ಬಿಸಿ ಬಿಸಿ ಸುದ್ದಿ

ದಣಿವರಿಯದ ನಾಯಕನಿಗೆ ಅಭಿಮಾನಿಗಳ ಅಪ್ಪುಗೆ

ಕಾಳಗಿ: ಅಭಿವೃದ್ಧಿಯ ಹರಿಕಾರ ಎಂದು ಜನಮನ್ನಣಿ ಗಳಿಸಿರುವ ಚಿತ್ತಾಪೂರ ಮತಕ್ಷೇತ್ರದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರ 72ನೇ ಹುಟ್ಟುಹಬ್ಬದ ಪ್ರಯುಕ್ತ ಕ್ಷೇತ್ರದ ಗಣ್ಯರು ಹಾಗೂ ಅಪಾರ ಅಭಿಮಾನಿ ಬಳಗದವರು ಸೇರಿಕೊಂಡು ಸಸಿಗಳನ್ನು ನೆಡುವ ಮೂಲಕ ಮಂಗಳವಾರ  ಜನ್ಮದಿನವನ್ನು ಆಚರಣೆ ಮಾಡಿದರು.

ತಮ್ಮ ನಾಯಕನ ಮೇಲಿನ ಅಭಿಮಾನಕ್ಕಾಗಿ ಶಾಲು ಹೊದಿಸಿ, ಸಿಹಿ ತಿನಿಸಿ, ಆತ್ಮೀಯವಾಗಿ ಅಪ್ಪಿಕೊಂಡ ಅಭಿಮಾನಿಗಳು ಜ್ಯೋತಿ ಬೆಳಗಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಣೆ ಮಾಡಿದರು.

ಶಾಸಕರಾಗಿದ್ದಾಗ ಅವರು ಮಾಡಿರುವ ಜನಪರ ಕಾರ್ಯಗಳನ್ನು ಕೊಂಡಾಡಿದರು. ಕಾಳಗಿ ತಾಲೂಕು ಕೇಂದ್ರವಾಗಿಸುವ ಕಾರ್ಯದಲ್ಲಿ ಪಟ್ಟಿರುವ ಅವರ ಶ್ರಮ ಹಾಗೂ ನೂತನ ತಾಲೂಕಿಗೆ ಬೇಕಾಗುವ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕಾಗಿ ಶಾಸಕ ಡಾ.ಅವಿನಾಶ ಜಾಧವ ಜೊತೆಗೂಡಿ ನಡೆಸುತ್ತಿರುವ ಹೋರಾಟ ಅವಿಸ್ಮರಣೀಯವಾಗಿದೆ. ತಮ್ಮ ತವರಿಗೆ ಇನ್ನೂ ಸಾಕಷ್ಟು ಅನುದಾನ ತರುವುದರ ಜತೆಗೆ ಸರಕಾರಿ ಇಲಾಖೆ ಕಚೇರಿ ಕಟ್ಟಡಗಳು ಅಡಿಗಲ್ಲು ನೆರವೇರಿಸಿ ಎಂದರು.

ಪ್ರಮುಖರಾದ ಮಲ್ಲಿನಾಥ ಕೋಲಕುಂದಿ ಕೋಡ್ಲಿ, ಬಸವರಾಜ ಶಿವಗೋಳಿ, ಸಂತೋಷ ಪಾಟೀಲ ಮಂಗಲಗಿ, ಶೇಖರ ಪಾಟೀಲ, ಮಲ್ಲಿನಾಥ ಪಾಟೀಲ ಕಾಳಗಿ, ರೇವಣಸಿದ್ದಪ್ಪ ಮಾಸ್ಟರ್ ಚಿಂಚೋಳಿ(ಎಚ್), ಬಸವರಾಜ ಚಿಟ್ಟಾ ರಾಜಾಪೂರ, ವಿಜಯಕುಮಾರ ತುಪ್ಪದ ತೇಂಗಳಿ, ನಾಗರಾಜ ಗದ್ದಿ ಸೇರಿದಂತೆ ಅನೇಕರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago