ಬಿಸಿ ಬಿಸಿ ಸುದ್ದಿ

ಲೈಂಗಿಕ ಕಿರುಕುಳ: ಜಾಗೃತಿ ಅಗತ್ಯ

ಕಲಬುರಗಿ; ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ವೃತ್ತಿನಿರತ ಮಹಿಳೆಯರಿಗೆ ಬೆದರಿಕೆಯಾಗಿ ಮುಂದುವರಿದಿದೆ, ಮಹಿಳೆಯರ ವಿರುದ್ಧ ನಡೆದ ಅಪರಾಧವನ್ನು ಕಠಿಣ ಶಿಕ್ಷೆಯ ನಿಬಂಧನೆಗಳೊಂದಿಗೆ ಶಿಕ್ಷಿಸಲು ಬಲವಾದ ಕಾಯಿದೆ ಅಸ್ತಿತ್ವದಲ್ಲಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಮತ್ತು ವೃತ್ತಿಯಲ್ಲಿ ವಕೀಲರಾದ ಶ್ರೀಮತಿ ಆರತಿ ತಿವಾರಿ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಬುಧವಾರದಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನಾಚರಣೆ-2022ರ ಅಂಗವಾಗಿ ಆಂತರಿಕ ದೂರು ಸಮಿತಿ (ಐಸಿಸಿ) ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಲಿಂಗ ಸಂವೇದನೆ ಮತ್ತು ಲೈಂಗಿಕ ಕಿರುಕುಳ ತಡೆ ಕುರಿತು ಮಾತನಾಡಿದರು. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಎರಡು ಬಾರಿ ಕಾಪೆರ್Çರೇಟರ್ ಆಗಿದ್ದ ತಿವಾರಿ ಅವರು ಮಾತುಗಳನ್ನು ಮುಂದುವರೆಸಿ ದೂರು ಸಮಿತಿಗಳು ಮತ್ತು ಸ್ಥಳೀಯ ದೂರು ಸಮಿತಿಗಳು ಇದ್ದಾಗಲೂ ನ್ಯಾಯಾಲಯಗಳು ಮತ್ತು ಆಂತರಿಕ ಕಠಿಣ ಕ್ರಮಗಳು ಮತ್ತು ಕಠಿಣ ಶಿಕ್ಷೆಗಳ ಹೊರತಾಗಿಯೂ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಹಾವಳಿ ಮುಂದುವರೆದಿದೆ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಐಸಿಸಿ ಅಧ್ಯಕ್ಷೆ ಡಾ. ಸುಜಾತಾ ಮಲ್ಲಾಪುರ, ಪೆÇ್ರ. ಜಗದೇವ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆ 2013 ರ ನಿಬಂಧನೆಗಳ ಬಗ್ಗೆ ಮತ್ತು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿರುದ್ಧದ ಅಪರಾಧಗಳಿಗೆ ಶಿಕ್ಷೆಯ ಕಟ್ಟುನಿಟ್ಟಾದ ನಿಬಂಧನೆಗಳ ಬಗ್ಗೆ ಪುರುಷರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ, ಇದು ಕೆಲಸದ ಸ್ಥಳದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳನ್ನು ಮಾಡುವುದನ್ನು ತಡೆಯುತ್ತದೆ ಎಂದು ತಿವಾರಿ ತಿಳಿಸಿದರು.

emedialine

Recent Posts

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

2 mins ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

5 mins ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

7 mins ago

ಪ್ರಿಯಾಂಕ ಖರ್ಗೆ ಜನ್ಮದಿನ; ಪುಸ್ತಕ ವಿತರಣೆ

ಶಹಾಬಾದ: ತಾಲೂಕಿನ ರಾವೂರ ಗ್ರಾಮದ ಮೋರಾಜಿ ದೇಸಾಯಿ ವಸತಿ ನಿಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಎಂ ಖರ್ಗೆಜಿಯವರ 46ನೇ…

10 mins ago

ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ನ.24 ರಂದು

ಕಲಬುರಗಿ: ಖ್ಯಾತ ಶಿಕ್ಷಣತಜ್ಞ ದಿ: ಪೆÇ್ರ :ಶಂಕರಲಿಂಗ ಹೆಂಬಾಡಿ'ಯವರು ಸಂಸ್ಥಾಪಿತ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ ರಾಜಾಪೂರ-ಕಲಬುರಗಿ…

3 hours ago

ಸಂವಿಧಾನ ದಿನಾಚರಣೆ ಹಿನ್ನೆಲೆ: ಚಿತ್ರಕಲಾ ಮತ್ತು ಟೈಕೋಥಾನ್ ಸ್ಪರ್ಧೇ ಆಯೋಜನೆ

ಕಲಬುರಗಿ: ನ.22 ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ‌ ಇಲಾಖೆ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ…

3 hours ago