ಕಲಬುರಗಿ: ಕಳೆದ ೫ ವರ್ಷಗಳಿಂದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಉಪ ಪ್ರದಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹರ್ಷ ಡಿ ಗಾಂವಕರ್ ಅವರು ಭ್ರಷ್ಟಾಚಾರವೆಸಗಿದ್ದುˌ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರಿಗೆ ಕಲ್ಯಾಣ ಕರ್ನಾಟಕ ಜನಜಾಗ್ರತಿ ವೇದಿಕೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೆರಮಗಿ ಮನವಿ ಸಲ್ಲಿಸಿದರು.
ಕಲಬುರಗಿಯಲ್ಲಿ ಮನೆ ಮಾಡಿದ್ದೇನೆ ಎಂದು ಎಚ್.ಆರ್ .ಎ ಕ್ಲೇಮ್ ಮಾಡಿಕೊಳ್ಳುತ್ತಾರೆ. ಜಿಲ್ಲಾಧಿಕಾರಿಗಳು ನಡೆಸುವ ಯಾವುದೇ ಸಭೆಗೆ ಹಾಜರಾಗುವುದಿಲ್ಲ. ಖಾಯಂ ಧಾರವಾಡದಲ್ಲೇ ಇದ್ದು ಸರ್ಕಾರದ ಸಂಬಳ ಪಡೆಯುತ್ತಾರೆ ಎಂದು ದೂರಿದರು.
ಜಿಲ್ಲಾಧಿಕಾರಿಗಳು ಕರೆಯವ ಸಭೆಗೆ ಕಡ್ಡಾಯವಾಗಿ ಡಿಜಿಎಂ ಇರುವಂತೆ ಆದೇಶ ಹೊರಡಿಸಬೇಕು. ೩ ತಿಂಗಳಿಗೊಮ್ಮೆ ಬಂದು ಕಲಬುರಗಿಯ ಐಶಾರಾಮಿ ಲಾಡ್ಜ್ ನಲ್ಲಿ ಉಳಿದುಕೊಂಡು ಕಡತಗಳನ್ನು ಅಲ್ಲಿಗೆ ತರಿಸಿಕೊಳ್ಳುತ್ತಾರೆ. ಈ ಬಗ್ಗೆ ನಿಗಮದ ಸಿಸಿಟಿವಿ ಪರಿಶೀಲಿಸಬೇಕು. ಮಹಿಳಾ ಫಲಾನುಭವಿಗಳಿದ್ದರೂ ಸಹ ಲಾಡ್ಜ್ ಗೆ ಕರೆಸಿಕೊಂಡು ಸಹಿ ಮಾಡಿಕೊಡುವ ಭರವಸೆ ನೀಡುತ್ತಿದ್ದಾರೆ.
ಪರಿಶಿಷ್ಟ ಜಾತಿಯ ಮಹಿಳಾ ಫಲಾನುಭವಿಗಳಿಗೆ ಲಾಡ್ಜ್ ಗೆ ಕರೆಸಿಕೊಂಡು ಕಡತ ಪರಿಶೀಲನೆ ಮಾಡುತ್ತಿರುವ ಡಿಜಿಎಂ ಹರ್ಷಾ ಗಾಂವಕರ್ ಮೇಲೆ ದಲಿತ ದೌರ್ಜನ್ಯ(ಅಟ್ರಾಸಿಟಿ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು.
ಅಲ್ಲದೆ ಫಲಾನುಭವಿಗಳ ಭೂ ಒಡೆತನ ಯೋಜನೆಯ ೧೦% ಮತ್ತು ಗಂಗಾಕಲ್ಯಾಣ ಯೋಜನೆಯ ೧೦% ಡಿಜಿಎಂ ಖುದ್ದು ಪರಿಶೀಲಿಸಬೇಕು ಎಂಬ ನಿಯಮ ಇದ್ದರೂ ಸಹ ಇಡೀ ವಿಭಾಗದಲ್ಲಿ ಯಾವ ಜಮೀನಿಗೂ ಭೇಟಿ ನೀಡುವುದಿಲ್ಲ. ನಕಲಿ ಜಿಪಿಎಸ್ ಮಾಡಿಕೊಂಡ ಪೋಟೊಗಳು ದಾಖಲೆಗಳಲ್ಲಿ ಇಡಲಾಗುತ್ತಿದೆ.
ಡಿಜಿಎಂ ಅವರ ಚಲನವಲನದ ಡೈರಿ, ಲಾಗ್‌ಬುಕ್, ವಾಹನದ ಡಿಸೇಲ್ ಖರ್ಚು, ಎಲ್‌ಪಿಎಸ್ ಜಿಪಿಎಸ್ ಪೋಟೋ, ಗಂಗಾಕಲ್ಯಾಣ ಜಿಪಿಎಸ್ ಪೋಟೋ ಸಂಪೂರ್ಣ ತನಿಖೆಗೆ ಒಳಪಡಿಸಬೇಕು ಎಂದು ಮಣಿವಣ್ಣನ್ ಅವರಿಗೆ ದೂರಿದರು.
ಈ ವೇಳೆ ಜಿ.ಎಂ ಬಡಿಗೇರ, ಜಿ. ಶಿವಶಂಕರ್, ಸಂಜೀವ ಕುಮಾರ ಮೇಲಿನಮನಿˌ ಕ್ರಷ್ಣಾ ಕುಶಾಳಕರ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…