ಬಿಸಿ ಬಿಸಿ ಸುದ್ದಿ

ಬದುಕಿನ ಪ್ರತಿಯೊಂದು ಸಮಸ್ಯೆಗಳಿಗೆ ಶರಣರ ವಚನಗಳು ದಾರಿ ದೀಪ

ಶಹಾಬಾದ: ಬದುಕಿನ ಪ್ರತಿಯೊಂದು ಸಮಸ್ಯೆಗಳಿಗೆ ಶರಣರ ವಚನಗಳು ದಾರಿ ದೀಪವಾಗಿವೆ ಎಂದು ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಹೇಳಿದರು.

ಅವರು ರವಿವಾರ ಹಳೆಶಹಾಬಾದನ ಅರುಣ.ಎಸ್.ಜಾಯಿ ಮತ್ತು ಆನಂದ ಜಾಯಿಯವರ ಸ್ವಗೃಹದಲ್ಲಿ ವಚನೋತ್ಸವ ಸಮಿತಿ ಹಳೆ ಶಹಾಬಾದನಿಂದ ಆಯೋಜಿಸಲಾದ 905ನೇ ವಾರದ ವಚನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿನ ಜಾತಿ ವ್ಯವಸ್ಥೆಯಿಂದ ಸಮಾಜ ತಲ್ಲಣಗೊಂಡಿದ್ದು, ನಮ್ಮೆಲ್ಲರ ಕಾಯಕಗಳು ಜಾತಿಗಳಾಗಿ ಪರಿವರ್ತನೆಗೊಂಡಿರುವುದು ವಿಪರ್ಯಾಸದ ಸಂಗತಿ ಎಂದರು. ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ ಎಂಬ ವಚನ ಅವಲೋಕಿಸಿದರೆ ಜಾತಿ ತನ್ನಿಂದ ತಾನೆ ದೂರ ಹೋಗಬಲ್ಲುದು. ಬಸವಣ್ಣ ಸಂಸಾರದಲ್ಲಿದ್ದು ಪಾರಮಾರ್ಥ ಗೆದ್ದಿದ್ದು, ಸಂಸಾರ ಜಂಜಾಟದಿಂದ ಹೊರಬರಲು ಇದು ಪ್ರೇರಣೆ. ದುಷ್ಟ ಗುಣಗಳನ್ನು ಬಿಟ್ಟು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಶರಣರು ಕಸಗುಡಿಸುವ ಸತ್ಯಕ್ಕ ಸಹಿತ ವಚನಗಳನ್ನು ರಚಿಸಿರುವುದನ್ನು ಗಮನಿಸಿದರೆ ಅದ್ಭುತ ಕ್ರಾಂತಿಯಾಗಿರುವುದು ಗೊತ್ತಾಗುತ್ತದೆ. ನಾವುಗಳು ಬೇರೆಯವರನ್ನು ಅವಲೋಕಿಸುವುದಕ್ಕಿಂತ ನಮ್ಮನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಲು ಶರಣರ ವಚನಗಳು ಮಾರ್ಗದರ್ಶನ ನೀಡಬಲ್ಲವು ಎಂದರು. ಬಸವಣ್ಣನವರ ವಚನಗಳಲ್ಲಿ ಅಡಕವಾಗಿರುವ ತತ್ವಗಳು ಆಧುನಿಕ ಬದುಕಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.

ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, 12ನೇ ಶತಮಾನದ ಬಸವಣ್ಣನವರು ಪತ್ರಿವಾದಿಸಿದ ತತ್ವ ಸಿದ್ದಾಂತಗಳು ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗಿ ಬೆಳಕನ್ನು ಬೀರುವಂತಿವೆ. ಅಸಮಾನತೆಯ ವಿರುದ್ದ ಸಮಾಜದ ಕ್ರಾಂತಿಕಾರಿ ಬದಲಾವಣೆಯಲ್ಲಿ ಬಸವಣ್ಣನವರ ಕೋಡುಗೆ ಅಪಾರ. ಸಮಾಜದಲ್ಲಿ ಜಾತಿ ಪದ್ದತಿ ನಿರ್ಮೂಲ ಮಾಡಿ ಸಾಮಾಜಿಕ ನ್ಯಾಯಕ್ಕೆ ಹೋರಾಡಿ ಇಡಿ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ ಎಂದರು.

ಶಾಂತಪ್ಪ.ಬಿ.ಹಡಪದ ಪ್ರಾಸ್ತಾವಿಕ ನುಡಿದರು, ಕು.ಸೌಮ್ಯ.ಪಾಟೀಲ್ ಮತ್ತು ಕು.ನಾಗರಾಜ ತುಪ್ಪದ ಪ್ರಾರ್ಥಿಸಿದರು, ರಮೇಶ ಮೀರಜಕರ್ ಸ್ವಾಗತಿಸಿದರು, ಭರತ ಪ್ರಬುದ್ಧಕರ್ ವಂದಿಸಿದರು.

ನಗರಸಭೆಯ ಮಾಜಿ ಅಧ್ಯಕ್ಷ ಹಂಪಣ್ಣ.ಸಿ.ಪೋನತಕರ್,ಧೂಳಪ್ಪ ಹಡಪದ, ಮಹಾನಂದಿ ಪಾರಾ, ಕಿರಣ ಕುಮಾರ, ಕವಿತಾ ಜಾಯಿ, ನಗರಸಭೆಯ ಮಾಜಿ ಸದಸ್ಯೆ ನೀಲಮ್ಮ ಜಾಯಿ, ಸ್ವಾಗತವನ್ನು ಕು.ನಿಮಿಷಾ ಜಾಯಿ, ಶರಣ ಕುಪ್ಪೆಂದ್ರ ತುಪ್ಪದ, ಕು.ಭೂಮಿಕಾ, ಶ್ಲೋಕಾ, ಸಂಕ್ಕøತಿ, ಶರತ, ಸುಗುತ, ಸುಮಂತ ಇತರರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago