ಬಿಸಿ ಬಿಸಿ ಸುದ್ದಿ

ತೊಗರಿಯಿಂದ ಲಾಭಕ್ಕಿಂತ ಲಾಗೋಡಿನೇ ಹೆಚ್ಚಾತ್ರಿ

ಕಲಬುರಗಿ: ‘ಮೊದಲೇ ಮಲಿ ಬಂದು 2 ಬಾರಿ ಮುರದು ಬಿತ್ತಿದ್ವಿ, ಅದರಿಂದಲೇ ಕಿಸೆ ಖಾಲಿಯಾಗಿತ್ತು. ಈಗ ನೋಡಿದ್ರ ಕೈಗೆ ಬಂದ ತುತ್ತು ಬಾಯಿಗೆ ಬರದಂಗೆ ಆಗೈತಿ. ನೆಟೆ ರೋಗ ಬಂು ಬೆಳೆದು ನಿಂತ ತೊಗರಿ ಒಣಗಿ ಹೋಗ್ಯದರಿ. ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. ನಾಲ್ಕು ದಾನಿ ಬರೋದಿಲ್ಲ, ಹತ್ತಾರು ಸಾವಿರ ಖರ್ಚ ಮಾಡಿತೊಂಡು ಪರದಾಡುತ್ತಿz್ದÉೀವೆ, ಸರ್ಕಾರದಿಂದ ಪರಿಹಾರ ಬರೋವ್ಹಂಗ ಮಾಡ್ರಿ’ ಎಂದು ಜೇವರ್ಗಿ ತಾಲೂಕಿನ ತೊಗರಿ ರೈತರು ಅಲ್ಲಿನ ಢಾ. ಡಾ, ಅಜಯ್ ಧರ್ಮಸಿಂಗ್ ಮುಂದೆ ತಮ್ಮ ನೋವು, ಯಾತನೆ ತೋಡಿಕೊಂಡಿದ್ದಾರೆ.

ಗುರುವಾರ ತಾವು ಪ್ರತಿನಿಧಿಸುತ್ತಿರುವ ಜೇವರ್ಗಿ ಮತಕ್ಷೇತ್ರದ ಹಲವು ಹಳ್ಳಿಗಳಲ್ಲಿ ಸುತ್ತಾಡಿದ ಡಾ. ಅಜಯ್ ಸಿಂಗ್ ನೆಟೆರೋಗ ಬಾಧೆಯಿಂದ ಒಣಗಿ ಹಾಳಾಗಿರುವ ತೊಗರಿ ಹೊಲಗದ್ದೆಗೆ ಬೇಟಿ ನೀಡಿ ರೈತರೊಂದಿಗೆ ಮಾತುಕೆ ನಡೆಸಿದರು. ಕಟ್ಟಿ ಸಂಗಾವಿ, ಹಸನಾಪೂರ, ಜೇವರ್ಗಿಯಿಂದ ಕಲಬುರಗಿಗೆ ಸಾಗುವ ದಾರಿಯಲ್ಲಿ ಬರುವ ತಮ್ಮ ಕ್ಷೇತ್ರದ ತೊಗರಿ ಹೊಲಗಳಲ್ಲಿ ಹೋಇ ಅಲ್ಲಿದ್ದ ರೈತರ ಗೋಳು ಕೇಳಿದರು.

ಕಟ್ಟಿ ಸಂಗಾವಿ ತೊಗರಿ ಹೊಲ ಒಂದರಲ್ಲಿ ರೈತರು ತಮ್ಮ ಗೋಳು ವಿವರಿಸುತ್ತ ಸರ್ಕಾರದಿಂದ ಪರಿಹಾರ ಕೊಡಿಸಿ ಎಂದು ಆಗ್ರಹಿಸಿದಾಗ ತಕ್ಷಣ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಕರೆ ಮಾಡಿದ ಡಾ. ಅಜಯ್ ಸಿಂಗ್ ಜೇವರ್ಗಿ ಸೇರಿದಂತೆ ಕಲಬುರಗಿಯಾದ್ಯಂತ ತೊಗರಿ ಶೇ. 80 ರಷ್ಟು ಹಾಳಾಗಿರೋದರ ಬಗ್ಗೆ ಗಮನ ಸೆಳೆದರಲ್ಲದೆ ತಕ್ಷಣ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ತೊಗರಿ ಬಿತ್ತಿ ಕೈ ಸುಟ್ಟುಕೊಂಡಿರುವ ರೈತರಿಗೆ ಪರಿಹಾರ ವಿತರಣೆಗೆ ಕರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಮ್ಮ ಭಾಗದ ರೈತರ ಪ್ರಮುಖ ಬೆಳೆಯಾದ ತೊಗರಿ 4.  78 ಲಕ್ಷ ಹೆಕ್ಟರ್ ಬಿತ್ತನೆಯಾಗಿತ್ತು. ಈ ಪೈಕಿ ಮಳೆಗೆ 1. 50 ಲಕ್ಷ ಹಾಳಾಗಿ ಹೋಯ್ತು. ಮತ್ತೆ ರೈತರು ಹೆಚ್ಚಿನ ವೆಚ್ಚ ಮಾಡಿ ಬಿತ್ತಿದ್ದಾರೆ. ಕಟಾವಿಗೆ ಬರುವ ಹಂತದಲ್ಲಿದ್ದ ತೊಗರಿ ಬೆಳೆಗೆ ನೆಟೆರೋಗದಿಂದ ಹಾಳಾಗಿದೆ. ಇದರಿಂದ ಅಪಾರ ಪ್ರಮಾಣದ ಬೆಳೆಯು ಹಾನಿಯಾಗಿದೆ. 2 ಲಕ್ಷ ಹ್ಟೆರ್‍ನಷು ರೈತರ ತೊಗರಿ ಹಳಾಗಿರೋ ಅಂದಾಜಿದೆ. ಸಮೀಕ್ಷೆ ಬೇಗ ನಡೆಸುವಂತೆ ರೈತರೇ ಆಗ್ರಹಿಸುತ್ತಿದ್ದಾರೆಂದು ಡಾ. ಅಯ್ ಸಿಂಗ್ ಸಚಿವ ಅಶೋಕ ಅವರಿಗೆ ತೊಗರಿ ಕಣಜದಲ್ಲಿನ ಗೋಳಿನ ಚಿತ್ರಣ ವಿವರಿಸಿದರು.

ನೆಟೆ ರೋಗಕ್ಕೆ ತುತ್ತಾಗ ಪ್ರತಿ ಎಕರೆಗೆ 25 ಸಾವಿರ ರು ನಂತೆ ರೈತರಿಗೆ ಪರಿಹಾರ ರಾಜ್ಯ ಸರ್ಕಾರ ಘೋಷಿಸಬೇರು. ಜಿಲ್ಲೆಯ ಏಕೈಕ ವಾಣಿಜ್ಯ ಬೆಳೆ ತೊಗರಿ. ಇದು ಶೇ. 80 ರಷ್ಟು ಹಾಳಾಗಿರೇದರಿಂದ ರೈತರು ಕಂಗಾಲಾಗಿದ್ದಾರೆ. ಅವರಿಗೆ ಸಂಕಷ್ಟ ಸಮಯದಲ್ಲಿ ಸರ್ಕಾರ ಕೈಹಿಡಿಯಬೇಕೆಂದು ಕದಂಯಾ ಸಚವಿರ ಗಮನ ಸೆಳೆದರು.

ತೊಗರಿ ನೆಟೆ ರೋಗದಿಂದ ಒಣಗಿ ನಿಂತು 3 ವಾರ ಕಳೆÉದರೂ ಯಾರೊಬ್ಬರೂ ಹೊಲಗದ್ದೆಗೆ ಭೇಟಿ ನೀಡಿಲ್ಲ, ಸಮೀಕ್ಷೆ ನಡೆಸಿಲ್ಲ, ಇದರಿಂದ ನಮಗೆ ಗಾಬರಿಯಾಗಿದೆ. ರೋಗದಿಂದ ತೊಗರಿ ಹಾಳಾಯ್ತು. ಬದುಕಿಗೆ ಹೇಗೆಂಬ ಚಿಂತೆ ಕಾಡುತ್ತಿದೆ. ನಮ್ಮ ಸಂಸಾರವೇ ಇದರ ಮೇಲೆ ನಡೆಯುತ್ತಿತ್ತು. ಮುಂದೇನು  ಎಂಬ ಚಿಂತೆ ಕಾಡುತ್ತಿದೆ ಎಂದು ತೊಗರಿ ರೈತರು ಶಾಸಕರ ಮುಂದೆ ತಮ್ಮ ಆತಂಕ ತೋಡಿಕೊಂಡರು. ಸರ್ಕಾರ ಪರಿಹಾರ ನೀಡದೆ ಹೋದಲ್ಲಿ ತಾವು ಇನ್ನೂ ಸಂಕಷ್ಟಕ್ಕೆ ಸಿಲುಕೋದಾಗಿಯೂ ರೈತರಾದ ರುದ್ರಗೌಡ ಪಾಟೀಲ್ ಸೇರಿದಂತೆ ಅನೇಕರು ತಮ್ಮ ನೋವು, ಆತಂಕ ಶಾಸಕರ ಮುಂದೆ ಹೇಳಿಕೊಂಡರು.

ಬೆಳಗಾವಿಯಲ್ಲಿ ಡಿ. 19 ರಿಂದ ಚಲಿಗಾಲದ ಅಧಿವೇಶನ ಶುರುವಾಗುತ್ತಿದೆ. ಈ ಅಧಿವೇಶನದಲ್ಲಿ ತೊಗರಿ ರೈತರ ಈ ಸಮಸ್ಯೆ ಪ್ರಸ್ತಾಪ ಮಾಡುತ್ತೇವೆ. ರೈತರಿಗೆ ಸೂಕ್ತ ನ್ಯಾಯ ದೊರಕುವಂತೆ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತದೆ ಎಂದು ಡಾ. ಅಜಯ್ ಸಿಂಗ್ ರೈತರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸಿರಿ, ರುಕ್ಕುಂ ಪಟೇಲ್ ಇಜೇರಿ, ಚಂದ್ರಶೇಖರ ಹರನಾಳ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago