ತಮ್ಮಣ್ಣಪ್ಪ ಚಿಕ್ಕೋಡಿಯವರ ಪುಣ್ಯಸ್ಮರಣೋತ್ಸವದ ನಿಮಿತ್ಯ ಈ ಲೇಖನದ ಉದ್ದೇಶ ನಮ್ಮ ಸಮಾಜದ ವ್ಯಕ್ತಿ ಪರಿಚಯ ಹಾಗೂ ಸ್ಮರಣೆ, ಹೆಮ್ಮೆ ಪಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಭಾಷೆ ಯಾರಿಗೆಲ್ಲ ಇಷ್ಟ ಇಲ್ಲ ಹೇಳಿ , ಇಲ್ಲಿಯ ಜನರ ಭಾಷೆ, ಭಾವನೆಗಳನ್ನು ನೋಡಿ. ತಿರುಳ್ಗನ್ನಡ ಭಾಷೆಯ ಪ್ರದೇಶವಾದ ಉತ್ತರ ಕರ್ನಾಟಕ 16-17ನೇ ಶತಮಾನ ಅನ್ಯಭಾಷೆ ಬೇರೆ ಸಂಸ್ಕ್ರತಿಗಳ ಆಕ್ರಮಣಕ್ಕೆ ಗುರಿಯಾಗಿ ಬಹಮನಿ ಶಾಹಿಗಳ ಆಡಳಿತಾವಧಿಯಲ್ಲಿ ಪರ್ಷಿಯನ್ , ಉರ್ದು ಹಾಗೂ ಪೇಶ್ವೆಗಳ ಕಾಲದಲ್ಲಿ ಮರಾಠಿ ಪ್ರಾಬಲ್ಯ ಸಾಧಿಸಿದ್ದರಿಂದ 18-19ನೇ ಶತಮಾನಕ್ಕೆ ಕಾಲಿರಿಸುವಷ್ಟರಲ್ಲಿ ಕನ್ನಡ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿದ್ದರಿಂದ ಉತ್ತರ ಕರ್ನಾಟಕವೆಲ್ಲ ಮರಾಠಿಮಯವಾಯಿತು.
ಇಂತಹ ಕಠಿಣ ಸಂದರ್ಭದಲ್ಲಿ ಶರಣ ತತ್ವವನ್ನು ಮೈಗೂಡಿಸಿಕೊಂಡು ಕನ್ನಡ ಭಾಷೆಯನ್ನು ತನು- ಮನವನ್ನಾಗಿಸಿಕೊಂಡು ಕನ್ನಡ ನಾಡು ನುಡಿ ಸಂಸ್ಕ್ರತಿಯನ್ನು ಉಳಿಸಿ ಬೆಳೆಸಿದ ಕನ್ನಡದ ಪರಂಪರೆಯಲ್ಲಿ ಅಳಿಸಲಾಗದ ಮುತ್ತು ಮತ್ತು ವಜ್ರವೇ ನಮ್ಮ ಶ್ರೀ ತಮ್ಮಣ್ಣಪ್ಪ ಚಿಕ್ಕೋಡಿಯವರು.
ತಮ್ಮಣ್ಣಪ್ಪನವರು, ಸತ್ಯಪ್ಪ & ಮಹಾದೇವಮ್ಮರ 2 ನೇ ಪುತ್ರರಾಗಿ ಜನಿಸಿದರು. ಬಡತನದ ಬೆವರು ತಮ್ಮಣ್ಣಪ್ಪನವರನ್ನು ಬಿಡದ ಕಾರಣ ಬಾಲ್ಯವನ್ನು ಕಷ್ಟದಾಯಕ ಸ್ಥಿತಿಯಲ್ಲಿ ಕಳೆದರು.
ರಬಕವಿ-ಬನಹಟ್ಟಿಯೊಂದಿಗೆ ನಂಟು : ಆಗಿನ ಸಂಸ್ಥಾನದ ಆಡಳಿತ ಭಾಷೆ ಮರಾಠಿಯಾದ ಕಾರಣ ತಮ್ಮಣ್ಣಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮರಾಠಿಯಲ್ಲಿ ಮುಗಿಸಿದರು. ಆದರೆ ಮನೆತನದ ಅನಾನೂಕೂಲತೆಯ ಪರಿಣಾಮ ಉನ್ನತ ಶಿಕ್ಷಣ ಪಡೆಯಲು ಅಸಾಧ್ಯವಾಯಿತು. ಮುಂದೆ ತಮ್ಮಣ್ಣಪ್ಪನವರ ಕುಟುಂಬ ಚಿಕ್ಕೋಡಿಯನ್ನು ಬಿಟ್ಟು, ರಬಕವಿಗೆ ವಲಸೆ ಬಂತು. ಆಗ ರಬಕವಿ ಸಾಂಗಲಿ ಸಂಸ್ಥಾನದ ಅಧೀನದಲ್ಲಿತ್ತು. ಈ ಸಂಸ್ಥಾನಿಕರು ಮರಾಠರು ಆಗಿದ್ದರಿಂದ ಶಾಲೆಗಳಲ್ಲಿ ಮರಾಠಿ ಪ್ರಭಾವ ಹೆಚ್ಚಿತ್ತು. ಇಂತಹ ಸಂಧಿಗ್ದ ಸ್ಥಿತಿಯಲ್ಲಿ ತಮ್ಮಣ್ಣಪ್ಪನವರು ಸ್ವಪ್ರಯತ್ನದಿಂದ ಕನ್ನಡವನ್ನು ಕಲಿತು ಪ್ರಾಥಮಿಕ , ಮುಲ್ಕಿ ಪರೀಕ್ಷೆಯನ್ನು ಪಾಸು ಮಾಡಿದರು.
ತಮ್ಮಣ್ಣಪ್ಪನವರ ಹುಟ್ಟು ಕನ್ನಡ ಸಾಹಿತ್ಯ ಹಾಗೂ ಪರಂಪರೆಯಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿತು. ಒಟ್ಟು ಸಮಾಜದ ಮೇಲೆ ಅವರು ಇಟ್ಟ ಕಳಕಳಿಯನ್ನು ಅವರ ಸಮಕಾಲೀನರು ಇಂದೂ ಸಹ ನೆನಪಿಸಿಕೊಳ್ಳುತ್ತಾರೆ. ತಮ್ಮ ಜೀವನದುದ್ದಕ್ಕೂ ಕನ್ನಡದ ಏಳಿಗೆಗೆ ಶ್ರಮಜೀವಿಯಾಗಿದ್ದರು. “ಧಾರ್ಮಿಕ ಕೆಲಸ ಮಾಡಬೇಕು, ಯಾವುದೇ ಕೆಟ್ಟ ಕೆಲಸ ಎಂದೂ ಮಾಡಬ್ಯಾಡರಿ” ಎಂದು ಕೇಳಿಕೊಂಡಿದ್ದು ಸಮಾಜದ ಮೇಲೆ ಅವರಿಗಿದ್ದ ಪ್ರೀತಿಗೆ ಒಂದು ನಿದರ್ಶನ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ಮಾಡಿದ ಕೀರ್ತಿ ತಮ್ಮಣ್ಣಪ್ಪನವರಿಗೆ ಸಲ್ಲುತ್ತದೆ.
ಆ ಅಸಾಮಾನ್ಯ ವ್ಯಕ್ತಿ, ಯಾರು ಗೊತ್ತೇ, ಅವರೇ ನಮ್ಮ ಸಮಾಜದ ಹೆಮ್ಮೆಯ ಡಾ.ಫ.ಗು.ಹಳಕಟ್ಟಿಯವರು, ನ್ಯಾಯವಾದಿ ಹಳಕಟ್ಟಿಯವರು ತುಂಬಾ ಓದಿದವರು ಮನಸ್ಸು ಮಾಡಿದ್ದರೆ ಅವರೊಬ್ಬ ದೊಡ್ಡ ವಕೀಲರಾಗಬಹುದಿತ್ತು, ಆಗಿನ ಕಾಲದಲ್ಲಿ ನ್ಯಾಯಮೂರ್ತಿ ಕೆಲಸ ಬಂದರು ಬಿಟ್ಟು, ಸಮಾಜ ನ್ಯಾಯ ಕ್ಕಾಗಿ ವ್ಯಕ್ತಿ ಹೋರಾಡಲು ಶಕ್ತಿ ಯನ್ನು ನೀಡಿದ ತಮ್ಮಣ್ಣಪ್ಪನವರ ಪ್ರೇರಕ ಶಕ್ತಿಯಿಂದ ವಚನ ಸಾಹಿತ್ಯದ ಕಡೆಗೆ ಗಮನಹರಿಸಿದ ಹಳಕಟ್ಟಿಯವರು ವಚನ ಸಾಹಿತ್ಯದಲ್ಲಿ ಅಪಾರ ಕೆಲಸ ಮಾಡಿ ವಚನ ಪಿತಾಮಹರಾದರು.
ತಮ್ಮಣ್ಣಪ್ಪನವರು ಸಮಾಜೋ-ಧಾರ್ಮಿಕ ಕ್ರಾಂತಿಯ ಜೊತೆಗೆ ಒಬ್ಬ ವಚನ ಪಿತಾಮಹನನ್ನು ಈ ನಾಡಿಗೆ ಕೊಟ್ಟ ಮಹಾಮೇಧಾವಿ ವ್ಯಕ್ತಿ. ತಮ್ಮಣ್ಣಪ್ಪನವರ ಕನ್ನಡ ಪ್ರೀತಿಗೆ ಹಲವಾರು ನಿದರ್ಶನಗಳುಂಟು, ಅವುಗಳಲ್ಲಿ ಪ್ರಮುಖ ಅಂಶವೆಂದರೆ ರಬಕವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ , ತಮ್ಮಣ್ಣಪ್ಪನವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕನ್ನಡಪರ ಠರಾವುಗಳನ್ನು ಮಂಡಿಸಿ ಕನ್ನಡ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದರು. ದೇವರ ಕರೆಯೋ ಗೊತ್ತಿಲ್ಲ, ಮ್ರತ್ಯುಪತ್ರ ಬರೆಯಿಸಿ ಒಂದು ತಿಂಗಳು ಕಳೆದಿರಲಿಲ್ಲ, ಎಲ್ಲ ಭಾರವನ್ನು ಕಳೆದು ನಿಶ್ಚಿಂತರಾಗಿ 6 ಡಿಸೆಂಬರ್ 1933 ರಂದು ಲಿಂಗೈಕ್ಯರಾದರು.
ಕನ್ನಡ ನಾಡು ಕಂಡ ‘ಗಡಿನಾಡಿನ ಹುಲಿ’ ಸಮಾಜೋದ್ಧಾರಕ್ಕಾಗಿ ದುಡಿದು ಹಣ್ಣಾಗಿ ಕಳಚಿ ಬಿತ್ತು. ತಮ್ಮಣ್ಣಪ್ಪನವರು ನಿಧನರಾದ ಸಂದರ್ಭದಲ್ಲಿ ಪ್ರಸಿದ್ಧ ಕವಿವರ್ಯರಾದ ಈಶ್ವರ ಸಣಕಲ್ರವರು “ನಿಟ್ಟುಸಿರು” ಎನ್ನುವ ಕವನವನ್ನು ರಚಿಸಿ ಅಪಾರ ಜನಸ್ತೋಮದ ಮಧ್ಯದಲ್ಲಿ ವಾಚಿಸಿದರು. ಇಲ್ಲಿಗೆ ಕನ್ನಡದ ಕೊಂಡಿಯೊಂದು ಕಳಚಿ ಬಿತ್ತು ಎಂದು ಹೇಳಿದ್ದಾರೆ. ತಮ್ಮಣ್ಣಪ್ಪನವರ ಜೀವನ ಪ್ರತಿಯೊಬ್ಬ ಕನ್ನಡಿಗನಿಗೆ ಆದರ್ಶವಾಗಲೆಂದು ಪ್ರತಿವರ್ಷ ಡಿಸೆಂಬರ್ 6 ರಂದು ತಮ್ಮಣ್ಣಪ್ಪನವರ ಪುಣ್ಯ ಸ್ಮರಣೋತ್ಸವ ವಾಗಿ, ಬನಹಟ್ಟಿ ಗ್ರಾಮದಲ್ಲಿರುವ ಜನತಾ ಶಿಕ್ಷಣ ಸಂಘ ಆಚರಿಸುತ್ತಾ ಬಂದಿದೆ. ಅಂದು ಊರಿಗೆ ಹಬ್ಬವಿದ್ದ ಹಾಗೆ, ತಮ್ಮಣ್ಣಪ್ಪನವರ ಪಲ್ಲಕ್ಕಿಯನ್ನು ಬನಹಟ್ಟಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ/ನಿಯರು ಪಾಲ್ಗೊಂಡು ”ಅಜ್ಜ ಅಜ್ಜ ತಮ್ಮಣ್ಣಜ್ಜ” ,” ಕನ್ನಡ ಉಳಿಸಿದಾತ ತಮ್ಮಣ್ಣಜ್ಜ ತಾತ” ಎನ್ನುವ ಘೋಷಣೆಗಳು ನಮ್ಮ ಪೂರ್ವಜರ ಆತ್ಮವನ್ನು ಗೌರವಿಸುವ ಮೂಲಕ ತಮ್ಮಣ್ಣಪ್ಪನವರ ಸ್ಮರಣೆಗೆ ಹಿಡಿದ ಕನ್ನಡಿ. ಇಂದು ಕರ್ನಾಟಕದ ಕೆಲವು ಕಡೆ ಕನ್ನಡ ಎಂದರೆ ಎನ್ನಡ ಎನ್ನುವ ಸ್ಥಿತಿ ನಿರ್ಮಾಣವಾಗಿದೆ, ಅಂತಹ ಕಡೆ ತಮ್ಮಣ್ಣಪ್ಪನವರಂತಹ ಮೇಧಾವಿ ವ್ಯಕ್ತಿಯ ಚಿಂತನೆಗಳನ್ನು ಭಿತ್ತಿದರೆ ಕನ್ನಡ ಭಾಷೆ ಸಂಸ್ಕ್ರತಿ ಮತ್ತಷ್ಟು ಉತ್ತುಂಗಕ್ಕೆ ಹೋಗಬಹುದು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…