ಕಲಬುರಗಿ: ಬಾಗಲಕೋಟೆಯ ತೇಜಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಡಿ. 1 ಮತ್ತು 2ರಂದು ಜರುಗಿದ ಸಿಬಿಎಸ್‍ಸಿ ಪ್ರಾದೇಶಿಕ ಮಟ್ಟದ ವಿಜ್ಞಾನ ಮೇಳದಲ್ಲಿ ಅಪ್ಪಾ ಪಬ್ಲಿಕ್ ಶಾಲೆಯ ಎರಡು ತಂಡಗಳು ಭಾಗವಹಿಸಿದ್ದು, ಅದರಲ್ಲಿ ಒಂದು ತಂಡ ರಾಷ್ಟ್ರಮಟ್ಟಕೆ ಆಯ್ಕೆಯಾಗಿರುತ್ತದೆ. ರಾಷ್ಟ್ರಮಟ್ಟದ ವಿಜ್ಞಾನ ಮೇಳ ಜನೇವರಿಯಲ್ಲಿ ನೆಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕುಮಾರ್ ಅವನೀಶ್ ಶೀಲವಂತ (೧೦ನೆಯ ತರಗತಿ) ಮತ್ತು ಕುಮಾರಿ ಸೃಷ್ಟಿ ಮುಧೋಳ್ (೯ನೆಯ ತರಗತಿ) ಇವರನ್ನೊಳಗೊಂಡ ಮೊದಲನೆಯ ತಂಡ ಟೆಲಿಮೈಕ್ರೋಸ್ಪೆಕ್ಟ್ ವಿಷಯಾಧಾರಿತ ಪ್ರಾತ್ಯಕ್ಷಿಕೆ ರಕ್ಷಣಾ ಸಿಬ್ಬಂದಿಗೆ ವೈದ್ಯಕೀಯ ಲೋಕದಲ್ಲಿ ಅತಿ ಸಂಕೀರ್ಣವಾದಂತ ಶಸ್ತ್ರ ಚಿಕಿತ್ಸೆಗೆ ಉಪಯೋಗಿಸಬಹುದೆಂದು ಪ್ರದರ್ಶಿಸಿದರು. ಈ ಪ್ರಾತ್ಯಕ್ಷಿಕೆಯ ಹೊಸತನ ಮತ್ತು ವಿಶೇಷತೆ ನಿರ್ಣಾಯಕರ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿ ಕೊನೆಯ ಸುತ್ತಿಗೆ ಆಯ್ಕೆಯಾಯಿತು.
ಮೊದಲನೆಯ ತಂಡದ ಹಾಗೆ, ಎರಡನೆಯ ತಂಡದ ವಿದ್ಯಾರ್ಥಿಗಳಾದ ಕುಮಾರಿ ಅಂಜಲಿ ಪಾಟೀಲ್ (೧೦ನೆಯ ತರಗತಿಯ) ಮತ್ತು ಕುಮಾರ್ ದರ್ಶನ ಬಿರಾದಾರ್ (೧೦ನೆಯ ತರಗತಿಯ) ಇವರು ‘ಮ್ಯಾಗ್ನಿಟ್ಯೂಡ್ ಸ್ಕೇಲ್’ ಎಂಬ ವಿಷಯ ಕುರಿತು ತಮ್ಮ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು. ಆಕಾಶ ವಸ್ತುಗಳ ಹೊಳಪನ್ನು ಹೇಗ ಅಳೆಯಬಹುದೆಂದು ತಿಳಿಸಿದರು.
ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬೇರೆ ಬೇರೆ ಶಾಲೆಗಳಿಂದ ೬೦ ತಂಡಗಳು ಈ ಪ್ರಾದೇಶಿಕ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದವು. ಇವುಗಳಲ್ಲಿ ಆಯ್ಕೆಯಾದ ೩೦ ತಂಡಗಳಲ್ಲಿ ಕೊನೆಯ ಸುತ್ತಿಗೆ ೧೨ ತಂಡಗಳನ್ನು ರಾಷ್ಟ್ರಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಮಾಡಲಾಯಿತು.
ಆಯ್ಕೆಯಾದ ೧೨ ತಂಡಗಳಲ್ಲಿ, ‘ಟೆಲಿಮೈಕ್ರೋಸ್ಪೆಕ್ಟ್’ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದ ಅಪ್ಪಾ ಪಬ್ಲಿಕ್ ಶಾಲೆಯ ತಂಡವು ರಾಷ್ಟ್ರಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾಯಿತು. ತಂಡವನ್ನು ಪ್ರತಿನಿಧಿಸಿದ ಕುಮಾರ್ ಅವನೀಶ್ ಶೀಲವಂತ ಮತ್ತು ಸೃಷ್ಟಿ ಮುಧೋಳ್, ಇವರ ಯೆಶಸ್ವಿ ಪ್ರದರ್ಶನವನ್ನು ಶಾಲೆಯ ಮುಖ್ಯಸ್ಥರು ಮತ್ತು ಎಲ್ಲಾ ಸಿಬ್ಬಂಧಿವರ್ಗದವರು ಹರ್ಷ ವ್ಯಕ್ತಪಡಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಮತ್ತು ಸಂಘದ ಚೇರ ಪೆರ್ಸನರಾದ ಮಾತೋಶ್ರೀ ದಾಕ್ಷಾಯಣಿ ಎಸ. ಅಪ್ಪಾ ಇವರು ಎರಡೂ ತಂಡದ ವಿದ್ಯಾರ್ಥಿಗಳ ವಿನೂತನವಾದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು. ರಾಷ್ಟ್ರಮಟ್ಟದಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡಲೆಂದು ಶುಭ ಕೋರಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…