ಸುರಪುರ: ಜಾರ್ಖಂಡ್ ರಾಜ್ಯದ ಗಿರಾಡಿ ಜಿಲ್ಲೆಯ ಜೈನರ ಪವಿತ್ರ ಸ್ಥಳವಾಗಿರುವ ಸಮ್ಮೇದ-ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಬಾರದು ಎಂದು ಇಲ್ಲಿಯ ಕುಂತುನಾಥ ಜೈನ್ ಶ್ವೇತಾಂಬರ ಮೂರ್ತಿ ಪೂಜಾಕ ಸಂಘ ಶೋರಾಪುರದ ಮುಖಂಡರು ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರಿಗೆ ಮನವಿ ಮಾಡಿರುವ ಮುಖಂಡರು,ನಮ್ಮ ಜೈನ ಧರ್ಮದ ಪವಿತ್ರ ಸ್ಥಳವಾಗಿರುವ ಜಾರ್ಖಂಡ್ ರಾಜ್ಯದ ಗಿರಾಡಿ ಜಿಲ್ಲೆಯ ಸಮ್ಮೇದ-ಶಿಖರ್ಜಿ ಸ್ಥಳವು ಜೈನ ಧರ್ಮದ 20 ಜನ ತೀರ್ಥಂಕರರ ಮೋಕ್ಷ ಸ್ಥಳವಾಗಿದೆ.ಇದು ನಮ್ಮ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದ್ದು ಈ ಸ್ಥಳವನ್ನು ಈಗ ಕೇಂದ್ರ ಸರಕಾರ ಪ್ರವಾಸಿ ತಾಣವೆಂದು ಘೋಷಿಸಲು ಮುಂದಾಗಿದ್ದು ಇದನ್ನು ನಾವು ವಿನಮ್ರವಾಗಿ ವಿರೋಧಿಸುತ್ತೇವೆ.
ಸ್ವಾತಂತ್ರ್ಯ ನಂತರದ ಸರಕಾರಗಳು ಅಲ್ಪಸಂಖ್ಯಾತ ಜೈನ ಸಮುದಾಯದ ಜೈನರ ಯಾತ್ರೆಗೆ ಸಂಬಂಧಿಸಿದಂತೆ ಅಭದ್ರತೆಯ ವಾತಾವರಣ ನಿರ್ಮಿಸುತ್ತಿವೆ.ಜೈನರ ಪ್ರತಿರೋಧದ ನಡುವೆಯೂ ಈ ಪವಿತ್ರ ಸ್ಥಳವನ್ನು ಪ್ರವಾಸಿ ತಾಣವೆಂದು ಘೋಷಿಸುವ ಮೂಲಕ ಅಪವಿತ್ರಗೊಳಿಸಲು ಮುಂದಾಗಿವೆ,ಭಾರತ ಸಂವಿಧಾನದ ಪ್ರಕಾರ ಭಾರತದಲ್ಲಿರುವ ಜೈನ ಪುಣ್ಯಕ್ಷೇತ್ರಗಳ ಪಾವಿತ್ರ್ಯವನ್ನು ಕಾಪಾಡುವುದು ಭಾರತ ಸರ್ಕಾರದ ಕರ್ತವ್ಯವಾಗಿದೆ.ಆದ್ದರಿಂದ ಭಾರತ ಸರಕಾರ ನಮ್ಮ ಪವಿತ್ರ ಸ್ಥಳವಾಗಿರುವ ಸಮ್ಮೇದ-ಶಿಖರ್ಜಿ ಸ್ಥಳದ ಬಗ್ಗೆ ಕಾಳಜಿವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿ ತಹಸೀಲ್ದಾರರ ಮೂಲಕ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮೋನಲಾಲ್ ಹೆಚ್.ಜೈನ್,ರಾಯಚಂದ್ ಡಿ.ಜೈನ್,ಪ್ರಕಾಶಚಂದ್ ಟಿ.ಜೈನ್,ಕಾಂತಿಲಾಲ ಓ.ಜೈನ್,ಧನಪಾಲ್ ಡಿ.ಜೈನ್,ರಮೇಶಕುಮಾರ್ ಎ.ಜೈನ್,ದಿನೇಶ ಕೆ.ಜೈನ್,ಬಾಬುಲಾಲ್ ಎಮ್.ಜೈನ್,ನಿತೇಶ್ ಎ.ಜೈನ್,ಉಜ್ವಲ್ ಎ.ಜೈನ್,ವಿಕ್ರಂ ಡಿ.ಜೈನ್ ಸೇರಿದಂತೆ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…