ಅಂಕಣ ಬರಹ

ಸಮರ್ಪಣೆ-ಸಂತೃಪ್ತಿಗಳು ಬದುಕಿನ ಶ್ರೇಯಸ್ಸು

ಸಮರ್ಪಣೆ ಮತ್ತು ಸಂತೃಪ್ತಿಗಳು ಬದುಕಿನ ಶ್ರೇಯಸ್ಸುಗಳು ಶರಣರ ಉಪದೇಶವಾಗಿದ್ದವು ಎಂದು ಸರಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕರಾದ ಡಾ.ಕಲ್ಯಾಣರಾವ ಪಾಟೀಲ ತಿಳಿಸಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

ಶರಣಬಸವರು ಕಲಬುರ್ಗಿ ಸಮೀಪದದ ಅವರಾದಿ ಗ್ರಾಮಕ್ಕೆ ಹೋಗುವಾಗ ಗಿಡದೊಳಗಿರುವ ಪಿಶಾಚಿ ಚೀರುತ್ತಾ ಶರಣರ ಮುಂದೆ ನಿಂತಿತು. ಆಗ ಶರಣರು ಅದನ್ನು ನೋಡಿದಾಗ ಅದರೊಗಳಿರುವ ಕೆಟ್ಟಗುಣಗಳು ಅಳಿದು ಹೋಗುತ್ತವೆ. ಶರಣರು ಅದಕ್ಕೆ ’ ಯಾರಿಗೂ ಕಾಟ ಕೊಡಬೇಡ ಹಿಂಸಿಸಬೇಡ’ ಎಂದು ಹೇಳಿ ದಿನಾಲು ’ ಓಂನಮಃ ಶಿವಾಯ’ ಎಂಬ ಷಡಕ್ಷರಿ ಮಂತ್ರ ಎನ್ನಲು ಹೇಳುತ್ತಾರೆ. ಅದು ಮುಂದೆ ಬದಲಾಗುತ್ತದೆ. ಅವರಾದಿ ಗ್ರಾಮದಲ್ಲಿ ಶರಣಬಸವರು ಜ್ಞಾನದಾಸೋಹ ನಡೆಸಿದರೆ ಇನ್ನೊಂದಡೆ ದಂಡರಾಯ ಶರಣರ ಅನ್ನದಾಸೋಹ. ಒಂದು ದಿನ ಭಯಂಕರ ಮಳೆ ದಾಸೋಹಕ್ಕಾಗಿ ಸಿದ್ಧಪಡಿಸುವ ಪ್ರಸಾದಕ್ಕೆ ಎಲ್ಲರ ಮನೆಯ ಕುಳ್ಳು ಕಟ್ಟಿಗೆಗಳು ಸಾಕಾಗದೇ ಹೋದವು. ಆಗ ದಂಡರಾಯ ಶರಣರು ತಮ್ಮ ಆಳುಗಳನ್ನು ಕರೆದು ಮನೆಯ ಮಾಳಿಗೆಯ ಜಂತಿಯನ್ನು ಬಿಚ್ಚಿಸಿ ಕಟ್ಟಿಗೆಯನ್ನು ಕೊಟ್ಟು ಕಳುಹಿಸುತ್ತಾರೆ. ಇದನ್ನು ಕಂಡ ಶರಣರಿಗೆ ಮನ ತುಂಬಿ ಬರುತ್ತದೆ. ಅವರಿಗೆ ಮನಃಪೂರ್ತಿ ಆಶೀರ್ವದಿಸುತ್ತಾರೆ.

ಶರಣಬಸವರು ಫರತಾಬಾದಿಗೆ ಬಂದಾಗ ಅಲ್ಲಿ ಬರಗಾಲ, ಡೋಗಿಬರ .ದನಕರುಗಳು ಲೆಕ್ಕಿಲ್ಲದೆ ಮರಣಕ್ಕೆ ತುತ್ತಾಗುತ್ತವೆ. ಇದನ್ನು ಕಂಡ ಶರಣರು ಇಷ್ಟಲಿಂಗಪೂಜೆ ನೆರವೇರಿಸುತ್ತಾರೆ. ಅವರ ಪೂಜೆ ಶಿವನಿಗೆ ಮುಟ್ಟಿತು. ಕೆಲವೇ ದಿನಗಳಲ್ಲಿ ಧಾರಕಾರ ಮಳೆಯು ಬರಲಾರಂಭಿಸಿತು. ಹಳ್ಳ ಬಾವಿಗಳೆಲ್ಲ ತುಂಬಿಕೊಂಡು ಜನರು ಪ್ರಸನ್ನಗೊಳ್ಳುತ್ತಾರೆ. ಎಲ್ಲಾ ಪ್ರಾಣಿ ಪಕ್ಷಿಗಳು ಬದುಕುಳಿಯುತ್ತವೆ. ಅವೆಲ್ಲ ಶರಣರನ್ನೇ ತಮ್ಮ ಆರಾಧ್ಯ ದೇವರೆಂದು ಪೂಜಿಸುತ್ತಾರೆ. ಕಲಬುರಗಿಯ ಆದಿದೊಡ್ಡಪ್ಪ ಶರಣರಿಗೆ ತಮ್ಮ ತಂದೆ ತಾಯಿ ಮುಂದಿನ ದಿನಗಳಲ್ಲಿ ನಿನಗೊಂದು ರತ್ನ ಸಿಗುವುದು ಅದನ್ನು ಜೋಪಾನವಾಗಿ ಕಾಯ್ದುಕೊಂಡು ಹೋಗು ಎಂದು ಹೇಳಿ ಲಿಂಗೈಕ್ಯರಾಗುತ್ತಾರೆ. ದರ್ಶನಕ್ಕೆಂದು ಬಂದ ಆದಿದೊಡ್ಡಪ್ಪರು ಶರಣರನ್ನು ನೋಡಿದ ತಕ್ಷಣವೇ ’ರತ್ನ ಸಿಕ್ಕಿತು ನನ್ನ ತಾಯಿ ಹೇಳಿದ ರತ್ನ ಸಿಕ್ಕಿತು’ ಎಂದು ಮನದಲ್ಲಿ ಭಾವಿಸಿಕೊಳ್ಳುತ್ತಾರೆ. ಹಾಗೇಯೆ ಪಾದಕ್ಕೆ ಎರಗುತ್ತಾರೆ. ಶರಣರನ್ನು ಕಲಬುರಗಿಗೆ ಕರೆದುಕೊಂಡು ಬಂದು ಜೋಪಾನವಾಗಿರಿಸಿಕೊಳ್ಳುತ್ತಾರೆ.

ಬಸವಪಟ್ಟಣದಲ್ಲಿ ಶರಣರ ಅನುಭಾವ ಕೇಳಿ ಜನರು ಸತ್ಕಾರ್ಯಗಳಲ್ಲಿ ನಿರತರಾಗುತ್ತಾರೆ. ಅವರಲ್ಲಿ ಒಬ್ಬ ಸುಮ್ಮನೆ ಶರಣರ ಶಿಷ್ಯನಂತೆ ನಟಿಸುತ್ತಿರುತ್ತಾನೆ ಅದು ಶರಣರಿಗೆ ಗೊತ್ತಾಗುತ್ತದೆ. ಅವನು ಒಂದು ದಿನ ಶರಣರ ದಾಸೋಹಕ್ಕೆ ದುಡ್ಡು ಬೇಕು ಎಂದು ಬಡವರ ಮನೆಗೆ ಹೋಗಿ ಹಣ ವಸೂಲಿ ಮಾಡುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಕೆಂದು ಯೋಚಿಸಿರುತ್ತಾನೆ. ಆಗ ಕಿಸಿಯೊಳಗಿನ ದುಡ್ಡು ಇದ್ದಲಿಯಾಗುತ್ತದೆ. ಅವನಿಗೆ ನಿಜ ಅರಿವಾಗುತ್ತದೆ. ಶರಣರಲ್ಲಿ ಬಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ ಎಂದು ಶರಣಬಸವರು ತಮ್ಮ ಜೀವನದಲ್ಲಿ ತೋರಿದ ಲೀಲೆಗಳನ್ನು ಹೇಳಿದರು.

ಡಾ.ಕಲ್ಯಾಣರಾವ ಪಾಟೀಲ, ಪ್ರಾಧ್ಯಾಪಕ
emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

2 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420