ಸುರಪುರ: ಹುಣಸಗಿ ತಾಲ್ಲೂಕಿನ ಬೊಮ್ಮಗುಡ್ಡ ಗ್ರಾಮದ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ತಮ್ಮ ಗೃಹ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲರಿಗು ಪಕ್ಷದ ಶಾಲು ಹಾಕಿ ಬರಮಾಡಿಕೊಂಡು ಮಾತನಾಡಿದ ಮಾಜಿ ಶಾಸಕರು,ನಿಮ್ಮ ಕಷ್ಟಗಳಿಗೆ ನಾವು ನಿಮ್ಮ ಜೊತೆ ಇರುತ್ತೇವೆ ಹಾಗೂ ಕ್ಷೇತ್ರದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತರಬೇಕು ಇದಕ್ಕೆ ತಾಲ್ಲೂಕಿನ ಹಿರಿಯ ಕಿರಿಯ ಮುಖಂಡರುಗಳು ಪಕ್ಷದ ಕಾರ್ಯಕರ್ತರು ಒಗ್ಗೂಡಿ ದುಡಿಯಬೇಕು ಎಂದು ಹೇಳಿದರು.
ನಂತರ ಮುಖಂಡರಾದ ಯಮನಪ್ಪ ಗುತ್ತೇದಾರ, ಸಂಗಪ್ಪ ಪೀರಪ್ಪ ಹರಿಜನ, ವೆಂಕಟೇಶ ಅಂಬಿಗೆರ, ಪರಮಣ್ಣ ಹರಿಜನ, ರಾಮಣ್ಣ ಹರಿಜನ, ಶರಣಪ್ಪ ಹರಿಜನ, ಯಂಕಪ್ಪ ಹರಿಜನ, ಶೇಕಪ್ಪ ಹರಿಜನ, ರಂಗಪ್ಪ ಹರಿಜನ, ನಂದಪ್ಪ ಹರಿಜನ(ರಾಜವಾಳ), ಬಸಪ್ಪ ಹರಿಜನ(ರಾಜವಾಳ), ಹಣಮಂತ್ರಾಯ ಹರಿಜನ, ಪರಶುರಾಮ ಹರಿಜನ ಹಾಗೂ ಇತರರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ವಿಠ್ಹಲ್ ಯಾದವ, ವೆಂಕೋಬ ಸಾಹುಕಾರ ಪ್ರಥಮ ದರ್ಜೆ ಗುತ್ತೇದಾರರು, ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ನಿಂಗರಾಜ ಬಾಚಿಮಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರವಿ ಸಾಹುಕಾರ ಆಲ್ದಾಳ, ಅಂಬ್ರೇಶಗೌಡ ಕೋನ್ಹಾಳ, ಪರಮಣ್ಣಗೌಡ ಕೋನ್ಹಾಳ, ಈರಣ್ಣಗೌಡ ಕೋನ್ಹಾಳ, ಪರಮಣ್ಣ ಎಪಿಎಮ್‍ಸಿ ಶಾಂತಪೂರ, ಭೀಮರಡ್ಡಿ ಬಂಡಿ ಬೊಮ್ಮಗುಡ್ಡ, ನಿಜಪ್ಪ ಬಿರದಾರ ಬೋಮ್ಮಗುಡ್ಡ, ಹಣಮಗೌಡ ಬೈಲಕುಂಟಿ, ಚಂದ್ರಕಾಂತ ಹೆಬ್ಬಾಳ(ಕೆ), ಕೃಷ್ಣ ಹಾವಿನ್ ಬಾದ್ಯಾಪೂರ, ಭೀಮಣ್ಣ ಕೆಂಗೂರಿ ಕವಡಿಮಟ್ಟಿ, ರಾಯಪ್ಪ ಕೊಡೇಕಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…