ಬಿಸಿ ಬಿಸಿ ಸುದ್ದಿ

ನಾಳಿನ ಭವಿಷ್ಯಕ್ಕಾಗಿ ಸರ್ವರ ಜೊತೆ ಬೆರೆತು, ಅರಿತು ಬದುಕು ಕಟ್ಟಿಕೊಳಿ: ಪೂಜ್ಯ ಶ್ರೀ ಡಿ. ಸುರೇಂದ್ರಕುಮಾರ ಕರೆ

ಕಲಬುರಗಿ: ನಮ್ಮ ಪೂರ್ವಜರು ಹಾಕಿಕೊಟ್ಟು ಹೋದ ಮಾರ್ಗದಲ್ಲಿ ಮುನ್ನಡೆದು ವರ್ತಮಾನದ ಸಂದರ್ಭಕ್ಕನುಸಾರವಾಗಿ ಅನುಸರಿಸಿಕೊಂಡು ನಾಳಿನ ಭವಿಷ್ಯಕ್ಕಾಗಿ ಸರ್ವರ ಜೊತೆ ಬೆರೆತು, ಅರಿತು ಬದುಕು ಕಟ್ಟಿಕೊಳ್ಳುವಂತೆ ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಅಧ್ಯಕ್ಷರಾದ ಪೂಜ್ಯ ಶ್ರೀ ಡಿ. ಸುರೇಂದ್ರಕುಮಾರ ಕರೆ ನೀಡಿದರು.

ಭಾರತೀಯ ಜೈನ ಮಿಲನ ಧಾರವಾಡ ವಲಯ-8, ಭಾರತೀಯ ಜೈನ ಮಿಲನ ಜಿಲ್ಲಾ ಶಾಖೆ ವತಿಯಿಂದ ನಗರದ ಶ್ರೀ 1008 ಭಗವಾನ ಮಹಾವೀರ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಆಯೋಜಿಸಿದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು .

ರಾಷ್ಟ್ರ ಮತ್ತು ನಾಡಿನಲ್ಲಿ ಆಳ್ವಿಕೆ ನಡೆಸಿದ ಜೈನ ದೊರೆಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು ಇಂದಿಗೂ ನಾಡಿನ ಅನೇಕ ಕಡೆ ಈ ಧರ್ಮದ ಕುರಿತು ಗತ ವೈಭವ ಸಾರುವ ಸ್ಮಾರಕಗಳನ್ನು, ಜೈನ ಬಸದಿಗಳನ್ನು, ಕೋಟೆ-ಕೊತ್ತಲೆಗಳನ್ನು ಕಾಣಬಹುದೆಂದು ಇತಿಹಾಸವನ್ನು ಮನಮುಟ್ಟುವಂತೆ ವಿವರಿಸಿದ ಅವರು ಪರೋಪಕಾರ, ತ್ಯಾಗ, ಅಹಿಂಸೆ, ಶಾಂತಿ ನಮ್ಮ ಮೂಲ ಮಂತ್ರವಾಗಿದ್ದು ವರ್ತಮಾನದ ದಿನಗಳಲ್ಲಿ ಯುದ್ಧ, ಭೀತಿ, ಆತಂಕ ಎಲ್ಲೆಡೆ ಮನೆ ಮಾಡಿದ್ದು ಭಗವಾನ ಮಹಾವೀರರ ಸಂದೇಶ ಮನುಕುಲಕ್ಕೆ ಅತ್ಯಗತ್ಯವಾಗಿದ್ದು ಈ ದಿಶೆಯಲ್ಲಿ ಭಾರತೀಯ ಜೈನ ಮಿಲನ ದ ವತಿಯಿಂದ ನಮ್ಮ ರಾಷ್ಟ್ರ ಸೇರಿದಂತೆ ಅಮೇರಿಕಾ, ಇಂಗ್ಲೆಂಡ, ದುಬೈ ಮುಂತಾದ ವಿದೇಶಗಳಲ್ಲಿಯೂ ಸಹ ಶಾಖೆಗಳನ್ನು ತೆರೆಯುವುದರ ಮೂಲಕ ಅಹಿಂಸೆಯನ್ನು ಪ್ರೇಮವನ್ನು ಪರಸ್ಪರ ಸಹಕಾರವನ್ನು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಮನೋಭಾವ ಮೂಡಿಸಲಾಗುತ್ತಿದ್ದು ಇದರ ಪ್ರಯತ್ನವಾಗಿ ಅಲ್ಲಲ್ಲಿ ಉತ್ತಮವಾದ ಪ್ರತಿಕ್ರಿಯೆ ಬರುತ್ತಿರುವುದು ತಮಗೆ ಸಮಾಧಾನ ತರುತ್ತಿದೆ ಎಂದು ನುಡಿದರು.

ಎಲ್ಲ ಜೈನರು ಶ್ರೀಮಂತರಲ್ಲ, ಜೈನ ಸಮುದಾಯದಲ್ಲೂ ಸಹ ಕಡುಬಡವರಿದ್ದು ಅಂಥವರನ್ನು ಗುರುತಿಸಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆತ್ತುವ ಕೆಲಸವಾಗಬೇಕಾಗಿದ್ದು ಸರಕಾರದ ಯೋಜನೆಗಳನ್ನು ಸಮುದಾಯದ ಕಟ್ಟ ಕಡೆಯ ಜನತೆಗೆ ತಲುಪಿಸುವ ಕಾರ್ಯ ಆಗಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದ ಅವರು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರಾಗಿ ಸುರೇಶ ತಂಗಾ ರವರು ನೇಮಕವಾದ ನಂತರ ಸರ್ಕಾರದ ಸೌಲಭ್ಯ ಹಾಗೂ ಯೋಜನೆಗಳನ್ನು ಸಮುದಾಯದ ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯವಾಗುತ್ತಿರುವ ಬಗ್ಗೆ ಮುಕ್ತ ಕಂಠದಿಂದ ಆಶೀರ್ವದಿಸಿದ ಅವರು ನಮ್ಮ ಸಂಸ್ಕøತಿ, ಪರಂಪರೆಯನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ಯುವ ಸಮುದಾಯದ ಮೇಲೆ ಇದ್ದು, ಸೇವಾ ಮನೋಭಾವವಿರುವ ಯುವ ಶಕ್ತಿಯನ್ನು ಜೈನ ಸಮುದಾಯ ಸಮರ್ಥವಾಗಿ ಬಳಸಿಕೊಳ್ಳುವುದರ ಮೂಲಕ ಬದಲಾವಣೆಯಡೆಗೆ ಹೆಜ್ಜೆ ಹಾಕುವಂತೆ ಅವರು ಸೂಚಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಈ ನಾಡಿನಲ್ಲಿ ಬಹು ದೊಡ್ಡ ಕ್ರಾಂತಿ ನಡೆಯುತ್ತಿದ್ದು, ಮಹಿಳಾ ಸಬಲೀಕರಣ, ಹೈನುಗಾರಿಕೆ, ಮಹಿಳಾ ಸ್ವ ಸಹಾಯ ಗುಂಪುಗಳ ಮೂಲಕ ಹೊಸ ಕ್ರಾಂತಿಯನ್ನು ಮಾಡಿದ್ದು ನಾಡಿನ 52 ಲಕ್ಷ ಕುಟುಂಬಗಳು ಧರ್ಮಸ್ಥಳ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿದ್ದು ಸುಮಾರು 17 ಸಾವಿರ ಕೋಟಿ ರೂಪಾಯಿ ವಹಿವಾಟು ಆಗುತ್ತಿರುವುದನ್ನು ನೋಡಿದರೆ ಕ್ಷೇತ್ರನಾಥ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಪೂಜ್ಯ ವೀರೇಂದ್ರ ಹೆಗಡೆಯವರ ದೂರದೃಷ್ಟಿತ್ವ ಶಕ್ತಿ ನಮ್ಮೆಲ್ಲರಿಗೂ ಮಾದರಿಯಾಗಲಿದೆ ಎಂದು ನುಡಿದರು.

ಇಂದಿನ ವರ್ತಮಾನದ ಯುಗದಲ್ಲಿ ಪರಸ್ಪರ ಸಂಪರ್ಕ, ಸಂವ್ಹಾನ, ಸಹಕಾರ ಮೂರು ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಬದುಕು ಹಸನಾಗಲಿದೆ ಎಂದು ತಿಳಿ ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಪಾಟೀಲ ರವರು ಮಾತನಾಡಿ ಪ್ರತಿಯೊಬ್ಬರು ಸನ್ಮಾರ್ಗ ಮತ್ತು ಸತ್ಯದ ದಾರಿಯಲ್ಲಿ ನಡೆಯುವ ಮೂಲಕ ಸುಂದರ ಮತ್ತು ಸುಸಂಕೃತ ಸಮಾಜ ನಿರ್ಮಾಣ ಮಾಡುವಂತೆ ಕರೆ ನೀಡಿದ ಅವರು ಸತ್ಯದ ದಾರಿ ನಿತ್ಯ ಮತ್ತು ಮೋಕ್ಷದಾಯಕವಾಗಿದ್ದು, ಮನುಷ್ಯ ಧರ್ಮ ಮತ್ತು ಸತ್ಯದ ದಾರಿಯಲ್ಲಿ ನಡೆದರೆ ಮನಃಶಾಂತಿ ಯಿಂದ ಬದುಕಬಹುದೆಂದು ನುಡಿದ ಅವರು ಪ್ರತಿಯೊಬ್ಬರೂ ನೀತಿಯಿಂದ ಬದುಕುವಂತೆ ಕರೆ ನೀಡಿದರು.

ನಾಡಿನ ಖ್ಯಾತ ಸಂಶೋಧಕರಾದ ಡಿ.ಎನ್.ಅಕ್ಕಿಯವರು ಉಪನ್ಯಾಸ ನೀಡಿದರು. ಜೈನ ಮಂದಿರ ಅದ್ಯಕ್ಷರಾದ ನಾಗನಾಥ ಚಿಂದೆಯವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರಾದ ಸುರೇಶ ತಂಗಾ ಅತಿಥಿಗಳಾಗಿ ಭಾಗವಹಿಸಿದ್ದರು.

ಸಾನ್ವಿ ಕುಲಕರ್ಣಿ ಪ್ರಾರ್ಥಿಸಿದರು. ಮಿಲನದ ಜಿಲ್ಲಾ ಅಧ್ಯಕ್ಷರಾದ ರಾಜೇಂದ್ರ ಕುಣಚಗಿ ಸ್ವಾಗತಿಸಿದರು, ರೇಖಾ ವಿನೋದ ಬಬಲಾದ ನಿರೂಪಿಸಿದರು, ಶ್ರೇಣಿಕ ವಿ. ಪಾಟೀಲ ವಂದಿಸಿದರು. ಸಮಾರಂಭದಲ್ಲಿ ಜೈನ ಮಿಲನ ಪದಾಧಿಕಾರಿಗಳಾದ ರಮೇಶ ಬೆಳಕೇರಿ, ಅನೀಲ ಬಸ್ಮೆ ಸೇರಿದಂತೆ ಸಮುದಾಯದ, ಹಿರಿಯರು, ಗಣ್ಯರು, ಮಹಿಳೆಯರು ಉಪಸ್ಥಿತರಿದ್ದರು.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

50 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

58 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago