ಶಹಾಬಾದ: ಜಗದ್ಗುರು ರೇಣುಕರಿಂದ ಸ್ಥಾಪಿಸಲ್ಪಟ್ಟ ವೀರಶೈವ ಧರ್ಮವು ಮಾನವ ಧರ್ಮಕ್ಕೆ ಜಯ ಮತ್ತು ವಿಶ್ವಕ್ಕೆ ಶಾಂತಿ ಬಯಸುವ ಆಶಯ ಹೊಂದಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಅವರು ಶುಕ್ರವಾರ ತಾಲೂಕಿನ ತೊನಸನಹಳ್ಳಿ(ಎಸ್)ಗ್ರಾಮದ ಗುರು ಸಂಗಮೇಶ್ವರರ ಸಂಸ್ಥಾನ ಮಠದ ಗೋಪುರದ ಕಳಸಾರೋಹಣ ಮತ್ತು ಮಂಗಲ ಭವನದ ಉದ್ಘಾಟನೆ ನೇರವೇರಿಸಿ ಮತ್ತು ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಸಮೃದ್ಧಿ ಉಂಟಾಗಬೇಕಾದರೆ ಧರ್ಮದ ಅಡಿಪಾಯ ಅವಶ್ಯಕವಾಗಿ ಬೇಕಾಗಿದೆ. ಇಂದು ಜನರು ಆಧುನಿಕತೆಗೆ ಮಾರುಹೋದ ಹಿನ್ನೆಲೆಯಲ್ಲಿ ಅಶಾಂತಿ, ಅತೃಪ್ತಿ ತಾಂಡವವಾಡುತ್ತಿದೆ. ಜಾತಿ, ರಾಜಕೀಯ ಹಾಗೂ ಹಣದ ಹಿಂದೆ ಬೆನ್ನತ್ತಿದ ಮಾನವನ ಒತ್ತಡದ ಬದುಕಿನಲ್ಲಿ ಅಶಾಂತಿ ಉಂಟಾಗುತ್ತಿದೆ. ಈ ಅಶಾಂತಿ ತೊಲಗಿ ನೆಮ್ಮದಿಯ ಬದುಕನ್ನು ನಿರ್ಮಾಣ ಮಾಡಲು ತೊನಸನಹಳ್ಳಿಯ(ಎಸ್)ನ ಶ್ರೀಗಳಾದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಧರ್ಮ ಉಳಿಸುವ ಕಾರ್ಯಕ್ಕೆ ಅಣಿಯಾಗಿದ್ದಾರೆ ಎಂದರು.
ತೊನಸನಹಳ್ಳಿ ಶ್ರೀ ಮಠದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯ ಅಧಿಕಾರ, ಅಂತಸ್ತು, ಧನ, ಕನಕ, ವಸ್ತು, ವಾಹನ, ಸಂಪಾದಿಸುವುದೇ ಸಾಧನೆ ಎಂದು ಭಾವಿಸಿದಂತಿದೆ. ಬದುಕಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಸದ್ಭಾವನೆ ಪ್ರಾಪ್ತಿಗೆ ಧರ್ಮದ ಪರಿಪಾಲನೆ ಅತ್ಯಗತ್ಯ.ಆ ದೃಷ್ಠಿಯಲ್ಲಿ ರಂಭಾಪುರಿಯ ಭಗವಾತ್ಪದರು ಬಂದು ನಮಗೆಲ್ಲಾ ಧರ್ಮದ ಭೋಧನೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಮನುಷ್ಯನ ಸಂಸಾರ ಬರಿ ದುಃಖಗಳಿಂದ ಕೂಡಿದ್ದು, ಬದುಕಿನಲ್ಲಿ ಸುಖವನ್ನು ಕಾಣಲು ಗುರುವಿನ ಕರುಣೆ ಅವಶ್ಯಕ.ರಂಭಾಪುರಿ ಜಗದ್ಗುರುಗಳು ಹಾಗೂ ತೊನಸನಹಳ್ಳಿ ಶ್ರೀಗಳ ಆಶೀವಾರ್ದದಿಂದ ಶಾಸಕನಾಗಿದ್ದೆನೆ.ಅಲ್ಲದೇ ಗ್ರಾಮದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ.ಅವರ ಸೇವಕನಾಗಿ ಕೆಲಸ ಮಾಡುತ್ತಿದ್ದೆನೆ.ನಿಮ್ಮೆಲ್ಲರ ಋಣ ಎಂದಿಗೂ ತೀರಿಸುವಂತಿಲ್ಲ ಎಂದರು.
ಹೊನ್ನಕಿರಣಗಿಯ ಪೂಜ್ಯರಾದ ಚಂದ್ರಗುಂಡ ಶಿವಾಚಾರ್ಯರು, ದೇವಾಪುರ ದೋರನಳ್ಳಿ ಮಳಖೇಡ್ ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ಮುಗಳನಾಗಾವನ ಸಿದ್ದಲಿಂಗ ಶಿವಾಚಾರ್ಯರು, ಶ್ರೀನಿವಾಸ ಸರಡಗಿ ಟೇಂಗಳಿ, ಹಲಕರ್ಟಿ, ನದಿಸಿನ್ನೂರ, ಯರಗೋಳ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಮತ್ತು ಅಣವೀರ ಇಂಗಿನಶೆಟ್ಟಿ, ಭಾಗೀರಥಿ ಗುನ್ನಾಪೂರ ವೇದಿಕೆ ಮೇಲೆ ಇದ್ದರು.
ಬಸವರಾಜ ಮದ್ರಕಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಗವಾಯಿಗಳು ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು, ಶಿವಲಿಂಗಯ್ಯ ಶಾಸ್ತ್ರಿಗಳು ನಿರೂಪಿಸಿ, ವಂದಿಸಿದರು.
ಪ್ರಶಸ್ತಿ ಪ್ರಧಾನ: ಮಾತೋಶ್ರೀ ನಿಂಗಮ್ಮ ಇಂಗಿನ್, ಡಾ.ಮಹಾನಂದ ಮೇಳಕುಂದಿ, ಡಾ.ದಯಾನಂದ್ ರೆಡ್ಡಿ ದಿಗ್ಗಾವಿ, ಡಾ.ಸಿದ್ದು ಮರಗೋಳ, ಎಮ್.ಎಸ್. ಪಾಟೀಲ ನರಿಬೋಳ ವರಿಗೆ ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…