ಕಲಬುರಗಿ: ಸಮಾಜ ಸೇವಕರಿಗೆ ಸನ್ಮಾನ, ಪ್ರಶಸ್ತಿ ಕೊಡುವುದಕ್ಕಿಂತ ಸಮಾಜ ಗುರುತಿಸಿ ಗೌರವ ನೀಡಿದರೆ ಸಾಕು ಸಮಾಜ ಸೇವೆ ಇಮ್ಮಡಿಯಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷರಾದ ನ್ಯಾಯವಾದಿ ಅಂಬಾರಾಯ ಪಟ್ಟಣಕರ ಹೇಳಿದರು.
ನಗರದ ಬ್ರಹ್ಮ ಪುರ ಬಡಾವಣೆಯಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿಧೊದ್ಧೆಶ ಸೇವಾ ಸಂಘ ಹಾಗೂ ತರಬೇತಿ ಕೇಂದ್ರದ ವತಿಯಿಂದ “ವಕೀಲರ ದಿನಾಚರಣೆ” ನಿಮಿತ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯರು ಒಬ್ಬರಿಗೊಬ್ಬರು ಬೆಳೆಯಲು ಬಿಡದವರು ಹಾಗೂ ಯಾರಾದರೂ ನನಗಿಂತ ಮೇಲೆ ಬರುತ್ತಾರೆ ಎಂದು ತಿಳಿದು ಸಹಾಯ ಮಾಡದೆ ಇರುವವರು ಎಂದಿಗೂ ಮುಂದೆ ಬರುವುದಿಲ್ಲ ಸರ್ವರೂ ನಮ್ಮವರೆಂಬ ಭಾವದಿಂದ ಸೇವೆಗೆ ಸಹಕಾರ ನೀಡಿದರೆ ಸಮೃದ್ಧ ಸಮಾಜ ನಿರ್ಮಿಸಬಹುದು ಎ೦ದು ಹೇಳಿದರು.
ತರಬೇತಿ ಕೇಂದ್ರದ ಮುಖ್ಯಸ್ಥರಾದ ಅಸ್ಲಾಂ ಶೇಕ್ ಮಾತನಾಡಿ, ತಮ್ಮ ವೃತ್ತಿಯೊಂದಿಗೆ ಹಲವಾರೂ ಸಾಮಾಜಿಕ ಸೇವೆ ಮಾಡುತ್ತಿರುವ ವಕೀಲರಿಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯಲ್ಲಿ ವಕೀಲರು ಭಾಗವಹಿಸಿ ಸ್ವತಂತ್ರ ಪಡೆಯಲು ಮಹತ್ವದ ಪಾತ್ರವಹಿಸಿದ್ದಾರೆ. ಸಮೃದ್ಧ ಸಮಾಜ ಕಟ್ಟಲು ವಕೀಲರ ಪಾತ್ರ ಮಹತ್ವವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಅವರಿಗೂ ವಿಶೇಷವಾಗಿ ಗೌರವಿಸಲಾಯಿತು. ಮಲಕಾರಿ ಪೂಜಾರಿ, ಶಿವರುದ್ರ ಕರಿಕಲ್ಲ, ರಘುನಂದನ್ ಕುಲಕರ್ಣಿ, ಸೋನಾಲಿ ಸ್ವಾಮಿ, ತ್ರಿವೇಣಿ ರಾಜುರಕರ, ರಮೇಶ,ಸೀಮಾ, ಇರ್ಫಾನ್ ಶೇಖ ಸೇರಿದಂತೆ ಅನೇಕ ತರಬೇತಿದಾರರು ಭಾಗವಹಿಸಿದ್ದರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…