ಕಲಬುರಗಿ: ಇಂದು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಇದನ್ನ ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಅಧ್ಯಕ್ಷ ಕೆ ನಾಗಣ್ಣ ಗೌಡ ಅವರು ಹೇಳಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೋಲಿಸ ಇಲಾಖೆ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳ ಇವರ ಸಂಯುಕ್ತಾಶ್ರಯದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಜಿಲ್ಲೆಯಾದ್ಯಾಂತ ಅನೇಕ ಕಡೆ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳನ್ನು ದಾಖಲಾಗುತ್ತಿವೆ. ಇವುಗಳನ್ನು ತಡೆಯಲು ಎಲ್ಲಾ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಅನೇಕ ಕಡೆ ಮಕ್ಕಳ ಶಾಲೆಯಿಂದ ಹೊರಗುಳಿಯುತ್ತ್ತಿದ್ದಾರೆ ಅಂಥವರನ್ನುಶಿಕ್ಷಕರು ಗುರುತಿಸಿ ತಿಳಿದು ಮತ್ತೆ ಶಾಲೆಗೆ ಬರುವಂತೆ ಮನ ಒಲಿಸಲು ಅಧಿಕಾರಿಗಳು ಮುಂದಾಗಬೇಕು ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ತೀರ ಕಳವಳಕಾರಿಯಾಗಿದೆ ಇದನ್ನು ತಡೆಯಲು ಮಕ್ಕಳಲ್ಲಿ ಇದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಕ್ಷರ ದಾಸೋಹ ಅಧಿಕಾರಿಗಳ ಜತೆ ಮಾತನಾಡಿ,ಆರ್.ಟಿ.ಐ.ನಲ್ಲಿ ದಾಖಲಾತಿಯಾಗಿರುವ ಮಕ್ಕಳ ಬಗ್ಗೆ ಮಾಹಿತಿ ಪಡೆದಕೊಂಡರು. 545 ಸೀಟುಗಳಲ್ಲಿ 280 ಸೀಟುಗಳು ದಾಖಲೆಯಾಗಿ ಉತ್ತರ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲೆಯಾಗಿವೆ ಎಂದು ಸಭೆಯ ಗಮನಕ್ಕೆ ತಂದರು. ಚಿತ್ತಾಪೂರ ಬಿ.ಇ.ಓ ಅವರು ಮಾತನಾಡಿ, ಎನ್.ಜಿ.ಓ.ಗಳ ಸಹಾಯದಿಂದ ಜಾಗೃತಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಸ್.ಐ.ಪಿ. ವಿಶೇಷ ಹೆಣ್ಣು ಮಕ್ಕಳ ತರಬೇತಿ ಹಾಗೂ ಪ್ರೌಢಶಾಲೆಯ ಮಕ್ಕಳ ಕಾರ್ಯಕ್ರಮ ನೀಡುತ್ತಿವೆ ಮಕ್ಕಳ ಸಹಾಯವಾಣಿ ನಂಬರ್ ಬರೆಯಸಲಾಗಿದೆ ಎಂದು ತಿಳಿಸಿದರು.
ಶಾಲೆಗಳ ಸುತ್ತಮುತ್ತ ಒಳ್ಳಯ ಪರಿಸರ ವಿದ್ಯಾರ್ಥಿಗಳಿಗೆ ನೀಡುವಂತಹ ಕೆಲಸಗಳನ್ನು ಶಿಕ್ಷಕರು ಮಾಡಬೇಕಾಗಿದೆ ಅನೇಕ ವಿದ್ಯಾರ್ಥಿ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಕೃತಿಗಳನ್ನು ತಡೆಯಲು ಅವರು ಒಳ್ಳೆಯ ಮಾರ್ಗದರ್ಶನ ನೀಡಬೇಕು ಪೋಕ್ಸ ಕಾಯ್ದಿಗಳ ಹೆಚ್ಚಿನ ಒತ್ತು ಕೊಟ್ಟು ಅವರಿಗೆ ಶಿಕ್ಷಗೆ ಗುರಿಯಾಗÀಬೇಕೆಂದರು.
ಬಾಲ್ಯ ವಿವಾಹಗಳನ್ನು ತಡೆಗಟ್ಟಬೇಕು. ಬಾಲಮಂದಿರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯದಲ್ಲಿ ತಾವು ನಿಗಾವಹಿಸಬೇಕು, ಸ್ವಚ್ಪತೆ ಕಾಪಾಡಬೇಕು ಕುಡಿಯುವ ನೀರು ಹಾಗೂ ಶಾಲೆಗಳಿಗೆ ಕಟ್ಟಡಗಳ್ನು ಸುವ್ಯವಸ್ಥೆಯಲ್ಲಿಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ಅವರಿಗೆ ಮಾತನಾಡಿ, ಗರ್ಭಣಿ ಸ್ತ್ರೀಯರಿಗೆ ಅವರು ಹೆರಿಗೆ ಸಮಯದಲ್ಲಿ ಅವರಿಗೆ ಯಾವುದೇ ದಾಖಲೆಗಳನ್ನು ನೋಡದೆ ಅವರನ್ನು ತುರ್ತು ಚಿಕಿತ್ಸೆಗೆ ಒಳಪಡಿಸಬೇಕು ಮಗು ಹಾಗೂ ತಾಯಿಗೆ ಆರೋಗ್ಯ ರಕ್ಷಣೆ ನೀಡಬೇಕೆಂದು ಅವರು ತಿಳಿಸಿದರು. ಬಹಳಷ್ಟು ಹೆಣ್ಣು ಮಕ್ಕಳ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಒಳ್ಳೆಯ ಮಾತ್ರೆಗಳು ನೀಡಿಬೇಕೆಂದರು ನೀವು ಸಹ ಶಾಲಾ-ಕಾಲೇಜುಗಳಲ್ಲಿ ಜಾಥವನ್ನು ಹಮ್ಮಿಕೊಳ್ಳಬೇಕೆಂದು ಅವರಿಗೆ ಸೂಚಿಸಿದರು.
ಬಾಲಕಾರ್ಮಿಕ ಅಧಿಕಾರಿಗಳೊಂದಿಗೆ ಮಾತನಾಡಿ, 13 ರಿಂದ 14 ಸಾವಿರಮಕ್ಕಳಿಗೆ 0-3 ವರ್ಷದ ಜಾಸಿ ಸಂಖ್ಯೆಯಲ್ಲಿ ಸರ್ವೇ ಮಾಡಲು ತಿಳಿಸಿದರು. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು ಮಕ್ಕಳಿಗೆ ಒಳ್ಳೆಯಶಿಕ್ಷಣವನ್ನು ಶಿಕ್ಷಕರು ನೀಡಬೇಕು ಮಕ್ಕಳು ಒಳ್ಳೆಯಮಾರ್ಗದಲ್ಲಿ ನಡೆಯಲು ಅವರು ಸಲಹೆ ನೀಡಬೇಕೆಂದು ತಿಳಿಸಿದರು.
ತಾಲೂಕಿನ ತಹಶೀಲ್ದಾರರು ತಾಲೂಕ ಮಟ್ಟದ ಪ್ರತಿ ಶನಿವಾರದಲ್ಲಿಸಮನ್ವಯ ಸಮಿತಿ ಸಭೆ ನಡೆಸಬೇಕು. ಮಕ್ಕಳ ರಕ್ಷಣೆಗೆ ಪೋಲಿಸ ಅಧಿಕಾರಿಗಳ ಮಹತ್ವದಾಗಿರುತ್ತದೆ ತಮಗೆ ನೀಡಿದ ಜವಾಬ್ದಾರಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕೆಂದು ಅವರು ಹೇಳಿದರು.
ವೇದಿಕೆ ಮೇಲೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುಶಾಂತ ಎಂ.ಚೌಗಲೆ, ಪೋಲಿಸ್ ಇಲಾಖೆಯ ಎಸಿಪಿ ದೀಪನ್ ಎಂ.ಎನ್. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀನಿಧಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದನವಿನಕುಮಾರ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ ಜಿಲ್ಲಾಧಿಕಾರಿಗಳ ಕಚೇರಿ ಕಾರ್ಯಕ್ರಮ ನಿರೂಪಣಾಧಿಕಾರಿ ಮುರಗೇಶ ಗುಣಾರಿ, ಶಿಷ್ಠಾಚಾರದ ತಹಶೀಲ್ದಾರ ಸೈಯದ್ ನಿಸಾರ ಅಹ್ಮದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಲ್ಲಣ ದೇಸಾಯಿ ಹಾಗೂ ಕಾನೂನು ಪರಿವೀಕ್ಷಣಾಧಿಕಾರಿ ಭಾರತೀಶ ಶೀಲವಂತ ಹಾಗೂ ಇನ್ನಿತರ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕಮಟ್ಟದ ಅಧಿಕಾರಿಗಳು ಮಕ್ಕಳ ಪಾಲನಾ ಸಂಸ್ಥೆಯ ಅಧೀಕ್ಷಕರು ಮುಖ್ಯಸ್ಥರು ಸಿಬ್ಬಂದಿಗಳು ಹಾಜರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…