ಬಿಸಿ ಬಿಸಿ ಸುದ್ದಿ

ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ

ಕಲಬುರಗಿ : ಪಂದ್ಯ, ಕ್ರೀಡೆಗಳಲ್ಲಿ ಸೋಲು ಮತ್ತು ಗೆಲವು ಮುಖ್ಯವಲ್ಲ ಭಾಗವಹಿಸುವುದು ಬಹಳ ಮುಖ್ಯ. ನಾನು ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿಗಳ ಸಂಘಟನೆ ಮಾಡಿ ಹಲವು ಕ್ರೀಡೆಗಳು ನಡೆಯುವಲ್ಲಿ ಯಶಸ್ವಿಯಾಗಿದ್ದೆ. ನಿಮಗೂ ಶುಭವಾಗಲಿ ಎಂದ ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ವಿನಯ ಪಾಟೀಲ್ ಕಮಲಪೂರ ಹೇಳಿದರು.

ನಗರದ ಎಮ್.ಎಸ್. ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸ್ಮರಣಾರ್ಥ ಆಯೋಜಿಸಿದ್ದ ಪುರುಷರ ವಾಲಿಬಾಲ್ ಟೂರ್ನಾಮೆಂಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ವಾಲಿಬಾಲ್ ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅವರು ಆರಂಭಿಸಿದ್ದು ಎಂದು ನಂಬಿಕೆ. 1895 ರಲ್ಲಿ ಇದು ಈ ಆಟದ ಗೋಚರಿಸುವಿಕೆಯ ವರ್ಷ. ಅಧಿಕೃತ ವರದಿಯ ಪ್ರಕಾರ, ವಾಲಿಬಾಲ್ ಒಂದು ಅಮೆರಿಕನ್ ಕಾಲೇಜು ದೈಹಿಕ ಶಿಕ್ಷಕ ಕಂಡುಹಿಡಿದರು ಎಂದು ಹೇಳಲಾಗಿದೆ ಎಂದರು.

ಅತಿಥಿಗಳಾಗಿ ಡಾ. ಡಿ.ಜಿ.ಸಾಗರ ಮಾತನಾಡಿ, ವಾಲಿ ಬಾಲ್ ಆಟದಿಂದ ದೇಹದಲ್ಲಿನ ಕ್ಯಾಲೊರಿಗಳನ್ನು ಸುಡುತ್ತದೆ: 45 ಮಿಂಟ್ ವಾಲಿಬಾಲ್ 585 ಕ್ಯಾಲೊರಿಗಳನ್ನು ಸುಡುತ್ತದೆ ಅಲ್ಲದೇ, ಸ್ನಾಯು ವ್ಯವಸ್ಥೆಯನ್ನು ಸುಧಾರಿಸಿ: ವಾಲಿಬಾಲ್ ಆಡುವುದು ನಿಮ್ಮ ಸ್ನಾಯುಗಳನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹವನ್ನು ಬಲಪಡಿಸುತ್ತದೆ ಮತ್ತು ಟೋನ್ ಮಾಡುತ್ತದೆ ಇದರ ಲಾಭ ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜಶೇಖರ ಬೀರನಳ್ಳಿ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಎಸ್.ಡಿ. ಬರ್ದಿ, ಪ್ರೊ. ಆರ್.ಎಸ್. ಹಿಳ್ಳಿ, ಡಾ. ಶರಣಕುಮಾರ ಮಾಶಾಳ, ಡಾ.ನೀಲಕಂಠ ವಾಲಿ, ಪ್ರೊ. ಜಗದೇವಿ ಹೀರೆಮಠ, ಡಾ. ಜಯಶ್ರೀ ಬಡಿಗೇರ್, ಬಿ.ಓ.ಬೊಮ್ಮಪ್ಪ, ಭಾಗವಹಿಸಿದರು. ಪ್ರೊ. ಬಿ.ಎಸ್. ಕಾಗೆ ನಿರೂಪಿಸಿದರು. ಕುಮಾರಿ. ವೈಷ್ಣವಿ ಪ್ರಾರ್ಥನಾ ಗೀತೆ ಹಾಡಿದರು. ಡಾ. ಪ್ರಾಣೇಶ ಎಸ್ ಸ್ವಾಗತಿಸಿದರು. ದೈಹಿಕ ನಿರ್ದೇಶಕ ಡಾ. ಶಂಕ್ರಪ್ಪ ಕೆ ವಂದಿಸಿದರು.

ವಾಲಿಬಾಲ್ ಕ್ರೀಡೆಯ ನಿರ್ಣಾಯಕರಾಗಿ ಎಸ್.ಎಸ್. ಮರಗೋಳ ಪದವಿ ಕಾಲೇಜಿನ ದೈಹಿಕ ನಿರ್ದೇಶಕರಾದ ಎಸ್.ಕೆ.ದಾವುದ್ ಮತ್ತು ಎಸ್.ಸಿ. ಕಾಂಬ್ಳೆ ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಎಸ್.ಎಸ್. ಮರಗೋಳ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಬಿ. ಬಿಲ್ಲವ ಮತ್ತು ಡಾ. ರಾಜಶೇಖರ ಬೀರನಳ್ಳಿ ಯವರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳು ವಿತರಿಸಿದರು. ಪಂದ್ಯದಲ್ಲಿ ಗುಲಬರ್ಗಾ ನಗರದ ವಿವಿಧ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಾಲಿಬಾಲ್ ಟೂರ್ನಾಮೆಂಟ್‍ನಲ್ಲಿ ವಿಜೇತರಾದ ತಂಡಗಳು:1. ವಿಜೇತ ತಂಡ: ಎಮ್.ಎಸ್. ಇರಾಣಿ ಪದವಿ ಮಹಾವಿದ್ಯಾಲಯ, ಕಲಬುರಗಿ. – ಪ್ರಥಮ ಸ್ಥಾನ,  ಎಸ್.ಬಿ. ವಾಣಿಜ್ಯ ಪದವಿ ಮಹಾವಿದ್ಯಾಲಯ, ಕಲಬುರಗಿ – ದ್ವೀತಿಯ ಸ್ಥಾನ

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago