ಕಲಬುರಗಿ: ವೀರಶೈವ ಮಹಾಸಭೆಯ ಕಲಬುರಗಿ ಜಿಲ್ಲಾ ಘಟಕಕ್ಕೆ ಚುನಾವಣೆಯಾಗಿಲ್ಲ ಕಾರಣ ಸದಸ್ಯತ್ವ ಕೋರತೆ, ಇದಕ್ಕಾಗಿ ವೀರಶೈವ ಮಹಾಸಭೆ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದ್ದು 850 ಸದಸ್ಯ 2500 ಸದಸ್ಯರ ಅಭಿಯಾನದ ಮೂಲಕ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ವೀರಶೈವ ಮಹಾಸಭೆ ಸದಸ್ಯ ಎಂ.ಎಸ್ ಪಾಟೀಲ ನರಿಬೋಳ ತಿಳಿಸಿದರು.
ಇಂದು ನಡೆದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಸಮಾಜ ಬಾಂದವರು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ಸದಸ್ಯರಾಗಿ ನೋಂದಣಿ ಮಾಡಿಸಿದ್ದಾರೆ. ಸದಸ್ಯತ್ವ ಅಭಿಯಾನಕ್ಕೆ ಮುನ್ನ 850 ಇದ್ದ ಸದಸ್ಯರ ಸಂಖ್ಯೆ ಇಂದು 2500 ಕ್ಕು ಹೆಚ್ಚಾಗಿದೆ ಇದು ಒಳ್ಳೆಯ ಬೆಳವಣಿಗೆ ಈಗ ಮಹಾಸಭೆ ಚುನಾವಣೆ ನಡೆಸಲು ರಾಷ್ಟ್ರೀಯ ಘಟಕ ಮುಂದಾಗಿದೆ ಸೆಪ್ಟೆಂಬರ ತಿಂಗಳ 29 ರಂದು ಚುನಾವಣೆ ನಡೆಯುವ ಸಂಬವ ಇದೆ ಎಂದು ಹೇಳಿದರು.
ಇನ್ನು ಯಾರಾದರು ಸದಸ್ಯರಾಗಬಸುವವರು ಇದೆ ತಿಂಗಳ 21 ರ ವರೆಗೆ ಅವಕಾಶವಿದೆ. ಇದರ ಒಳಗಾಗಿ ಸದಸ್ಯರಾಗಲು ತಿಳಿಸಲಾಗುತ್ತದೆ. ಅಲ್ಲದೇ ನಮ್ಮ ಮನವಿಗೆ ಸ್ಪಂದಿಸಿ ಚುನಾವಣೆ ನಡೆಸಲು ತಿರ್ಮಾನಿಸಿರುವ ರಾಷ್ಟ್ರೀಯ ಘಟಕ ಮತ್ತು ರಾಜ್ಯ ಘಟಕದ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸುತ್ತೇವೆ. ವಿಶೇಷವಾಗಿ ಸದಸ್ಯತ್ವದ ಅಭಿಯಾನಕ್ಕೆ ಸ್ಪಂದಿಸಿ ಸದಸ್ಯರಾದ ಸಮಾಜ ಬಾಂದವರಿಗು ಧನ್ಯವಾದ ತಿಳಿಸಿದರು.
ವಿಶೇಷವಾಗಿ ಜೇವರ್ಗಿ ತಾಲೂಕು ಘಟಕಕ್ಕು ಚುನಾವಣೆ ಇಲ್ಲಿವರೆಗು ನಡೆದಿಲ್ಲಾ ತಾಲೂಕಿನಲ್ಲಿ ನಮ್ಮ ಸಮಾಜ ಬಲಾಡ್ಯವಾಗಿದ್ದರು ಮಹಾಸಭೆಯಲ್ಲಿ ಬರಿ 90 ಸದಸ್ಯರಾಗಿದ್ದಾರೆ. ಈಗ ನಮ್ಮ ನಡೆ ಜೇವರ್ಗಿ ಕಡೆ ಎಂಬ ದಿಕ್ಕಿನಲ್ಲಿ ಸದಸ್ಯತ್ವ ಮಾಡಿಸಲು ನಿರ್ದರಿಸಿದ್ದೇವೆ. ತಾಲೂಕು ಚುನಾವಣೆಯಾಗಬೇಕಾದರೆ ಇನ್ನು 250 ಸದಸ್ಯರು ಆಗಬೇಕು ಆದ್ದರಿಂದ ಈ 21 ರ ಒಳಗಾಗಿ ಸದಸ್ಯರನ್ನು ಮಾಡಿಸಿ ಜೇವರ್ಗಿ ತಾಲೂಕ ಘಟಕಕ್ಕೂ ಚುನಾವಣೆ ನಡೆಯುವಂತೆ ಮಾಡುತ್ತೇವೆ ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…