, ಲಿಂಗರಾಜ ಉಡಗಿ, ಮಹಾಂತೇಶ ಶಿರೂರ, ಗಣೇಶ ಓನಮಶೆಟ್ಟಿ, ಪ್ರಭು ಸರಸಂಬಿ, ಗುರುನಾಥ ಪಾಟೀಲ, ಆದಿನಾಥ ಹೀರಾ, ಮಹಾಂತೇಶ ಪಾಟೀಲ, ಸುರೇಶ ನಂದೇಣಿ, ಶಂಕರ ಸೋಮಾ, ಚಂದ್ರಶೇಖರ ಸಾಹು, ಶರಣು ಕುಮಸಿ, ನಾಗರಾಜ ಶೇಗಜಿ, ಶರಣಗೌಡ ದೇವಂತಗಿ, ಪರಮೇಶ್ವರ ನಾಯ್ಕೋಡಿ, ಸೈನಿಕ ರಾಠೋಡ, ಧರೇಪ್ಪ ಜಕಾಪೂರೆ, ದಯಾನಂದ ಚೌಲ ಸೇರಿದಂತೆ ಕಲಬುರಗಿ, ಅಫಜಲಪೂರ, ಕಮಲಾಪೂರ, ಆಳಂದ ತಾಲೂಕಿನ ರೈತರು ಇದ್ದರು.
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…