ಕಲಬುರಗಿ: 20 ಸಾವಿರ ವರ್ಷಗಳಷ್ಟು ಹಿಂದೆ ಸರಿದರೆ ನಾವು ಆದಿಮಾನವನ ಯುಗಕ್ಕೆ ಹೋಗ್ತಿವಿ, ಆಗ ಬೆಂಕಿ ಇರಲಿಲ್ಲ, ಹಸಿ ಮಾಂಸ ಸೇವನೆ ಮಾಡುತ್ತಿದ್ದರು. ಆಗಿನ ಸಂವಹನ ಕಲ್ಲುಗಳ ಮೇಲೆ ಗೀಚಿದ ಚಿತ್ರಗಳೇ ಆಗಿದ್ದವು, ಚೀನಾ ಗ್ರೀಸ್, ಈಜಿಪ್ತ, ಸಿಂಧೂ ನದಿ ಪ್ರದೇಶಗಳಲ್ಲಿನ ಚಿತ್ರಲಿಪಿಯು ಆದಿಮಾನವರ ಭಾಷೆಯಾಗಿತ್ತು. ಆದ್ದರಿಂದ ಚಿತ್ರಕಲೆಯನ್ನು ಭಾಷೆಯ ತಾಯಿ ಎಂದು ಕರೆಯಬಹುದು ಎಂದು ಹಿರಿಯ ಲೇಖಕ ಸೂರ್ಯಕಾಂತ ಸೊನ್ನದ ಅಭಿಪ್ರಾಯಪಟ್ಟರು.
ನಗರದ ರಂಗಾಯಣದ ಕಲಾ ಗ್ಯಾಲರಿಯಲ್ಲಿ ಶುಕ್ರವಾರ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯೇ 9ನೇ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ 9ನೇ ರಾಷ್ಟಮಟ್ಟದ ಕಲಾ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಪ್ಪತ್ತು ಸಾವಿರ ವರ್ಷ ಇತಿಹಾಸ ಪೂರ್ವ ಸಾಂಸ್ಕøತಿಯ ಕಾಲ. ಮಣ್ಣಿನ ಪಾತ್ರೆಗಳ ಮೇಲೆ ಹಸಿರು, ನೀಲಿ, ಬಣ್ಣದ ಚಿತ್ರಗಳು, ಶಿಲಾಯುಗದಲ್ಲಿ ಗೋಡೆ, ಬಂಡೆ, ಒಳಮಾಳಿಗೆಗಳ ಮೇಲೆ ಕಾಡುಕೋಣ, ಹಿಮ ಸಾರಂಗ, ಕಾಡುಕುದುರೆ, ಕರಡಿ, ಹಂದಿಗಳ ರೇಖಾಚಿತ್ರಗಳು ಆದಿ ಮಾನವನಲ್ಲಿನ ಕಲಾ ಪ್ರಜ್ಞೆಯನ್ನು ಸೂಚಿಸುತ್ತೆವೆ ಎಂದರು.
9ನೇ ವಾರ್ಷಿಕ ಚಿತ್ರಕಲಾ ಪ್ರದರ್ಶನಕ್ಕೆ ಹಿರಿಯ ಚಿತ್ರಕಲಾವಿದ ಬಸವರಾಜ ರೇ ಉಪ್ಪಿನ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರಾಷ್ಟ ಮಟ್ಟದ ಕಲಾ ಶಿಬಿರಕ್ಕೆ ಚಾಲನೆ ನೀಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ ಮಾತನಾಡಿ, ಸರ್ಕಾರದ ಅಕಾಡೆಮಿಗಳು ನೀಡುವ ವಾರ್ಷಿಕ ಪ್ರಶಸ್ತಿಗಳಿಗೆ ಸರಿಸಮನಾಗಿ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯು ಬಹಳ ವ್ಯವಸ್ಥಿತವಾಗಿ 9 ವರ್ಷಗಳಿಂದ ನಿರಂತರವಾಗಿ ಚಿತ್ರ-ಶಿಲ್ಪಕಲಾ ಪ್ರದರ್ಶನ, ಕಲಾ ಶಿಬಿರ, ದೃಶೋಪನ್ಯಾಸ ಮತ್ತು ದೃಶ್ಯ ಬೆಳಕು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸುತ್ತಿರುವುದು ಬಹಳ ಮಹತ್ವ ಸಂಗತಿಯಾಗಿದೆ. ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಾದರಿ ಸಾಂಸ್ಕøತಿಕ ಸಂಘಟನೆ ಆಗಿದೆ ಎಂದರು.
ನವಂಬರ್ 25 ರಿಂದ 27ರವರೆಗೆ ಮೂರು ದಿನಗಳ ಕಾಲ ಚಿತ್ರಕಲಾ ಶಿಬಿರ ನಡೆದಿದ್ದು, ದೇಶದ ವಿವಿಧೆಡೆಯಿಂದ ಬಂದ 20 ಜನ ಕಲಾವಿದರು ಕಲಾಕೃತಿಗಳನ್ನು ರಚಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ನಯನಾ ಬಿ ನಿರೂಪಿಸಿ, ವಂದಿಸಿದರು. ಹಿರಿಯ ಚಿತ್ರಕಲಾವಿದ ಬಸವರಾಜ ಜಾನೆ, ಮಂಜುಳಾ ಜಾನೆ ನಾರಾಯಣ ಭೋಸಾವಳೆ, ನಾರಾಯಣ ಜೋಶಿ, ಜಿತೇಂದ್ರ ಕೊಥಳೀಕರ, ಕಲ್ಯಾಣಿ ಭಜಂತ್ರಿ, ಸತೀಶ ಕಟ್ಟಿಮನಿ ಮುಂತಾದವರು ಇದ್ದರು.
ನಗರದ ರಂಗಾಯಣದ ಕಲಾ ಗ್ಯಾಲರಿಯಲ್ಲಿ ಶುಕ್ರವಾರ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯು ಎರ್ಪಡಿಸಿದ 9ನೇ ವಾರ್ಷಿಕ ಕಲಾ ಪ್ರದರ್ಶನವನ್ನು ಹಿರಿಯ ಕಲಾವಿದ ಬಸವರಾಜ ರೇ ಉಪ್ಪಿನ ಉದ್ಘಾಟಿಸಿದರು. ಲೇಖಕ ಸೂರ್ಯಕಾಂತ ಸೊನ್ನದ, ಬಸವರಾಜ ಎಲ್ ಜಾನೆ, ಕೆ ಎಚ್ ಚನ್ನೂರ ಮತ್ತು ಡಾ. ಪರಶುರಾಮ ಪಿ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…