ಶಹಾಬಾದ: ಶರಣರ ಕಾಯಕ ಮತ್ತು ದಾಸೋಹ ತತ್ವದ ಅರಿವು, ಆಚರಣೆ ಎಲ್ಲ ಜನರಲ್ಲೂ ಬಂದರೆ ಜೀವನದಲ್ಲಿ
ಪರಮಾನಂದವನ್ನು ಅನುಭವಿಸಲು ಸಾಧ್ಯ ರಾವೂರ ಮಠದ ಸಿದ್ಧಲಿಂಗ ದೇವರು ಹೇಳಿದರು.
ಅವರು ಸೋಮವಾರ ಭಂಕೂರಿನ ಬಸವ ಸಮಿತಿಯಲ್ಲಿ ಬುತ್ತಿ ಬಸವಲಿಂಗ ಪ್ರತಿಷ್ಠಾಪನದ ಬೆಳ್ಳಿ ಮಹೋತ್ಸವದ ಪ್ರಯುಕ್ತ ವಚನ ಸಾಹಿತ್ಯದಲ್ಲಿ ಆಧ್ಯಾತ್ಮ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ಸುಖವನ್ನು ದುಡ್ಡಿನಲ್ಲಿ,ಆಸ್ತಿಯಲ್ಲಿ, ಬಂಗಾರದಲ್ಲಿ, ದೊಡ್ಡ ದೊಡ್ಡ ಬಂಗಲೆಗಳಲ್ಲ್ಲಿ, ವಾಹನಗಳಲ್ಲಿ ಹುಡುಕುತ್ತಿದ್ದಾನೆ.ಆದರೆ ನಿಜವಾದ ಸುಖವೆಂಬುದು ಶರಣರ ಚಿಂತನೆಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡು ಸ್ವಾರ್ಥ, ಸಂಕುಚಿತ ಭಾವನೆ ಮತ್ತು ಅಹಂಕಾರವನ್ನು ತ್ಯಜಿಸಿ ನನ್ನ ದುಡಿಮೆಯ ಆದಾಯ ನನಗೆ ಹೇಗೋ ಹಾಗೇ ಸಮಾಜಕ್ಕೂ ಸಲ್ಲುವಂತಹುದು ಎನ್ನುವ ಸದ್ಭಾವನೆ ಬಂದರೆ ಅದೇ ದಾಸೋಹ. ದಾಸೋಹ ಎಂದರೇನೇ ಅಹಂಕಾರ ನಿರಶನ, ಸ್ವಾರ್ಥ ತ್ಯಾಗ, ವಿಶಾಲ ಮನೋಭಾವ. ಈ ನೆಲೆಯಲ್ಲಿ ಕಾಯಕ ಮತ್ತು ದಾಸೋಹ ತತ್ವಗಳು ಅನುμÁ್ಠನದಲ್ಲಿ ಅಳವಟ್ಟರೆ ಬಾಹ್ಯ ಬದುಕು ಶ್ರೀಮಂತವಾಗುವುದು ಎಂದರು.
ಶಿರಗುಪ್ಪಾದ ಬಸವ ತತ್ವ ಚಿಂತಕ ಬಸವರಾಜ ವೆಂಕಾಟಾಪೂರ ಶರಣರು ಮಾತನಾಡಿ, ಸುಮಾರು 40 ವರ್ಷಗಳಿಂದ ಬಸವಾದಿ ಶರಣರ ತತ್ವವನ್ನು ನಾಡಿನೆಲ್ಲೆಡೆ ಪಸರಿಸುವ ಹಾಗೂ ಶಿಕ್ಷಣ ದಾಸೋಹ ಮಾಡುವ ಮೂಲಕ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಊಣಬಡಿಸುತ್ತಿರುವ ಸಂಸ್ಥೆಯೆಂದರೆ ಬಸವ ಸಮಿತಿ ಎಂದು ಶ್ಲಾಘಿಸಿದರು.
ಉದ್ಯಮಿಗಳಾದ ಶರಣಬಸಪ್ಪ ನಂದಿ ಹಾಗೂ ಶಿವರಾಜ ಪಾರಾ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಸೂರ್ಯಕಾಂತ ಕೋಬಾಳ, ಪತ್ರಕರ್ತ ವಾಸುದೇವ ಚವ್ಹಾಣ ವೇದಿಕೆಯ ಮೇಲಿದ್ದರು. ಪ್ರವಚನಕಾರ ಸಿದ್ಧೇಶ್ವರ ವಸ್ತ್ರದ್, ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮಾದುಗೋಳಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಮೃತ ಮಾನಕರ್ ನಿರೂಪಿಸಿದರು, ಅಮರಪ್ಪ ಹೀರಾಳ ಸ್ವಾಗತಿಸಿದರು, ರೇವಣಸಿದ್ದಪ್ಪ ಮುಸ್ತಾರಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…