ಕಲಬುರಗಿ: ಈ ನಾಡು ಕಂಡ ಅಪರೂಪದ ಜ್ಞಾನ ಬಂಡಾರ ಪೆÇ್ರ. ಮಲ್ಲೇಪುರಂ ಜಿ ವೆಂಕಟೇಶ ಅವರಲ್ಲಿದೆ. ತಾವು ಬೆಳೆಯುವುದರ ಮೂಲಕ ತಮ್ಮವರನ್ನು ಅಂದರೆ ಹಿರಿಯರನ್ನು ಕಿರಿಯರನ್ನು ಬೆಳೆಸುವ ಶಕ್ತಿ ಅವರಲ್ಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಎಮಿರಿಟಸ್ ಪೆÇ್ರ. ಕರೀಗೌಡ ಬೀಚನಹಳ್ಳಿ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಎಂ.ಬಿ.ಕಟ್ಟಿ ಸಂಪಾದಿತ ಪೆÇ್ರ. ಮಲ್ಲೇಶ್ವರಂ ಪರಿಸ್ಪಂದನಾ ಪುಸ್ತಕ ಲೋಕಾರ್ಪಣೆ ಹಾಗೂ ಓಮನ್ ದೇಶದ ಮಸ್ಕತ್ ನಲ್ಲಿ ನಡೆದ ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನದ ಸರ್ವಾಧ್ಯಕ್ಷ ಗೌರವಕ್ಕೆ ಪಾತ್ರರಾದ ಪೆÇ್ರ. ಮಲ್ಲೇಪುರಂ ಜಿ ವೆಂಕಟೇಶ ಅವರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ವಾಂಸನಾಗಬೇಕು ಎಂದರೆ ಓದುವ ಅದಮ್ಯ ಆಸಕ್ತಿ ಇರಬೇಕು. ಶ್ರದ್ಧೆಯಿಂದ ಓದಿದರೆ ವಿದ್ವತ್ ತಾನಾಗೆ ಬರುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಮಲ್ಲೇಶ್ವರಂ ಕುಲಪತಿ ಹುದ್ದೆಗೇರಿದ್ದು ಅದ್ಭುತ ಸಾಧನೆ ಎಂದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪೆÇ್ರ. ಎಚ್.ಟಿ ಪೆÇೀತೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ವಿನಯವು ಮುಖ್ಯವಾಗಬೇಕು. ವಿಶಾಲವಾದ ಮನಸ್ಥಿತಿ ಬೆಳೆಸಿಕೊಳ್ಳುವುದರ ಮೂಲಕ ಸಾಹಿತ್ಯದ ಕೃಷಿಯಲ್ಲಿ ತೊಡಗಬೇಕು ಎಂದರು.
ಪೆÇ್ರ.ಮಲ್ಲೇಶ್ವರಂ ಅವರ ಪರಿಸ್ಪಂದನ ಪುಸ್ತಕದ ಸಂಪಾದಕ ಡಾ.ಎಂ.ಬಿ .ಕಟ್ಟಿ ಮಾತನಾಡಿ ಸಜ್ಜನರ ಸಂಘ ಮಾಡಬೇಕು ಎಂದರೆ ಮಲ್ಲೇಪುರಂ ಅಂತವರ ಸ್ನೇಹವಾಗಬೇಕು. ಗುರುವಿನ ಕೆಲಸ ಮಾಡಬೇಕು ಎಂದರೆ ಸಾಹಿತ್ಯದ ಜ್ಞಾನ ಬಂಡಾರದ ಕೆಲಸ ಎಂದು ತಿಳಿದುಕೊಂಡು ಪುಸ್ತಕ ಬರೆದೆ. ಇಂತಹ ವ್ಯಕ್ತಿಯ ಪುಸ್ತಕ ಸಂಪಾದಕತ್ವ ಸಿಕ್ಕಿದ್ದು ನನಗೆ ಖುಷಿಯ ವಿಚಾರ ಎಂದರು.
ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಸಿದ್ದಣ್ಣ ಉತ್ನಾಳ ಲೋಕಾರ್ಪಣೆಗೊಂಡ ಪೆÇ್ರ.ಮಲ್ಲೇಪುರಂ ಪರಿಸ್ಪಂದನ ಕೃತಿ ಕುರಿತು ಮಾತನಾಡಿದರು. ಡಾ.ಶ್ರೀಶೈಲ್ ನಾಗರಾಳ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಂತೋಷ ಕುಮಾರ ಕಂಬಾರ ನಿರೂಪಿಸಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…