ಕಲಬುರಗಿ: ರವಿ ಬಿರಾದರ ಬೆಂಬಲಿಗರಿಂದ ನಡೆದ ಪ್ರತಿಭಟನೆಯಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಬಿ.ಮತ್ತಿಮೂಡ ರವರ ಬಗ್ಗೆ ಅವಹೇಳನಕಾರಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದನ್ನು ಬಸವರಾಜ ಬಿ.ಮತ್ತಿಮೂಡ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷನಾಗಿ ಪ್ರಶಾಂತ ವಾಗಮಾರೆ ಖಂಡಿಸಿದ್ದಾರೆ.
ರವಿ ಬಿರಾದರ ರವರು ಪಕ್ಷ ವಿರೋಧಿ ಚಟುವಟಿಕೆಯನ್ನು ವರಿಷ್ಠರು, ಮುಖಂಡರು, ಸಾಕ್ಷಿಸಮೇತ ಸಿಕ್ಕಿದ ಕಾರಣ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಬಿಜೆಪಿ ಪಕ್ಷ ಶಿಸ್ತಿನ ಪಕ್ಷ ಇರುವುದರಿಂದ ಇದರಲ್ಲಿ ಯಾವ ಶಾಸಕರಾಗಲಿ, ಸಚಿವರಾಗಲಿ, ಯಾವುದೇ ರೀತಿಯ ಮಧ್ಯಸ್ತಿಕೆ ಇರುವುದಿಲ್ಲ. ಪ್ರತಿಭಟನೆಯಲ್ಲಿ ಶಾಸಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಲ್ಲದೆ ಸಂಬಂಧವಿಲ್ಲದ ವಿಷಯಗಳನ್ನು ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುತ್ತಾರೆ. ರವಿ ಬಿರಾದರ ರವರು ಶಾಸಕರಿಗೆ ನಾನೇ ಎಮ್.ಎಲ್.ಎ ಟಿಕೆಟ ಕೊಡಿಸಿದ್ದೀನಿ, ಆರಿಸಿ ತಂದಿರುತ್ತೇನೆ ಅಂತಾ ಜಂಬಕೊಚ್ಚಿಕೊಂಡಿರುವುದು ಖೇದಕರ ಸಂಗತಿಯಾಗಿದೆ ಎಂದು ಪ್ರಕಟಣೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ವರಿಷ್ಟರು ಶಾಸಕರು, ಅಡಕಿ ಮತಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದಾಗ ಅವರ ಅಭಿವೃದ್ಧಿ ಕೆಲಸಗಳು ಹಾಗೂ ಪಕ್ಷ ನಿಷ್ಠೆಯನ್ನು ನೋಡಿ ಅವರಿಗೆ ಎಮ್.ಎಲ್.ಎ ಟಿಕೇಟ ಸಿಕ್ಕದೆ. ಕ್ಷೇತ್ರದ ಸರ್ವ ಜಾತಿ ಜನಾಂಗದವರು ಅವರ ಒಳ್ಳೆಯತನ ನೋಡಿ ಪ್ರಚಂಡ ಬಹುಮತದಿಂದ ಆರಿಸಿ ತಂದಿದ್ದಾರೆ. ಲಿಂಗಾಯತ ವಿರೋಧಿ ಎಂದು ರವಿ ಬಿರಾದರ ಹಾಗೂ ಬೆಂಬಲಿಗರು ಹೇಳಿರುವುದು ಇವರೇ ಕೆಲವು ಲಿಂಗಾಯತ ಗುತ್ತಿಗೆದಾರರನ್ನು ಶಾಸಕರ ಹೆಸರು ಹೇಳಿ ಹಪ್ತಾ ವಸೂಲಿ ಮಾಡುತ್ತಾರೆ. ಇದರಿಂದ ಶಾಸಕರಿಗೆ ಮುಜುಗರವಾಗುತ್ತಿತ್ತು. ಆದರೆ ಶಾಸಕರಾದ ಬಸವರಾಜ ಮತ್ತಿಮಡು ಈ ಕ್ಷೇತ್ರದ ಅಭಿವೃದ್ಧಿ ಸಲುವಾಗಿ ಸರ್ವ ಜನಾಂಗದ ಏಳಿಗಾಗಿ ಹಗಲಿರುಳು, ಕಾಲಿಗೆ ಚಕ್ರ ಕಟ್ಟಿಕೊಂಡು ಈಡಿ ಕ್ಷೇತ್ರ ತಿರುಗಾಡಿ ಸರಕಾರದಿಂದ ಬರತಕ್ಕಂತಹ ಎಲ್ಲಾ ಮೂಲಸೌಕರ್ಯಗಳನ್ನು ಬಡವರಿಗೆ, ದೀನದಲಿತರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಬಣ್ಣಿಸಿದ್ದಾರೆ.
ರವಿ ಬಿರಾದರ ತಮ್ಮ ಬೆಳೆ ಬೆಳೆಸಿಕೊಳ್ಳುವುದಗೊಸ್ಕರ ಶಾಸಕರು ಲಿಂಗಾಯತ ವಿರೋಧಿ ಎಂದು ಹೇಳಿರುವುದ ಖಂಡನೀಯವಾಗಿದೆ. ಕ್ಷೇತ್ರದ ಜನರು ಬಹಳ ಜಾಗೃತರಾಗಿರುತ್ತಾರೆ. ಯಾರು ಒಳ್ಳೆಯವರು ಯಾರು ಕೆಟ್ಟವರು, ಯಾರು ವಿರೋಧಿಗಳು ಎಂದು ಕ್ಷೇತ್ರದ ಜನರಿಗೆ ಗೊತ್ತಾಗಿದೆ. ಮರುವ ದಿನಗಳಲ್ಲಿ ಶಾಸಕರಿಗೆ ಪ್ರಚಂಡ ಬಹುಮತಗಳಿಂದ ಆರಿಸಿ ತಂದು ಇಂತವರಿಗೆ ಕ್ಷೇತ್ರದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ತರಹ ಮುಂದುವರೆದರೆ ಬಸವರಾಜ ಬಿ. ಮತ್ತಿಮೂಡ ಅಭಿಮಾನಿ ಬಳಗದಿಂದ ಅವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಮಾಡಲಾಗುತ್ತದೆ ಎಂದು ವಾಗಮೊರೆ ಅವರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಹುಲ ಬಬಲಾದ, ಸಿದ್ದು ಕಾಂಬಳೆ, ಇನ್ನಿತರರು ಉಪಸ್ಥಿತರಿರುವರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…