ಬಿಸಿ ಬಿಸಿ ಸುದ್ದಿ

ಕಲಿಯುಗದ ಜನರ ಕಲ್ಯಾಣಕ್ಕಾಗಿ ಅವತರಿಸಿದ ಬಂದ ಮೇರು ಪುರುಷ ಸಿದ್ಧಾರೂಡ

ಸಿದ್ಧಾರೂಢ ಮಠಕ್ಕೆ ಬರಲು ಒಳ್ಳೆಯ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಮತ್ತು ಮಠದ ಉನ್ನತೀಕರಣ ಅಭಿವೃದ್ಧಿಗಾಗಿ 5 ಲಕ್ಷ ರೂಪಾಯಿ ವ್ಯಯಕ್ತಿಕ ಧನ ಸಹಾಯ ಹಾಗೂ ಇಲ್ಲಿನ ಬಡಾವಣೆಯ ಜನರಿಗಾಗಿ ದೊಡ್ಡ ಸಮುದಾಯ ಭವನ ನಿರ್ಮಾಣ ಮಾಡಿ ಕೊಡುತ್ತೆನೆ. -ಬಸವರಾಜ ಮತ್ತಿಮಡು ಶಾಸಕರು.

ಶಹಾಬಾದ: ಸಿದ್ಧಾರೂಡರು ಕಲಿಯುಗದ ಜನರ ಕಲ್ಯಾಣಕ್ಕಾಗಿ ಅವತರಿಸಿದ ಬಂದ ಮೇರು ಪುರುಷ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ನಗರದ ಕೊಳಸಾ ಫೈಲ್ ಬಡಾವಣೆಯಲ್ಲಿನ ಸಿದ್ಧಾರೂಢ ಮಹಾಸ್ವಾಮಿಗಳ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆಯ ನಿಮಿತ್ತ ಆಯೋಜಿಸಲಾದ ದಿಪೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.

ಮನುಷ್ಯ ಸಂಘ ಜೀವಿ ಬದುಕುವ ಕಲೆ ಗೊತ್ತಿರುವುದು ಮಾನವ ಜೀವಿಗೆ ಮಾತ್ರ. ಕಾರಣ ಮಾನವ ಜೀವಿ ಎಲ್ಲಾ ಪ್ರಾಣಿಗಳಂತೆ ಜೀವಿಸುವುದನ್ನು ಬಿಟ್ಟು ಬದುಕು ಕಂಡುಕೊಳ್ಳಬೇಕು.ಶರಣರ, ಮಹಾತ್ಮರ, ಜ್ಞಾನಿಗಳ, ಸಂತರ ವಿಚಾರಗಳನ್ನು ಕೇಳಿ ತಿಳಿದುಕೊಂಡಾಗ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ. ಸಿದ್ಧಾರೂಡÀರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಜಾತಿಯ ಸೊಂಕು ತಗುಲದೇ ಸರ್ವರೂ ಒಂದಾಗಿ ಬಾಳಲು ಸಾಧ್ಯ.ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಜನರಲ್ಲಿ ಒಳ್ಳೆಯ ಸಂಸ್ಕಾರ ಬೆಳೆಯುತ್ತದೆ. ದಿಪೋತ್ಸವದಂತಹ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ತೊಡಗುವುದರಿಂದ ಮಾನವರ ಸಂಬಂಧಗಳು ಗಟ್ಟಿಗೊಳ್ಳುತ್ತವೆಯಲ್ಲದೇ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬಹುದೆಂದು ಹೇಳಿದರು.

ಅಕ್ಕಲಕೋಟನ ಚಿಕ್ಕ ರೇವಣಸಿದ್ಧ ಶಿವಶರಣರು ಮಾತನಾಡಿ, ಕಾರ್ತಿಕ ಅಮವಾಸ್ಯೆಯ ದಿನ ಕ್ಷೇತ್ರದಲ್ಲಿ ದೀಪಾರಾಧನೆ ನಮ್ಮ ಸಂಪ್ರದಾಯ.ಪರಶಿವನು ಜ್ಯೋತಿಯಲ್ಲಿ ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ದೀಪಕ್ಕೆ ಜಾತಿ ಇದೆ, ಬತ್ತಿಗೆ ಜಾತಿ ಇದೆ, ಎಣ್ಣೆಗೆ ಜಾತಿ ಇದೆ ಆದರೆ ಜ್ಯೋತಿಗೆ ಜಾತಿ ಇಲ್ಲ. ಈ ಬೆಳಕಿನಲ್ಲಿ ಅಜ್ಞಾನ ಕಳೆದು ಹೋಗಲಿ . ಜ್ಯೋತಿ ಬೆಳಗುವುದರ ಮೂಲಕ ಸರ್ವರಿಗೂ ಸುಖ,ಶಾಂತಿ, ಸಂಪತ್ತು ದೊರಕಲಿ ಎಂದು ಹೇಳಿದರು.

ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಮಾತನಾಡಿದರು.ಆಳಂದನ ಚನ್ನಬಸವ ಪಟ್ಟದೇವರು, ಪೀರಮ್ಮ ಪಗಲಾಪೂರ, ಕನಕಪ್ಪ ದಂಡಗುಲಕರ್, ಅರುಣ ಪಟ್ಟಣಕರ, ನಿಂಗಪ್ಪ ಹುಳಗೋಳಕರ್, ಸದಾನಂದ ಕುಂಬಾರ, ನರಸಿಂಹಲು ರಾಯಚೂರಕರ, ಮನೋಹರ ಮೇತ್ರೆ, ಮೈಲಾರಿ ದಿವೇಕರ್, ಹಣಮಂತ ಮೇತ್ರೆ,ಮರಲಿಂಗ ಮುನಗಲ,ವಿಕ್ರಂ ಮೂಲಿಮನಿ,ಮಲ್ಲೇಶಿ ಬಳಿಚಕ್ರ, ಸತೀಶ ಪ್ರಲ್ಹಾದ ಇತರರು ಇದ್ದರು.

ಮಲ್ಲಿಕಾರ್ಜುನ ಚಟನಳ್ಳಿ ಸ್ವಾಗತಿಸಿದರು, ಬಸವರಾಜ ಮುಗುಳಕೋಡ ನಿರೂಪಿಸಿದರು, ರಾಮಲಿಂಗ ಮುದ್ನಾಳ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago