ಕಲಬುರಗಿ : ಭಾರತ ದೇಶ ವಿವಿಧಯಲ್ಲಿ ಏಕತೆ ಹೊಂದಿದ್ದು, ಅನೇಕ ಧರ್ಮ, ಜಾತಿಗಳಿವೆ. ಧರ್ಮ, ಜಾತಿ ಆಧಾರಗಳ ಮೇಲೆ ಮೇಲು-ಕೀಳು ಸಲ್ಲದು. ಪ್ರತಿಯೊಂದು ಧರ್ಮವು ತನ್ನದೇ ಆದ ಸಂಸ್ಕøತಿ, ಪರಂಪರೆ, ಉತ್ಸವಗಳನ್ನು ಹೊಂದಿದೆ. ವಿವಿಧ ವಿವಿಧ ಧರ್ಮಗಳ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಪರಸ್ಪರ ಭಾಗವಹಿಸಿದರೆ ಪ್ರೀತಿ, ಸ್ನೇಹ, ಭಕ್ತಿ, ವಿಚಾರ ವಿನಿಮಯವಾಗುವ ಮೂಲಕ ಕೋಮು ಸಾಮರಸ್ಯ ವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಮಾಜಿ ಎಮ್ಮೆಲ್ಸಿ ಅಲ್ಲಮಪ್ರಭು ಪಾಟೀಲ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ನಾಗನಹಳ್ಳಿ ರಿಂಗ ರಸ್ತೆಯ ಸಮೀಪವಿರುವ ಪ್ರಸಿದ್ಧ ಸೂಫಿ ಸಂತ ಹಜರತ್ ಹೈದರ್ ಪೀರ್(ರಹೆ) ದರ್ಗಾದಲ್ಲಿ ಸೋಮವಾರ ರಾತ್ರಿ ಜರುಗಿದ 889ನೇ ಉರಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗುವಿವಿ ಸಿಂಡಿಕೇಟ್ ಮಾಜಿ ಸದಸ್ಯ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಈ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಜರತ್ ಹೈದರ್ ಪೀರ್ ಅವರು ಸಮಾಜ ಸೇವಕರಾಗಿ, ಅನೇಕ ಭಕ್ತಾದಿಗಳ ಕಾಮಧೇನುವಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿಗೂ ಕೂಡಾ ಸರ್ವ ಧರ್ಮಿಯರು ಅಸಂಖ್ಯಾತ ರೀತಿಯಲ್ಲಿ ಧರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿರುವುದು ಗಮನಿಸಿದರೆ, ಸೂಫಿ ಸಂತ ಹೈದರ ಪೀರ ಅವರ ಕೊಡುಗೆ, ಸೇವೆ ನಮಗೆ ಕಂಡು ಬರುತ್ತದೆ ಎಂದರು.
ಉರಸ್‍ನಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಶಿವಯೋಗಪ್ಪ ಬಿರಾದಾರ, ಅಶೋಕ ವೀರನಾಯಕ್, ಸುಜಯ್ ಎಸ್.ವಂಟಿ, ಬಾಬಾ ಪರೀದ್ ಖಾದ್ರಿ, ಅಬ್ದುಲ್ ರಜಾಕ್, ಅಬ್ದುಲ್ ಹಮೀದಸಾಬ್ ಮುತಾಲಿಬ್, ಗುಲಾಮ್ ನಬಿ ಶಹಾಸಾಬ್, ಶೇಖ್ ತೊಲಾಸಾಬ್, ಶೇಖ್ ಜುಬೇರ್, ಶೇಖ್ ಅಜಾದ್, ಫರೀದ್ ಮನಿಯಾಳ್, ಶೇಖ್ ತಾಜೋದ್ದೀನ್, ಸೈಯದ್ ಸಾಬ್, ನಜುರೋದ್ದೀನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…