ಬಿಸಿ ಬಿಸಿ ಸುದ್ದಿ

PSI Scam: ಆರ್‌.ಡಿ.ಪಾಟೀಲ್ ಜೈಲಿನಿಂದ ಬಿಡುಗಡೆ

ಕಲಬುರಗಿ: ಪಿಎಸ್ ಐ ನೇಮಕ ಪರೀಕ್ಷೆ ಅಕ್ರಮದ ನಡೆಸಿದ ಕಿಂಗ್‌ ಪಿನ್ ಆರ್ ಡಿ ಪಾಟೀಲ್ ಗೆ ಶನಿವಾರ ತಡರಾತ್ರಿ ಕಲಬುರಗಿಯ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಭಾಗ್ಯ ಲಭಿಸಿದೆ.

ಕಲಬುರಗಿ ಹೈ ಕೋರ್ಟ್ ಮೂರು ದಿನಗಳ ಹಿಂದೆ ಕಿಂಗ್ ಪಿನ್ ಸಹೋದರರಾದ ಆರ್.ಡಿ.ಪಾಟೀಲ್ ಮತ್ತು ಮಹಾಂತೇಶ ಪಾಟೀಲ್ ಗೆ ಜಾಮೀನು ನೀಡಿತ್ತು. ಅದರಂತೆ ಮಹಾಂತೇಶ ಎರಡು ದಿನಗಳ ಹಿಂದೆ ಹೊರ ಬಂದಿದ್ದರು.

ಆರ್. ಡಿ .ಪಾಟೀಲ್ ವಿರುದ್ಧ ಒಂಬತ್ತು ಕೇಸ್ ಇರುವುದರಿಂದ ಅವುಗಳಲ್ಲಿ ಕೆಳ ನ್ಯಾಯಾಲಯದಲ್ಲಿ ಗುವಿವಿ ಠಾಣೆ ಮತ್ತು ಸೆನ್ ಠಾಣೆಯಲ್ಲಿನ ಕೇಸ್ ಗೆ ಸಂಬಂಧಿಸಿದಂತೆ ವಾರೆಂಟ್ ಇದ್ದವು. ಈ ಕಾರಣಕ್ಕೆ ಆರ್.ಡಿ.ಬಿಡುಗಡೆ ಆಗಿರಲಿಲ್ಲ.

ಹೈಕೋರ್ಟ್ ಜಾಮೀನು ನೀಡಿದ ಆದೇಶ ಪ್ರತಿಯೊಂದಿಗೆ ಅವರ ಪರ ವಕೀಲರಾದ ಅಶೋಕ ಮೂಲಗೆ ಅವರು ವಾರೆಂಟ್ ರಿ ಕಾಲ್ ಮಾಡಲು ಜೆಎಂಎಫ್ ಸಿ ನ್ಯಾಯಾಲಯ ಮುಂದೆ ಕೋರಿಕೊಂಡು ಆ ಪ್ರಕ್ರಿಯೆ ಮುಗಿದರು. ಬಳಿಕ ಶುರಿಟ್ ನೀಡುವುದು ಇತ್ಯಾದಿ ಕಾರ್ಯ ಮುಗಿದ ನಂತರ ನಿನ್ನೆ ಶನಿವಾರ ತಡರಾತ್ರಿ ಜೈಲಿನಿಂದ ಆರ್ ಡಿ ಪಾಟೀಲ್ ಹೊರ ಬಂದಿದ್ದಾನೆ.

ಮಹಾಂತೇಶ ಪಾಟೀಲ್ ಬಿಡುಗಡೆಯಾದ ಹೊತ್ತಿನಲ್ಲಿ ಸಂಭ್ರಮಿಸಿದ್ದು ವಿವಾದ ಆಗಿತ್ತು. ಇದು ಹಾಗೆ ಆಗಬಾರದು ಎಂಬ ಕಾರಣಕ್ಕೆ ಯಾರಿಗೂ ಮಾಹಿತಿ ನೀಡದೆ ಜೈಲಿನಿಂದ ನೇರವಾಗಿ ತಮ್ಮ ಆಪ್ತರೊಂದಿಗೆ ಮನೆಗೆ ತೆರಳಿದ್ದಾರೆ.

ಜೈಲಿನಿಂದ ಬಿಡುಗಡೆಯಾಗಿದ್ದು ತನ್ನನ್ನ ಕಾಣಲು ಮನೆ ಕಚೇರಿಗೆ ಯಾರು ಬರಬೇಡಿ ಅಂತಾ ಆರ್ ಡಿಪಿ ಸಂದೇಶ ರವಾನೆ ಮಾಡಿದ್ದು, ಫೇಸ್‌ಬುಕ್‌ ಖಾತೆ ಇನ್ನಿತರ ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ಹಾಕಿದ್ದಾರೆ. ನನ್ನ ಅಭಿಮಾನಿಗಳು ಹಿತೈಷಿಗಳು ನನ್ನನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಿರಿ. ನನ್ನನ್ನು ವಿಜೃಂಭಣೆಯಿಂದ ಸ್ವಾಗತಿಸಲು ಖರ್ಚು ವೆಚ್ಚ ಮಾಡಿಕೊಂಡಿದ್ದರಿ.

ಆದರೆ ವ್ಯೆಯಕ್ತಿಕ ಕೆಲಸದಿಂದ ಕಲಬುರಗಿಯಿಂದ ಹೊರಗಡೆ ಹೋಗಿದ್ದೇನೆ. ಒಂದು ವಾರದಲ್ಲಿ ಅಫಜಲಪುರಕ್ಕೆ ಬಂದು ನಿಮ್ಮ ಸೇವೆಯಲ್ಲಿ ತೋಡಗಿಕೊಳ್ಳುವುದಾಗಿ ಸಂದೇಶ ನೀಡಿದ ನೀಡಿದ್ದಾರೆ.

emedialine

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

10 mins ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

13 mins ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

17 mins ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

21 mins ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

24 mins ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

26 mins ago