ಭಾಲ್ಕಿ: ಶ್ರೀ ಚನ್ನಬಸವಾಶ್ರಮದಲ್ಲಿ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ 133ನೆಯ ಜಯಂತ್ಯುತ್ಸವದ ನಿಮಿತ್ಯವಾಗಿ ಹಮ್ಮಿಕೊಂಡಿರುವ ಶರಣದರ್ಶನ ಪ್ರವಚನದ ಉದ್ಘಾಟನೆಯನ್ನು ನೆರವೇರಿತು.
ಸಮಾರಂಭದ ಸಾನಿಧ್ಯವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಶಾಲಾ ಕಾಲೇಜುಗಳಿಗೆ ಶರಣರ ಹೆಸರುಗಳನ್ನು ಇಡುವ ಮೂಲಕ ಬಸವತತ್ವ ಪ್ರಸಾರಕ್ಕೆ ನಾಂದಿ ಹಾಡಿದರು. ಬಸವಕಲ್ಯಾಣದಲ್ಲಿ ನೂತನ ಅನುಭವಮಂಟಪ ಸ್ಥಾಪಿಸುವ ಮೂಲಕ ಶರಣ ಸಂಸ್ಕøತಿಯ ಪುನತ್ಥಾನಗೈದರು. ಅಂತಹ ಪೂಜ್ಯರ ಜಯಂತ್ಯುತ್ಸವದ ನಿಮಿತ್ಯವಾಗಿ ನಾವೆಲ್ಲರೂ ಶರಣರ ದರ್ಶನ ಪ್ರವಚನ ಆಲಿಸುವ ಮೂಲಕ ನಮ್ಮ ಜೀವನ ಬಸವಮಾರ್ಗದಲ್ಲಿ ಮುನ್ನಡೆಸಬೇಕೆಂದು ಆಶೀರ್ವಚನ ನೀಡಿದರು.
ಪ್ರವಚನಕಾರರಾದ ಮಾತೋಶ್ರೀ ಶ್ರೀದೇವಿತಾಯಿಯವರು ತಮ್ಮ ನುಡಿಯಲ್ಲಿ ಶರಣ ದರ್ಶನ ಪ್ರವಚನದ ಉದ್ದೇಶ ತಿಳಿಸಿದರು. ಶರಣರು ನಮಗೆ ಸುಖ-ಶಾಂತಿ-ನೆಮ್ಮದಿಯ ಮಾರ್ಗವನ್ನು ತೋರಿಸಿದ್ದಾರೆ. ಅವರ ವಚನಗಳನ್ನು ದಿನನಿತ್ಯ ಮೆಲಕು ಹಾಕುವ ಮೂಲಕ ನಾವು ನಮ್ಮ ಜೀವನ ಆನಂದಗೊಳಿಸಬೇಕು. ಅದಕ್ಕಾಗಿಯೇ ಪೂಜ್ಯರು ಪ್ರತಿವರ್ಷ ಇಂತಹ ಪ್ರವಚನಗಳ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ ಎಂದು ನುಡಿದರು.
ಸಮಾರಂಭದ ಉದ್ಘಾಟನೆಯನ್ನು ನಾಗಭೂಷಣ ಮಾಮಡಿ ಮಾಡಿದರು. ಸಿದ್ರಾಮಪ್ಪ ವಂಕೆ ಅಧ್ಯಕ್ಷತೆ ವಹಿಸಿದರು. ಸಿದ್ರಾಮಪ್ಪ ಅಣದೂರೆ ಬಸವಗುರುಪೂಜೆ ನೆರವೇರಿಸಿದರು. ಶೇಖರ ವಂಕೆ, ಶಂಭುಲಿಂಗ ಕಾಮಣ್ಣ, ವಸಂತ ಹುಣಸನಾಳೆ, ಮಲ್ಲಮ್ಮ ಆರ್.ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ದೀಪಕ ಥಮಕೆ ನಿರೂಪಿಸಿದರು. ವೀರಣ್ಣ ಕುಂಬಾರ ಸ್ವಾಗತಿಸಿರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…