ಬಿಸಿ ಬಿಸಿ ಸುದ್ದಿ

ನೀರಿನ ಟ್ಯಾಂಕಿಗೆ ಬಿದ್ದು 30 ಕೋತಿಗಳ ಸಾವು

ವಾಡಿ: ಬಳಕೆಯಲ್ಲಿಲ್ಲದ ಶಿಥಿಲ ನೀರಿನ ಟ್ಯಾಂಕ್‍ಗೆ ಬಿದ್ದ ನಲವತ್ತಕ್ಕೂ ಹೆಚ್ಚು ಕೋತಿಗಳಲ್ಲಿ ಸುಮಾರು ಮೂವತ್ತು ಕೋತಿಗಳು ನರಳಿ ನರಳಿ ಮೃತಪಟ್ಟ ಘಟನೆ ಹಳಕರ್ಟಿ ಗ್ರಾಮದಲ್ಲಿ ಸಂಭವಿಸಿದೆ. ಕೋತಿಗಳ ಸಾಮೂಹಿಕ ಸಾವಿನಿಂದ ದುರ್ವಾಸನೆ ಹಬ್ಬಿದ್ದು, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಗ್ರಾಪಂ ಕೇಂದ್ರ ಸ್ಥಾನವಾಗಿರುವ ಹಳಕರ್ಟಿ ಗ್ರಾಮದಲ್ಲಿರುವ ಶಿಥಿಲ ನೀರಿನ ಟ್ಯಾಂಕ್ (ಓವರ್ ಹೆಡ್ ಟ್ಯಾಂಕ್) ಬೀಳುವ ಹಂತಕ್ಕೆ ತಲುಪಿದ್ದರ ಪರಿಣಾಮ ಕಳೆದ ಐದಾರು ವರ್ಷಗಳಿಂದ ನೀರು ಸಂಗ್ರಹ ಕೈಬಿಡಲಾಗಿದೆ. ಕಳೆದ ನಾಲ್ಕಾರು ದಿನಗಳ ಹಿಂದೆ ನೀರು ಕುಡಿಯಲು ಹೋಗಿ ಸುಮಾರು ಕೋತಿಗಳು ಪ್ರಾಣ ಕಳೆದುಕೊಂಡಿವೆ. ಹಬ್ಬಿದ ದುರ್ವಾಸನೆ ಮತ್ತು ಮರದ ಮೇಲೆ ಕೋತಿಗಳ ಪರದಾಟ ಕಂಡು ಗ್ರಾಮಸ್ಥರು ಟ್ಯಾಂಕ್ ಪರಿಶೀಲಿಸಿದಾಗ ಕೋತಿಗಳು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಯುವಕರು ಹಗ್ಗ ಇಳಿಬಿಟ್ಟು ಕೆಲವು ಕೋತಿಗಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ನೀರು ಆಹಾರವಿಲ್ಲದೆ ಐದಾರು ದಿನಗಳ ಕಾಲ ಟ್ಯಾಂಕಿನಲ್ಲೇ ನರಳಾಡಿದ್ದ ಕೋತಿಗಳು ಪ್ರಾಣಬಿಟ್ಟಿವೆ.

ಗ್ರಾಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ: ಜನ ವಸತಿ ಜಾಗದಲ್ಲಿರುವ ಈ ಟ್ಯಾಂಕ್ ನೆಲಕ್ಕುರುಳಿ ಪ್ರಾಣಾಪಾಯ ತಂದಿಡುವ ಮುಂಚೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡು ತೆರವು ಮಾಡಬೇಕು ಎಂಬುದು ಗ್ರಾಮಸ್ಥರ ಕೂಗಾಗಿದೆ. ಕೋತಿಗಳು ಬಿದ್ದು ಸತ್ತರೂ ಗ್ರಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಚುನಾಯಿತ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶ ಕಾರಣವಾಗಿದೆ. ದುರಂತರವೆಂದರೆ ಗ್ರಾಮದ ಖಾಸಗಿ ಶಾಲೆಯೊಂದರ ಅಂಗಳದಲ್ಲಿದ್ದ ಇಂತಹದ್ದೇ ಇನ್ನೊಂದು ಓವರ್ ಹೆಡ್ ಟ್ಯಾಂಕ್ ನಾಲ್ಕು ವರ್ಷಗಳ ಹಿಂದೆ ಧರೆಗುರುಳಿತ್ತು. ಅದೃಷ್ಠವಶಾತ್ ಅಂದು ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಈಗ ಮತ್ತೊಂದು ಟ್ಯಾಂಕ್ ಬೀಳುವ ಹಂತಕ್ಕೆ ತಲುಪಿದ್ದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ರಾಪಂ ಕಚೇರಿ ಮುಂದೆ ಹೋರಾಟ ನಡೆಸಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಸ್ವತಹ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ ಅವರು ಬಂದು ಗ್ರಾಮದಲ್ಲಿ ಸಂಚರಿಸಿ ಪರಸ್ಥಿತಿ ಕಣ್ಣಾರೆ ಕಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಪಕ್ಷದ ಮುಖಂಡರಾದ ಗೌತಮ ಪರತೂರಕರ, ಹೇಮಂತ ವಾಕೋಡೆ, ಚೌಡಪ್ಪ ಗಂಜಿ, ಮಹಾಂತೇಶ ಹುಳಗೋಳ, ಶರಣು ಪಾಣೆಗಾಂವ, ದತ್ತಾತ್ರೇಯ ಹುಡೇಕರ ಹಾಗೂ ಈರಣ್ಣ ಇಸಬಾ ದೂರಿದ್ದಾರೆ. ಪರಿಣಾಮ ಇಂದು ಈ ಟ್ಯಾಂಕಿನಲ್ಲಿ ಮೂವತ್ತರಿಂದ ನಲವತ್ತು ಕೋತಿಗಳು ಬಿದ್ದು ಹೊರ ಬರಲಾಗದೆ ಉಸಿರುಗಟ್ಟಿ ಸತ್ತಿವೆ. ಗ್ರಾಮದಲ್ಲಿ ದುರ್ವಾಸನೆ ಹರಡಿದೆ. ಸಾಂಕ್ರಾಮಿಕ ರೋಗ ಹರಡುವ ಆತಂಕ ಉಂಟಾಗಿದೆ.

ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಶಿಥಿಲ ಟ್ಯಾಂಕ್ ತೆರವು ಮಾಡಲು ಮುಂದಾಗಬೇಕು. ಇದಕ್ಕೂ ಮೊದಲು ಮೃತಪಟ್ಟ ಕೋತಿಗಳನ್ನು ಹೊರ ತೆಗೆದು ಔಷಧ ಸಿಂಪರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago