ಸುರಪುರ: ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಅಪಾರ ಪ್ರಮಾಣದಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ಪ್ರವಾಹ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಸುಮತಿಶ್ರೀ ನವಲಿ ಮತ್ತು ತಂಡ ಭೇಟಿ ನೀಡಿ,ನಂತರ ನಗರದ ಟೈಲರ್ ಮಂಜಿಲನಲ್ಲಿ ಪತ್ರಿಕಾಗೋಷ್ಟಿ ನಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಮತಿಶ್ರೀಯವರು,ಮಹಾರಾಷ್ಟ್ರದಲ್ಲಿ ಸುರಿದ ಮಹಾ ಮಳೆಯಿಂದ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಸ್ಥಿತಿ ಎದುರಾಗಿದೆ,ಇಂತಹ ಸಂದರ್ಭದಲ್ಲಿ ಸರಕಾರ ತನ್ನ ಜವಬ್ದಾರಿ ಮರೆತಿದೆ.ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿನ ಜನರು ನೆರೆಯಿಂದ ನಲುಗಿದ್ದಾರೆ.ಅಲ್ಲದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ಅಕ್ಷರಶ ನಿರಾಶ್ರಿತಗೊಂಡು ಬದುಕುವುದೆ ಕಷ್ಟವಾಗಿದೆ.ಸರಕಾರ ಸಂಪೂರ್ಣ ವಿಫಲವಾಗಿ ಕೈಚೆಲ್ಲಿ ಕುಳಿತಂತಿದೆ.ಯಾದಗಿರಿ ರಾಯಚೂರು ಜಿಲ್ಲೆಗಳಲ್ಲಿನ ನದಿ ಪಾತ್ರದ ಸಾವಿರಾರು ಎಕರೆ ಜಮೀನು ಹಾನಿಗೀಡಾಗಿದ್ದು ರೈತರು ತೀವ್ರ ಕಷ್ಟ ಹೆದರಿಸುವಂತಾಗಿದೆ.ಇಂತಹ ಸಂದರ್ಭದಲ್ಲಿ ಜನರೊಂದಿಗೆ ಸರಕಾರ ಇರಬೇಕಿತ್ತು,ಆದರೆ ಮುಖ್ಯಮಂತ್ರಿಗಳು ಕೇವಲ ವೈಮಾನಿ ಸಮೀಕ್ಷೆ ಮಾಡಿ ಹೋಗಿದ್ದಾರೆ.ಇಷ್ಟು ಸಾಲದು ಮುಖ್ಯಮಂತ್ರಿಗಳು ಖುದ್ದಾಗಿ ನೆರೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಅನೇಕ ವರ್ಷಗಳಿಂದ ರೈತರು ಬರಗಾಲದಿಂದ ಸಂಕಷ್ಟ ಹೆದರಿಸಿದ್ದಾರೆ.ಈಗ ನೆರೆ ಮತ್ತಿಷ್ಟು ಸಂಕಷ್ಟಕ್ಕೆ ದೂಡಿದೆ.ಆದ್ದರಿಂದ ಸರಕಾರ ರೈತರ ಪ್ರತಿ ಎಕರೆಗೆ ಇಪ್ಪತ್ತೈದು ಸಾವಿರ ರೂಪಾಯಿಗಳ ಪರಿಹಾರ ನೀಡಬೇಕೆಂದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ ಮಾತನಾಡಿ, ಪ್ರವಾಹದಿಂದ ರೈತರು,ಕಾರ್ಮಿಕರು ಮತ್ತು ಬಡಜನತೆ ತೀವ್ರ ತೊಂದರೆಯಲ್ಲಿದ್ದಾರೆ.ಸರಕಾರ ತೆರೆದಿರುವ ಗಂಜಿ ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆಯಿಲ್ಲ.ಸರಿಯಾದ ವ್ಯವಸ್ಥೆ ಕಲ್ಪಿಸಬೇಕು,ಅಲ್ಲದೆ ಹಿಂದಿನ ಸರಕಾರ ಘೋಷಿಸಿದ್ದ ರೈತರ ಸಂಪೂರ್ಣ ಸಾಲ ಮನ್ನಾ ಯೋಜನೆಯು ೭೫% ರೈತರ ಸಾಲ ಮನ್ನಾವಾಗಿಲ್ಲ.ಇದರಿಂದ ಕೇವಲ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ಲಾಭವಾಗಿದೆ.ಆದ್ದರಿಂದ ಸರಕಾರ ಕೂಡಲೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರಾದ ಅಯ್ಯಣ್ಣ ಹಾಲಬಾವಿ,ವಿಜಯಲಕ್ಷ್ಮೀ ಕುಲಗೋಡು,ಮಲ್ಲಮ್ಮ ಯಮನೂರ,ಕಸ್ತೂರಿ ಹಂಚಿನಾಳ,ಹಣಮಂತ್ರಾಯ ಮಡಿವಾಳ,ಗೋವಿಂದ ಪತ್ತಾರ್,ವೆಂಕಟೇಶಪ್ಪ ಕುಂಬಾರ,ಲಕ್ಷ್ಮೀಕಾಂತ ನಾಯಕ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…