ಕಲಬುರಗಿ: ಕಾಲಘಟ್ಟದಲ್ಲಿನ ಕಲಾ ಬೆಳವಣಿಗೆ ಶಿಲ್ಪ-ವಾಸ್ತು- ಚಿತ್ರಕಲೆ ಒಳಗೊಂಡಂತೆ ತನ್ನ ವೈವಿಧ್ಯಮಯವಾದ ಸೀಮೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದೃಶ್ಯಕಲಾ ಸಂಶೋಧನೆಗೆ ವಿಫುಲವಾದ ಅವಕಾಶಗಳಿವೆಂದು ಹಿರಿಯ ಕಲಾ ಇತಿಹಾಸಕಾರ ಡಾ. ಆರ್. ಎಚ್. ಕುಲಕರ್ಣಿ ಹೇಳಿದರು.
ನಗರದ ರಂಗಾಯಣದಲ್ಲಿ ಭಾನುವಾರ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ ‘ದೃಶ್ಯೋಪನ್ಯಾಸ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ‘ಕರ್ನಾಟಕದಲ್ಲಿ ದೃಶ್ಯಕಲಾ ಸಂಶೋಧನೆಯ ಆಯಾಮಾಗಳು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.
ಕರ್ನಾಟಕ ಭಾರತದ ಅವಿಭಾಜ್ಯ ಅಂಗವಾಗಿದ್ದು-ಸ್ವಾತಂತ್ರೋತ್ತರದ ಭಾμÁವಾರು ರಾಜ್ಯವಾಗಿ ಬೆಳೆದಿದೆ.
ರಾಜ್ಯವೆಂದಾಕ್ಷಣ- ಆ ಪ್ರದೇಶದ ಸ್ಥಳೀಯವಾದ ಇತಿಹಾಸ ರಚನೆಗೆ ಮತ್ತು ರಾಷ್ಟ್ರದ ವಿಶ್ವವ್ಯಾಪಿ ಗುರುತಿಸುವಿಕೆಗೆ ಪೂರಕವಾಗಿ ಸ್ಥಳೀಯ-ರಿಜಿನಲ್ ಕಲೆ-ಇತಿಹಾಸ- ಸಂಸ್ಕøತಿಗಳ ಚೌಕಟ್ಟನ್ನು ಸ್ಥಳೀಯವಾಗಿ ರಾಷ್ಟ್ರಚಿಂತನೆಯ ಹಿನ್ನೆಲೆಯಲ್ಲಿ ರೂಪಿಸುವುದು-ನಿರೂಪಿಸುವುದು ಆಯಾಪ್ರದೇಶದ ವೈಚಾರಿಕತೆಯನ್ನು ಪ್ರಚುರಪಡಿಸುತ್ತದೆ. ಸೃಜನಶೀಲತೆಯನ್ನು ಸೌಂದರ್ಯೋಪಾಸನೆಯ ಹಿನ್ನೆಲೆಯಲ್ಲಿ ಗಮನಿಸಿದಾಗ ಕಲಾ ಇತಿಹಾಸದ ಚೌಕಟ್ಟಿನಲ್ಲಿ ಕಲಾತ್ಮಕತೆಯ-ಕಲೆಯ ಬೆಳವಣಿಗೆಯನ್ನು ನೋಡುವುದು ಬಹು ಮುಖ್ಯವಾದ ಅಂಶವಾಗುತ್ತದೆ.
1990 ರ ದಶಕದೊರೆಗೂ ಕರ್ನಾಟಕ ಕಲಾ ಅಧ್ಯಯನದಲ್ಲಿ ತುಸು ವಿವರವಾಗಿ ನೋಡಿದಾಗ ಚಾಲುಕ್ಯ- ಗಂಗರ ಕಲೆ ಯಬಗ್ಗೆ ಮಾತ್ರ ಚರ್ಚಿಸುತ್ತಿದ್ದೆವು- ಹೊರತಾಗಿ ಚಾಲುಕ್ಯ ಪೂರ್ವದ ಕಲೆಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇದಕ್ಕೆ ಪ್ರಮುಖವಾದ ಕಾರಣ ಸಂಶೋಧನೆಯ ಕೊರತೆ. ಸಂಶೋಧನೆಗಳಾಗಿದ್ದರೂ ಯಾವೊಬ್ಬ ಸಂಶೋಧಕನು ಸ್ಪಷ್ಟನುಡಿಗಳಲ್ಲಿ ಇದು ಚಾಲುಕ್ಯ ಪೂರ್ವದ ಕಲಾ ನಿರ್ಮಿತಿ ಎಂದು ಹೇಳುವ ಪ್ರಯತ್ನ ಮಾಡಿರಲಿಲ್ಲ.
ಅಂತಹ ಸಂದರ್ಭದಲ್ಲಿ ಚಾಲುಕ್ಯ ಪೂರ್ವದ ಕಲಾ ಚಟುವಟಿಕೆಗಳನ್ನು ಮೌರ್ಯ, ಸಾತವಾಹನ, ಕದಂಬ-ಗಂಗರ ಆಳ್ವಿಕೆ ಭೌಗೋಳಿಕ ಚೌಕಟ್ಟಿನಲ್ಲಿ ಕ್ಷೇತ್ರಕಾರ್ಯ ನಡೆಸಿ ಗುರುತಿಸುವ ಪ್ರಯತ್ನ- ಹೊಸದಾದ ದೃಶ್ಯಕಲಾ ಇತಿಹಾಸ ನಿರ್ಮಾಣ ಮಾಡುತ್ತದೆ. ಕರ್ನಾಟಕವನ್ನೇ ಸಂಶೋಧನಾ ಕ್ಷೇತ್ರವನ್ನಾಗಿ ಅದರಲ್ಲೂ ದೃಶ್ಯಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೋಡಿದಾಗ- ದೇಶದಂತೆ ಹಲವಾರು ವೈವಿಧ್ಯಮಯವಾದ ಕಾಲಘಟ್ಟಗಳ ಕುರಿತಾದ ಅಧ್ಯಯನ ಮಾಡಲು ವಿಫುಲವಾದ ಅವಕಾಶಗಳಿವೆ ಎಂದರು.
ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಬಿ ಅವರು ಕಾರ್ಯಮಾದ ಅಧ್ಯಕ್ಷತೆ ವಹಿಸಿದ್ದರು. ಡಾ. ಎ ಎಸ್ ಪಾಟೀಲ್, ಬಸವರಾಜ್ ರೇ ಉಪ್ಪಿನ, ಬಸವರಾಜ ಜಾನೆ, ಮಂಜುಳಾ ಜಾನೆ, ಡಾ. ಶಿವಾನಂದ ಬಂಟನೂರ, ಅಂಬರಾಯ ಚಿನ್ನಮಳಿ, ಗಾಯತ್ರಿ ಮಂತ, ರಾಘವೆಂದ್ರ ಭುರ್ಲಿ, ಸಂಜೀವ ಎಮ್, ಬಾಬುರಾವ್ ಎಚ್, ಚಂದ್ರಹಾಸ್ ಜಾಲಿಹಾಳ, ಮಲ್ಲಿಕಾರ್ಜುನ ಶಟ್ಟಿ, ಗಿರೀಶ್ ಕೆ, ಅಣ್ಣಾರಾಯ ಹಂಗರಗಿ, ದೌಲತ್‍ರಾಯ ದೇಸಾಯಿ, ಸೂರ್ಯಕಾಂತ್ ನಂದೂರ್, ಸಿದ್ದು ಮರಗೋಳ, ಮುಂತಾದವರು ಉಪಸ್ಥಿತರಿದ್ದರು. ನಯನಾ ಬಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ ನಗರದ ರಂಗಾಯಣದಲ್ಲಿ ಭಾನುವಾರ ನಡೆದ ದೃಶ್ಯೋಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಡಾ. ಆರ್. ಎಚ್. ಕುಲಕರ್ಣಿ ಉದ್ಘಾಟಿಸಿದರು. ಡಾ. ಪರಶುರಾಮ ಪಿ ಮತ್ತು ನಯನಾ ಬಿ ಇದ್ದರು.
ಕಲಬುರಗಿ ನಗರದ ರಂಗಾಯಣದಲ್ಲಿ ಭಾನುವಾರ ನಡೆದ ದೃಶ್ಯೋಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಡಾ. ಆರ್. ಎಚ್. ಕುಲಕರ್ಣಿ ಅವರು ಉಪನ್ಯಾಸ ನೀಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…