ಕಲಬುರಗಿ: ನಗರ ಹೊರವಲಯದ ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ಬೀದರ, ಕಲಬುರಗಿ ಮತ್ತು ಯಾದಿಗಿರ ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಆವರಣದಲ್ಲಿ ಮಂಗಳವಾರ ನಂದಿನಿ ಸಿಹಿ ಉತ್ಸವಕ್ಕೆ ಕೆಎಂಎಫ್ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸಿದ್ದನಗೌಡ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿದ್ದನಗೌಡ ಅವರು, ಕೆಎಂಎಫ್ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ನಿರ್ದೇಶನ ಮೇರೆಗೆ ಡೈರಿ ಆವರಣದ ಕ್ಷೀರ ಮಳಿಗೆಯಲ್ಲಿ 15 ಹೊಸ ಉತ್ಪನ್ನಗಳನ್ನು ಪರಿಚಯಿಸಲಾಗಿದ್ದು, ಇದರೊಂದಿಗೆ 52 ಹಾಲಿನ ಉತ್ಪನ್ನಗಳು ಸಹ ಗ್ರಾಹಕರಿಗೆ ಶೇ. 20 ರಿಯಾಯತಿ ದರದಲ್ಲಿ ಮಾರಾಟಕ್ಕೆ ಲಭ್ಯ ಇವೆ. ಮುಂಬರುವ ಜನೆವರಿ 18 ವರೆಗೆ ಸಿಹಿಉತ್ಸವ ಇರಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಖೋವಾ ಬಾದ್ಮ ರೋಲ್, ಪನೀರ್ ಭರ್ಪಿ, ಬೆಲ್ಲದ ಭರ್ಪಿ, ಕಲಾಕಂದ, ಖೋವಾ ಲಾಡು, ಹೆಸರುಕಾಳು ಲಾಡು, ಅಕ್ಕಿ ಪಾಯಸ, ರಾಗಿ ಖಾರ ಬಿಸ್ಕತ್ತು, ಬೆಣ್ಣೆ ಬಿಸ್ಕತ್ತು ಸೇರಿದಂತೆ ಹೊಸ ಬಗೆಯ ಉತ್ಪನ್ನಗಳು ಮಾರಾಟಕ್ಕೆ ಇವೆ ಎಂದು ಮಾಹಿತಿ ನೀಡಿದರು.
ಒಕ್ಕೂಟದ ವ್ಯವಸ್ಥಾಪಕ (ಶೇಖರಣೆ-ತಾಂತ್ರಿಕ) ಪಿ.ವಿ. ಪಾಟೀಲ್, ಉಪ ವ್ಯವಸ್ಥಾಪಕ (ಕಾರ್ಯಾಗಾರ) ವಿಜಯ ದೇಶಪಾಂಡೆ, ಗುಣಮಟ್ಟದ ಅಧಿಕಾರಿ ಮಹ್ಮದ್ ಜಿಯಾವುಲ್, ಮಾರುಕಟ್ಟೆ ಅಧಿಕಾರಿ ಸಿ.ಕೆ. ಪತ್ತಾರ, ವಲಯ ಜಂಟಿ ನಿರ್ದೇಶಕ ತಥಾಗತ ಸೇರಿದಂತೆ ಒಕ್ಕೂಟದ ಎಲ್ಲ ಸಿಬ್ಬಂದಿ ವರ್ಗ ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…