ಕಲಬುರಗಿ: ನಗರದ ಲಾರಿ ತಂಗುದಾಣ ಪ್ರದೇಶದಲ್ಲಿ ನಿನ್ನೆ ನಗರದ ಎಂ.ಎಸ್.ಕೆ ಮಿಲ್ ನಿವಾಸಿ ರಫಿಕ್(30) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಚೌಕ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚೌಕ್ ಪೊಲೀಸ್ ಠಾಣೆಯ ಇನ್ನಪೆಕ್ಟರ್ ಶಕೀಲ್ ಅಹ್ಮದ ಅಂಗಡಿ ಅವರ ನೇತೃತ್ವದ ತಂಡದ ಪಿ.ಎಸ್.ಐ ಶಿವಶಂಕರ ಹಾಗೂ ಸಿಬ್ಬಂದಿ ಅಶೋಕ, ಸಿದ್ರಾಮಯ್ಯ. ನಾಗೇ೦ದ್ರ, ಉಮೇಶ, ರಾಜಕುಮಾರ, ಸೈಯದ್ ತೌಸೀಫ ಹುಸೇನ ರವರನ್ನು ಒಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ಕೊಲೆಗೆ ಬಳಸಿರುವ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಕಪನೂರ ಇ೦ಡಸ್ಟಿಯಲ್ ಎರಿಯಾದ ಹಾಳುಬಿದ್ದ ಮನೆಯೊಂದರಲ್ಲಿ ಆರೋಪಿಗಳು ಅವಿತುಕೊಂಡ ಖಚಿತ ಮಾಹಿತಿ ಪಡೆದು ಆರೋಪಿಗಳ ಬಂಧನಕ್ಕೆ ಜಾಲಾ ಬೀಸಿ, ತಾಜ್ ನಗರ ಮುಸ್ಲೀಂ ಸಂಘದ ನಿವಾಸಿ, ಶೇಖ್ ಬಾಬಾ (ಬ೦ಡಿ ಬಾಬಾ), ಮರಗಮ್ಮ ಗುಡಿ ಹತ್ತಿರ ಬಂಬು ಬಚಾರ ಬಡಾವಣೆಯ, ಅಜಯ ಅಂಬಾದಾಸ ಹಾಗೂ ತಾಜ ನಗರ ಮುಸ್ಲೀಂ ಸಂಘ ಮಹ್ಮದ ಸಿರಾಜ ಅಬ್ದುಲ ಗನಿ ದಮ್ಮೂರವಾಲೆ ಎಂಬ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಹಣದ ಹಾಗೂ ಕೌಟುಂಬಿಕ ವಿಷಯದಲ್ಲಿ ಗೆಳೆಯನಾದ ರಫೀಕ ಇತನೊಂದಿಗೆ ತಕರಾರು ಆಗಿದ್ದರಿಂದ ಮಾರಕಾಸ್ತ್ರಗಳಿಂದ ಮುಸ್ಲೀಂ ಸಂಘ ಶಬಲೇವಾಲಾ ಬಾಬಾ ದರ್ಗಾದ ಹತ್ತಿರ ಹೊಡೆದು ಕೊಲೆ ಮಾಡಿ ಶವವನ್ನು ತಮ್ಮ ಆಟೋದಲ್ಲಿ ಹಾಕಿಕೊಂಡು ಮಹಾತ್ಮಗಾಂಧಿ ಲಾರಿ ತಂಗುದಾಣದಲ್ಲಿಯ, ನಿರ್ಜನ ಪ್ರದೇಶದಲ್ಲಿ ಶವವನ್ನು ಬಿಸಾಕಿ ಹೋಗಿದ್ದಾರೆಂದು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆಂದು ಎಂದು ತಿಳಿದುಬಂದಿದೆ.
ಚೌಕ್ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…