ಬಿಸಿ ಬಿಸಿ ಸುದ್ದಿ

ದೂರದರ್ಶನ ಕೇಂದ್ರದಿಂದ ಸಲಹಾ ಸಂಪಾದಕರು, ಬಹು ಮಾಧ್ಯಮ ಪತ್ರಕರ್ತರ ಹುದ್ದಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಸಲಹಾ ಸಂಪಾದಕರು (Consulting Editor), ಬಹುಮಾಧ್ಯಮ ಪತ್ರಕರ್ತರು (Multi Media Journalist) ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಸಲಹಾ ಸಂಪಾದಕರು – (Consulting Editor) ಈ ಹುದ್ದೆಯು ಸಂಪೂರ್ಣವಾಗಿ ಗುತ್ತಿಗೆ ಆಧಾರವಾಗಿದ್ದು, ಪೂರ್ಣ ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸಲಹಾ ಸಂಪಾದಕರು – (Consulting Editor)  ಹುದ್ದೆಗೆ ವಿದ್ಯಾರ್ಹತೆ – ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪೆÇ್ಲೀಮಾ ಮಾಡಿರಬೇಕು.  ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 15 ಅನುಭವವಿರಬೇಕು. ಕಡ್ಡಾಯವಾಗಿ ಕನ್ನಡ ಭಾμÉಯಲ್ಲಿ ಪರಿಣಿತಿ ಹಾಗೂ ಜ್ಞಾನ ಅವಶ್ಯಕವಾಗಿದ್ದು,  ವಯೋಮಿತಿಯು 55 ವರ್ಷದೊಳಗಿರಬೇಕು. ಈ ಹುದ್ದೆಯ ಗುತ್ತಿಗೆ ಅವಧಿ 2 ವರ್ಷಗಳಾಗಿದ್ದು, ಪ್ರತಿ ತಿಂಗಳಿಗೆ ರೂ. 1,25,000/- ಸಂಭಾವನೆ ನೀಡಲಾಗುವುದು.

ಬಹು ಮಾಧ್ಯಮ ಪತ್ರಕರ್ತರು – (Multi Media Journalist) ಬಹು ಮಾಧ್ಯಮ ಪತ್ರಕರ್ತರಾಗಿ ಬೆಂಗಳೂರು, ರಾಯಚೂರು, ರಾಮನಗರ, ಮೈಸೂರು, ಕಲಬುರಗಿ, ಧಾರವಾಡ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಪೂರ್ಣ ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು.

ಈ ಹುದ್ದೆಗಳಿಗೆ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಡಿಪೆÇ್ಲೀಮಾ ಮಾಡಿರಬೇಕು. ಕಡ್ಡಾಯವಾಗಿ ಕನ್ನಡ ಭಾμÉಯಲ್ಲಿ ಪರಿಣಿತಿ ಹಾಗೂ ಜ್ಞಾನ ಹೊಂದಿರಬೇಕು. ವರದಿಗಾರಿಕೆಯಲ್ಲಿ 3 ವರ್ಷ ಅನುಭವ ಹೊಂದಿರಬೇಕು. ವಯೋಮಿತಿ 24 ರಿಂದ 40 ವರ್ಷದೊಳಗಿರಬೇಕು. ಈ ಹುದ್ದೆಯ ಗುತ್ತಿಗೆ ಅವಧಿ 2 ವರ್ಷಗಳಾಗಿದ್ದು,  ಪ್ರತಿ ತಿಂಗಳಿಗೆ ರೂ. 30,000/- ಸಂಭಾವನೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ನವೆಂಬರ್ 23ಕೊನೆಯ ದಿನಾಂಕವಾಗಿದ್ದು, ಆಕಾಂಕ್ಷಿಗಳುhttps://applications.prasarbharati.org ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ https://prasarbharati.gov.in/pbvacancies/  ಜಾಲತಾಣವನ್ನು ವೀಕ್ಷಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago