ಶಹಾಬಾದ:ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಜರಾಮರರಾಗಿದ್ದಾರೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಮಂಗಳವಾರ ನಗರದ ಅಪ್ಪರ್ ಮಡ್ಡಿ ನಂ.1ರ ಸನ್ ಲೈಟ್ ಆಂಗ್ಲ ಮಾಧ್ಯಮಶಾಲೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ತಾವು ನೀಡಿದ ಸಂವಿಧಾನದ ಮೂಲಕ ಪ್ರತಿಯೊಬ್ಬ ಭಾರತೀಯರ ಮನದಲ್ಲಿ ತಲುಪಿದ್ದಾರೆ.ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಕೆಳವರ್ಗದವರ ಬದುಕು ಶೋಚನೀಯವಾಗಿತ್ತು.ಈ ಅವಕಾಶ ವಂಚಿತ ಸಮುದಾಯದ ಧ್ವನಿಯಾಗಿ ಅಂಬೇಡ್ಕರ್ ಕಾರ್ಯನಿರ್ವಹಿಸಿದ್ದಾರೆ.ಅಲ್ಲದೇ ಎಲ್ಲಾ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಹಾಗೂ ಹಕ್ಕುಗಳ ರಕ್ಷಣೆಗಾಗಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಈ ದೇಶದ ಶೋಷಿತರ ಬಾಳಿನ ಭಾಗ್ಯದ ಬೆಳಕು ಯಾರಾದರೂ ಇದ್ದರೇ ಅದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಎಂದರು.
ಸ್ವಾತಂತ್ರ್ಯ ಮತ್ತು ಸಮಾನತೆ ಎಲ್ಲಾ ವರ್ಗದವರ ಸ್ವತ್ತಾಗಿದ್ದು, ಅದನ್ನು ಎಲ್ಲರೂ ಸಮಾನವಾಗಿ ಪಡೆದುಕೊಂಡಾಗ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಆದರೆ ಇಂದು ಸಂವಿಧಾನ ಸರಿಯಾಗಿ ಓದದ ಹಾಗೂ ಅರಿಯದ ಅವಿವೇಕಿಗಳು ಸಂವಿಧಾನ ಕುರಿತು ಇಲ್ಲಸಲ್ಲದನ್ನು ಹೇಳುತ್ತಿದ್ದಾರೆ.ಸಂವಿಧಾನ ಇರುವುದು ಎಲ್ಲರಿಗೂ ಎಂದು ಮಗಾಣಬೇಕಿದೆ.ಅದಕ್ಕಾಗಿ ಸಂವಿಧಾನವನ್ನು ಎಲ್ಲರೂ ಓದಬೇಕೆಂದು ಹೇಳಿದರು.
ನಗರಸಭೆಯ ಸದಸ್ಯ ಅವಿನಾಶ ಕಂಬಾನೂರ,ಮೇನಿಕಾ, ಸಾಬೇರಾ, ವನೀತಾ, ಮೀನಾಕ್ಷಿ, ರೇವಣಸಿದ್ದಪ್ಪ ಭಂಡಾರಿ,ಭಾಗಪ್ಪ ನಾಟೇಕಾರ,ರಾಜಕುಮಾರ ಕಾಳೂರ, ಚಂದ್ರಕಾಂತ ಯನಗುಂಟಿ, ಶಿವರಾಮ ಇಂಗನಕಲ, ಉದಯಕುಮಾರ ಯನಗುಂಟಿ, ಶರಣು ನಾಟೀಖಾರ, ರಾಹುಲ.ಡಿ, ರಾಹುಲ .ಕೆ, ವಿಶಾಲ,ಲಕ್ಕಿ ಪತ್ತಿ, ಆಕಾಶ ರಾಜನ, ಭರತ ರಾಜನ, ವಿಜಯಕುಮಾರ.ಬಿ, ಸಾಯಿಬಣ್ಣ.ಬಿ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…