ಬಿಸಿ ಬಿಸಿ ಸುದ್ದಿ

ಭಾಲ್ಕಿ- ಬಸವಕಲ್ಯಾಣವರೆಗೆ ಕುಂಬಾರ ಗುಂಡಯ್ಯ ಜ್ಯೋತಿ ಯಾತ್ರೆ 25 ಕ್ಕೆ

ಭಾಲ್ಕಿ: ವಿಶ್ವಬಸವಧರ್ಮ ಟ್ರಸ್ಟ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನಡೆಯುವ 43ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವ-2022 ನಿಮಿತ್ಯ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯ ಶರಣರ ಸ್ಥಳಗಳಿಂದ ಬಸವಕಲ್ಯಾಣಕ್ಕೆ ವಿವಿಧ ಶರಣರ ಜ್ಯೋತಿ ಯಾತ್ರೆಯನ್ನು ನಡೆಯಲಿದೆ. ಅದಕ್ಕಾಗಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಭಾಲ್ಕಿಯ ಮಹಾ ಶರಣ ಕುಂಬಾರ ಗುಂಡಯ್ಯನವರ ಸ್ಮಾರಕಕ್ಕೆ ಆಗಮಿಸಿ, ಭಾಲ್ಕಿಯ ಬಸವಭಕ್ತರಿಗೆ ಕುಂಬಾರ ಗುಂಡಯ್ಯ ಜ್ಯೋತಿಯನ್ನು ನೀಡಿದರು.

ಈ ಸಮಾರಂಭದ ಸಾನಿಧ್ಯ ವಹಿಸಿದ ಪೂಜ್ಯರು, ಕುಂಬಾರ ಗುಂಡಯ್ಯನವರು 12ನೇ ಶತಮಾನದ ಬಸವ ಸಮಕಾಲೀನ ಮಹಾಶರಣರು ಆಗಿದ್ದರು. ಅವರ ವಾಸ್ತವ್ಯದಿಂದ ಪಾವನವಾಗಿರುವ ಭೂಮಿ ಭಾಲ್ಕಿಯಾಗಿದೆ. 12ನೇ ಶತಮಾನದಲ್ಲಿ ಗುಂಡಯ್ಯನವರು ಕಲ್ಯಾಣಕ್ಕೆ ಆಗಮಿಸಿ, ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪದಲ್ಲಿ ಭಾಗಿಯಾಗಿದ್ದರು. ಈ ಪರಂಪರೆಯನ್ನು ಮುಂದೆ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಮತ್ತು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮುಂದುವರೆಸುತ್ತಾ ಬಂದಿದ್ದಾರೆ. ಬಸವಕಲ್ಯಾಣದಲ್ಲಿ ನಡೆಯುವ ಅನುಭವಮಂಟಪ ಉತ್ಸವಕ್ಕೆ ಭಾಲ್ಕಿಯಿಂದ ಕುಂಬಾರ ಗುಂಡಯ್ಯನವರ ಜ್ಯೋತಿ ಒಯ್ಯುವುದು ಅತ್ಯಂತ ಪುಣ್ಯದ ಕೆಲಸವಾಗಿದೆ.

ಅದಕ್ಕಾಗಿ ಎಲ್ಲಾ ಬಸವಭಕ್ತರು 25 ರಂದು ಮಧ್ಯಾಹ್ನ 12-00 ಗಂಟೆಗೆ ಈ ಜ್ಯೋತಿಯನ್ನು ಕುಂಭೇಶ್ವರ ದೇವಸ್ಥಾನದಿಂದ ತೆಗೆದುಕೊಂಡು ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಬೇಕು. ಅಲ್ಲಿ ಬೇರೆ ಬೇರೆ ಶರಣರ ಸ್ಥಳಗಳಿಂದ ಬರುವ ಎಲ್ಲಾ ಜ್ಯೋತಿಗಳಿಗೆ ಮತ್ತು ಮಹಾರಾಷ್ಟ್ರದ ಕರ್ನಾಟಕದಿಂದ ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವ ಎಲ್ಲಾ ಬಸವಭಕ್ತರಿಗೆ ಸ್ವಾಗತವನ್ನು ಕೋರಲಾಗುವುದು ಎಂದು ನುಡಿದರು.

ಸಮಾರಂಭದಲ್ಲಿ ಭಾಲ್ಕಿಯ ಗಣ್ಯರಾದ ಶಿವು ಲೋಖಂಡೆ, ಶಶಿಧರ ಕೋಸಂಬೆ, ಜೈಹಿಂದ ಕುಂಬಾರ, ವಿಶಾಲ ಪುರಿ, ಬಸವರಾಜ ಮರೆ, ಮಲ್ಲಿಕಾರ್ಜುನ ಪಾವಡಶೆಟ್ಟೆ ಪ್ರೇಮಲಾ ತೊಂಡಾರೆ, ಲಕ್ಷ್ಮೀ ಸಂಗಮೆ, ಓಂಕಾರ ಶರಣರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago