ಮಕ್ಕಳಲ್ಲಿ ಒಳ್ಳೆಯ ಬೀಜ ಬಿತ್ತುವ ಕೆಲಸ ದೇಶದಲ್ಲಿ ನಡೆಯಬೇಕು

ಶಹಾಬಾದ:ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಶ್ರೀ ಶರಣ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಮಕ್ಕಳ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಶರಣ ಕೊತ್ತಲಪ್ಪ ಮುತ್ಯಾ, ಮಕ್ಕಳು ಮುಗ್ಧರು ,ಅಮಾಯಕರು ,ನಿಷ್ಕಪಟಿ, ನಿಷ್ಕಳಂಕ ಇತ್ಯಾದಿ ಮೈ ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ. ಇಂಥ ಮನಸುಗಳಿಗೆ ಒಳ್ಳೆಯ ಬೀಜ ಬಿತ್ತುವ ಕೆಲಸ ದೇಶದಲ್ಲಿ ನಡೆಯಬೇಕು ಅಂದಾಗ ದೇಶವನ್ನು ಸುಭದ್ರವಾಗಿ ಕಟ್ಟಬಹುದು. ಇಂದಿನ ಮಕ್ಕಳೇ ನಾಳಿನ ಸತ್ ಪ್ರಜೆಗಳು ಆಗುವುದರಿಂದ ಆಳುವ ಸರ್ಕಾರಗಳು ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಭರಿತ ಹಾಗೂ ವೈಜ್ಞಾನಿಕ ಮನೋಭಾವವುಳ್ಳ ಒಂದು ವಾತಾವರಣ ಸೃಷ್ಟಿಸಬೇಕು ಎಂದರು. ಅಲ್ಲದೆ ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಅವರು ಭಾರತವನ್ನು ಕೃಷಿ, ಕೈಗಾರಿಕೆ, ಸಾರಿಗೆ, ಶಿಕ್ಷಣ ,ನೀರಾವರಿ ಇತ್ಯಾದಿ ಕ್ಷೇತ್ರಗಳಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿ ತರುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ನಾಂದಿ ಹಾಡಿದರು.

ಇಂತಹ ದೂರ ದೃಷ್ಟಿ ಮುತ್ಸದಿ ರಾಜಕೀಯ ನಾಯಕ ಅಗರ್ಭ ಶ್ರೀಮಂತ ಇದ್ದರು ದೇಶಕ್ಕಾಗಿ ಸುಮಾರು 16 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವುದು ನಮಗಾಗಿ ಅನ್ನುವುದು ವಿದ್ಯಾರ್ಥಿಗಳು ಮನ ಗಾಣಬೇಕು . ದೇಶವನ್ನು ಬಡತನ ,ಅನಕ್ಷರತೆ, ವಲಸೆ , ಇತ್ಯಾದಿ ಸಮಸ್ಯೆಗಳಿಂದ ಭಾರತವನ್ನು ಪಾರ ಮಾಡಿದ ಮಹನಾಯಕರಾಗಿದ್ದಾರೆ. ಬೃಹತ್ ನಿರಾವರಿ ಯೋಜನೆಗಳು, ಮಹಾ ರತ್ನ ಕಂಪನಿಗಳು, ಐಐಟಿ,ಐಐಎಂ, ಇವರ ಕಾಲದಲ್ಲಿ ನಿರ್ಮಾಣವಾದವು ಎನ್ನುವುದನ್ನು ವಿದ್ಯಾರ್ಥಿಗಳು ಮನದಟ್ಟ ಮಾಡಿಕೊಳ್ಳಬೇಕು.

ನಿವೃತ್ತ ಶಿಕ್ಷಕ ಭೀಮಾಶಂಕರ ಮರಕಲ್ ಮಾತನಾಡಿ, ಭಾರತವನ್ನು ಸರ್ವಪಥದಲ್ಲಿ ಮುನ್ನಡೆಸುವುದರ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಂಚಶೀಲ ತತ್ವದ ಮೂಲಕ ಭಾರತಕ್ಕೆ ತನ್ನದೇ ಆದ ಸ್ಥಾನವನ್ನು ತಂದುಕೊಟ್ಟ ಮಹಾನ್ ನಾಯಕರಾಗಿದ್ದಾರೆ .ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ನಾಯಕರಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸತತ ಪ್ರಯತ್ನದ ಮೂಲಕ ಮುಂದೆ ಬರಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಅದು ನಮಗೆ ಹೆಮ್ಮೆ ತಂದು ಕೊಡುತ್ತದೆ ಎಂದರು. ಮಕ್ಕಳು ಈ ನಿಟ್ಟಿನಲ್ಲಿ ಜೀವನದಲ್ಲಿ ಕಾಯಕ ಮನೋಭಾವ ಮೈಗೂಡಿಸಿಕೊಂಡು ದುಶ್ಚಟಗಳಿಂದ ದೂರ ಇದ್ದು ಸತತ ಅಭ್ಯಾಸದಲ್ಲಿ ನಿರತನಾದಾಗ ಮಾತ್ರ ಹೆಮ್ಮೆಪಡುವ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದರು.

ಶಿವಾನಂದ ಪಾಟೀಲ ಪೇಠಸಿರೂರ, ಮುಖ್ಯಗುರುಮಾತೆ ರಾಜಶ್ರೀ.ಬಿ.ಇಟಗಿ,ರೇವಣಸಿದ್ದಪ್ಪ ಕೆಲ್ಲೂರ್ ವೇದಿಕೆಯ ಮೇಲಿದ್ದರು.ಶಿಕ್ಷಕರು ಹಾಗೂ ಶಾಲಾ ಮಕ್ಕಳು ಇದ್ದರು. ಇದೇ ಸಂದರ್ಭದಲ್ಲಿ ಗಂಗಾಮತ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಾಂತಮಲ್ಲ ಶಿವಭೋ, ನಿವೃತ್ತ ಶಿಕ್ಷಕ ಭೀಮಾಶಂಕೆ ಮರಕಲ್ ಹಾಗೂ ಜೇವರ್ಗಿಯ ಎಎಸ್‍ಐ ತಿಮ್ಮಣ್ಣ ಮರಕಲ್ ಅವರನ್ನು ಸನ್ಮಾನಿಸಲಾಯಿತು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420