ಬಿಸಿ ಬಿಸಿ ಸುದ್ದಿ

ಸತೀಶ ಜಾರಕಿಹೊಳಿ ತೇಜೋವಧೆ ವಿರೋಧಿಸಿ ದಲಿತ ಸೇನೆ ಪ್ರತಿಭಟನೆ ನಾಳೆ

ಹಿಂದೂ ಪದಕ್ಕೆ ಪರ್ಶಿಯನ್ ಭಾಷೆಯಲ್ಲಿ ಕಳ್ಳ, ಹಾದಿ ದರೋಡೆಕೋರ, ಗುಲಾಮ ಎಂಬರ್ಥವಿದ್ದು, 10ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಇರಾನ್ ದೇಶದ ಪ್ರಸಿದ್ಧ ವಿದ್ವಾಂಸ ಅಬುರೆಹಾನ್ ಮಹ್ಮದ್ ಇಟ್ನೋ ಅಹ್ಮದ್ ಆಲ್ ಬುರಾನಿ ಎಂಬುವವರು ಹಿಂದು ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ ಬಳಸಿದರು. ಬೇಕಿದ್ದರೆ ಈ ಬಗ್ಗೆ ಚರ್ಚೆಯಾಗಲಿ. -ಹಣಮಂತ ಯಳಸಂಗಿ, ರಾಜ್ಯಾಧ್ಯಕ್ಷ ದಲಿತ ಸೇನೆ.

ಕಲಬುರಗಿ: ವೈಚಾರಿಕ ಚಿಂತಕ, ಮೂಢನಂಬಿಕೆ ವಿರೋಧಿ, ಚಳವಳಿಯ ರೂವಾರಿ, ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ ಬೆಂಬಲಿಸಿ, ಹಿಂದೂ ಪದದ ವಿಶ್ಲೇಷಣೆ, ವಿಮರ್ಶೆಗೆ ಆಗ್ರಹಿಸಿ ಜಾರಕಿಹೊಳಿಯವರ ತೇಜೋವಧೆ ಖಂಡಿಸಿ ನ.19ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಜಿ. ಯಳಸಂಗಿ ತಿಳಿಸಿದರು.

ನಗರದ ಜಗತ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಸಹಸ್ರರು ಜನರು ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸತೀಶ ಜಾರಕಿಹೊಳಿ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಬೇಕಿದ್ದರೆ ಹಿಂದೂ ಪದದ ಅರ್ಥ ಕುರಿತು ಚರ್ಚೆ ನಡೆಯಲಿ. ಆದರೆ ಅವರ ಈ ಹೇಳಿಕೆಯನ್ನೇ ಬಿಜೆಪಿಯವರು ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಸತೀಶ ಅವರ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದರು.

ಸನಾತನ, ಸಂಘ ಪರಿವಾರದವರು ಹಾಗೂ ನಕಲಿ ಹಿಂದುತ್ವವಾದಿಗಳು ಸತೀಶ ಜಾರಕಿಹೊಳಿ ಅವರನ್ನು ಹಗುರವಾಗಿ ತಿಳಿದುಕೊಳ್ಳಬಾರದು. ಅವರು ಈ ನಾಡಿನ ಬಹುಜನರ ಶಕ್ತಿಯಾಗಿದ್ದಾರೆ. ಶೋಷಿತರ ಧ್ವನಿಯಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಕನಸಿನ ನಾಡು ಕಟ್ಟಲು ಶ್ರಮಿಸುತ್ತಿದ್ದಾರೆ. ಅಂತಹ ಪ್ರಗತಿಪರ ಧೋರಣೆಯ ವ್ಯಕ್ತಿತ್ವ ಹೊಂದಿರುವ ಸತೀಶ ಜಾರಕಿಹೊಳಿಯವರನ್ನು ಅವಮಾನಗೊಳಿಸಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಪ್ಪ ಹೊಸಮನಿ, ಶಿವಲಿಂಗ ಚಲಗೇರಿ, ಅಲ್ಲಮಪ್ರಭು ನಿಂಬರ್ಗಾ, ಮಂಜುನಾಥ ಭಂಡಾರಿ, ಅಶ್ರಪ್ ಅಲಿ, ಕಪಿಲ್ ವಾಲಿ, ಮೋಹನ ಚಿನ್ನಾ, ಸಂತೋಷ ಪಾಳಾ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago