ಬೆಂಗಳೂರು: ಭಾರತದ ವಿದ್ಯುತ್ ವಾಹನ(ಇವಿ)ವಿಭಾಗ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ವಿದ್ಯುತ್ ವಾಹನ ಚಾರ್ಜಿಂಗ್ ಕುರಿತಂತೆ ದೇಶದ ಎಲ್ಲೆಡೆ ಮೂಲಸೌಕರ್ಯ ಕೂಡ ಇದೇ ರೀತಿಯಲ್ಲಿ ಬೆಳೆಯುವ ಅಗತ್ಯವಿದೆ.
2022ರ ನವೆಂಬರ್ ತಿಂಗಳ ಒಂದರಲ್ಲಿಯೇ 1,20,660 ವಿದ್ಯುತ್ ವಾಹನಗಳು ಒಟ್ಟಾರೆಯಾಗಿ ಮಾರಾಟವಾಗಿದ್ದವು. ಇವುಗಳಲ್ಲಿ 5350 ನಾಲ್ಕು ಚಕ್ರದ ವಾಹನಗಳು ಮತ್ತು 76400 ದ್ವಿಚಕ್ರ ವಾಹನಗಳು ಸೇರಿದ್ದವು. ಇದು ವರ್ಷದಿಂದ ವರ್ಷಕ್ಕೆ ಶೇ. 185ಕ್ಕಿಂತಲೂ ಹೆಚ್ಚಾಗಿತ್ತು.
ಸುಸ್ಥಿರ ಶಕ್ತಿಗೆ ಬದಲಾಯಿಸಿಕೊಳ್ಳಲು ಅವಕಾಶ ಮಾಡಿಕೊಡುವುದರೊಂದಿಗೆ ಮಾನವರು ಪಳೆಯುಳಿಕೆಯ ಇಂಧನಗಳ ಮೇಲೆ ಆಧರಿಸಿರುವುದನ್ನು ಕಡಿಮೆ ಮಾಡುವಲ್ಲಿ ನೆರವಾಗುವ ತನ್ನ ಗುರಿಯೊಂದಿಗೆ, ರಿಬೋಲ್ಟ್ ವಿದ್ಯುತ್ ವಾಹನ ಮಾಲೀಕರಿಗಾಗಿ ಅನುಕೂಲಕರ ಸ್ಥಳಗಳಲ್ಲಿ ಉತ್ತಮ ಕಾರ್ಯಕ್ಷಮತೆಯ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸ್ಥಾಪಿಸುತ್ತಿದೆ. ಈ ಸಾಹಸ ಯೋಜನೆಯನ್ನು ಇದೇ ವರ್ಷ ಜುಲೈನಲ್ಲಿ ಆರಂಭಿಸಲಾಗಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿರುವ ಲುಲು ಗ್ಲೋಬಲ್ ಮಾಲ್‍ನಲ್ಲಿ ಈಗ ತಮ್ಮ ಏಳನೆ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಅನ್ನು ಆರಂಭಿಸಿದೆ. ಪ್ರಸ್ತುತ ಸಂಸ್ಥೆ 15 ಸಾರ್ವಜನಿಕ ಚಾರ್ಜಿಂಗ್ ಸ್ಥಳಗಳನ್ನು ನಾಲ್ಕು ಚಕ್ರ ವಾಹನಗಳಿಗಾಗಿ ಈ ಸ್ಥಳಗಳಲ್ಲಿ ನಡೆಸುತ್ತಿದೆ. ಜೊತೆಗೆ ಖಾಸಗಿ ಮತ್ತು ಅರೆ ಖಾಸಗಿ ಚಾರ್ಜಿಂಗ್ ಪಾಯಿಂಟ್‍ಗಳ ಸರಣಿಯನ್ನು ಅಪಾರ್ಟ್‍ಮೆಂಟ್‍ಗಳು, ರೆಸಾರ್ಟ್‍ಗಳು ಮತ್ತು ಕಚೇರಿ ಸ್ಥಳಗಳಲ್ಲಿ ನಡೆಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ರಿಬೋಲ್ಟ್‍ನ ಸಹಸ್ಥಾಪಕರಾದ ಸುನೀಲ್ ಪ್ರಭಾಕರ್ ಅವರು ಮಾತನಾಡಿ, “ವಿದ್ಯುತ್ ವಾಹನಗಳನ್ನು ಬೃಹತ್ ಸಂಖ್ಯೆಯಲ್ಲಿ ಬಳಕೆಗೆ ಅಳವಡಿಸಿಕೊಳ್ಳಲು ಚಾರ್ಜಿಂಗ್ ಮೂಲಸೌಕರ್ಯದ ಕೊರತೆ ಪ್ರಮುಖ ಹಿನ್ನಡೆಯಾಗಿದೆ. ರಿಬೋಲ್ಟ್‍ನೊಂದಿಗೆ ಜನರು ಸಾಮಾನ್ಯವಾಗಿ ಕೆಲವು ಗಂಟೆಗಳ ಕಾಲ ಕಳೆಯುವಂತಹ ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಇವಿ ಚಾರ್ಜರ್‍ಗಳನ್ನು ಸ್ಥಾಪಿಸುವುದರೊಂದಿಗೆ ಈ ಸಮಸ್ಯೆಯ ಪರಿಹಾರ ಕೈಗೊಳ್ಳಲು ನಾವು ಯತ್ನಿಸುತ್ತಿದ್ದೇವೆ.
ಇದರಿಂದ ಜನರು ಯಾವುದಾದರೂ ಉತ್ಪಾದಕ ಕಾರ್ಯದಲ್ಲಿ ತೊಡಗಿರುವಾಗ ಅವರ ವಾಹನ ಶೇ.50ರಿಂದ 60ರಷ್ಟು ಚಾರ್ಜಿಂಗ್ ಆಗುತ್ತದೆ. ಹೀಗೆ ಮಾಡುವಲ್ಲಿ ನಾವು ಪ್ರಮುಖ ಸಂಸ್ಥೆಗಳಾದ ಮೈಕ್ರೋ ಬ್ರೈವರಿಗಳು, ಕಾಫಿ ಶಾಪ್‍ಗಳು, ರೆಸ್ಟೋರೆಂಟ್‍ಗಳು, ಮಾಲ್‍ಗಳು, ಕ್ರೀಡಾ ಮಲ್ಟಿಫ್ಲೆಕ್ಸ್‍ಗಳು ಇತ್ಯಾದಿಗಳೊಂದಿಗೆ ನಾವು ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ. ಖಾಸಗಿ ಚಾರ್ಜಿಂಗ್ ಕಡೆಗೆ ನಾವು ಸಮಾನವಾಗಿ ಗಮನ ಕೇಂದ್ರೀಕರಿಸಿದ್ದೇವೆ. ಬೃಹತ್ ಅಪಾರ್ಟ್‍ಮೆಂಟ್ ಸಂಕೀರ್ಣಗಳು, ಕಚೇರಿಗಳು ಮತ್ತು ರೆಸಾರ್ಟ್‍ಗಳಲ್ಲಿ ನಮ್ಮ ಹಾಜರಿಯನ್ನು ಬೆಳೆಸುತ್ತಿದ್ದೇವೆ’’ ಎಂದರು.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಪೋಷಕ ಸಂಸ್ಥೆ ಟ್ರಬಾಕಸ್ ಟೆಕ್ನಾಲಜೀಸ್ ಒಂಬತ್ತು ವರ್ಷಗಳ ಕಂಪನಿಯಾಗಿದ್ದು, ಭಾರತ ಮತ್ತು ಯುಎಸ್‍ಗಳಲ್ಲಿ ಕಚೇರಿಗಳನ್ನು ಹೊಂದಿವೆ. ಮೂಲತಃ ಪ್ಯೂರ್ ಪ್ಲೇ ಟ್ರ್ಯಾವಲ್ ಟೆಕ್ನಾಲಜಿ ಕಂಪನಿಯಾದ ಈ ಸಂಸ್ಥೆ ರಿಬೋಲ್ಟ್‍ನೊಂದಿಗೆ ವಿದ್ಯುತ್ ವಾಹನ ಕ್ಷೇತ್ರಕ್ಕೆ ವಿಸ್ತರಣೆ ಕೈಗೊಂಡಿದೆ. ಸೆಲ್‍ಮೈಯೂಸ್ಡ್‍ಟೆಸ್ಲಾಡಾಟ್‍ಕಾಮ್ (sellmyusedtesla.com) ಎಂಬ ಬ್ರಾಂಡ್ ಹೆಸರಿನಲ್ಲಿ ಬಳಸಿದ ಟೆಸ್ಲಾ ಕಾರ್‍ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಸಮರ್ಪಿತ ಮಾರುಕಟ್ಟೆ ಸ್ಥಳವನ್ನು ಯುಎಸ್‍ನಲ್ಲಿ ಸಂಸ್ಥೆ ನಡೆಸುತ್ತಿದೆ.
`ವಿದ್ಯುತ್ ವಾಹನ ಚಾರ್ಜಿಂಗ್ ವಹಿವಾಟಿಗೆ ಪ್ರವೇಶಿಸಿದ ಕೆಲವೇ ಕೆಲವು ತಂತ್ರಜ್ಞಾನ ಸಂಸ್ಥೆಗಳಲ್ಲಿ ನಾವು ಒಂದಾಗಿದ್ದೇವೆ. ಬಹುತೇಕ ಇತರೆ ಸಂಸ್ಥೆಗಳು ಉತ್ಪಾದನೆ ಕ್ಷೇತ್ರದಲ್ಲಿವೆ. ನಮ್ಮ ಆ್ಯಪ್ ಅನ್ನು ನಮ್ಮ ಉತ್ಪನ್ನವಾಗಿ ನಾವು ನೋಡುತ್ತಿದ್ದೇವೆ ಅಲ್ಲದೆ, ಚಾರ್ಜರ್ ನಮ್ಮ ಉತ್ಪನ್ನವಲ್ಲ. ನಮ್ಮ ಸಂಸ್ಥೆಯಲ್ಲಿಯೇ ನಮ್ಮ ತಂತ್ರಜ್ಞಾನವನ್ನು ನಾವು ನಿರ್ಮಿಸುತ್ತೇವೆ. ಕಾಲ ಕಳೆದಂತೆ ರಿಬೋಲ್ಟ್ ಅನ್ನು ಇವಿ ಮಾಲೀಕರಿಗೆ ಒನ್-ಸ್ಟಾಪ್ ಆ್ಯಪ್ ಆಗಿ ಪರಿವರ್ತಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ’’ ಎಂದು ಸುನೀಲ್ ಹೇಳಿದರು.
ಬಳಕೆದಾರರ ಅತ್ಯಂತ ಸ್ನೇಹಿಯಾದಂತಹ ರಿಬೋಲ್ಟ್ ಆ್ಯಪ್‍ನೊಂದಿಗೆ ವಿದ್ಯುತ್ ವಾಹನ ಮಾಲೀಕರು ಮ್ಯಾಪ್‍ನಲ್ಲಿ ಚಾರ್ಜರ್‍ಗಳನ್ನು ಸುಲಭವಾಗಿ ಹುಡುಕಿಕೊಂಡು ಮುಂಚಿತವಾಗಿ ಚಾರ್ಜಿಂಗ್ ಸ್ಲಾಟ್ ಅನ್ನು ಬುಕ್ಕಿಂಗ್ ಮಾಡಬಹುದು. ಅಥವಾ ತಕ್ಷಣದಲ್ಲಿ ಲಭ್ಯವಿರುವ ಚಾರ್ಜರ್‍ಗಳನ್ನು ವೀಕ್ಷಿಸಿ ಅಲ್ಲಿ ಹೋಗಿ ಚಾರ್ಜಿಂಗ್ ಆರಂಭಿಸಿಕೊಳ್ಳಬಹುದು. ಚಾರ್ಜಿಂಗ್ ಸ್ಟೇಷನ್‍ನಲ್ಲಿ ಇವಿ ಮಾಲೀಕರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಚಾರ್ಜಿಂಗ್ ಆರಂಭಿಸಬಹುದು. ಚಾರ್ಜಿಂಗ್ ಅವಧಿ ಮುಕ್ತಾಯವಾದ ನಂತರ ಅವರ ವ್ಯಾಲೆಟ್‍ನಿಂದ ಸ್ವಯಂಚಾಲಿತವಾಗಿ ಹಣ ಪಡೆದುಕೊಳ್ಳಲಾಗುತ್ತದೆ. ಚಾರ್ಜರ್‍ನ ಹೋಸ್ಟ್‍ಗೆ ಡ್ಯಾಷ್‍ಬೋರ್ಡ್ ಜೊತೆಗೆ ನೀಡಲಾಗುತ್ತಿದೆ. ಈ ಡ್ಯಾಷ್‍ಬೋರ್ಡ್ ಬಳಸಿ ಅವರು ತಮ್ಮ ಸ್ಥಳ, ಚಾರ್ಜರ್‍ಗಳು, ಟ್ರ್ಯಾಕ್ ಬುಕ್ಕಿಂಗ್‍ಗಳು ಮತ್ತು ಬಳಕೆ, ಕಮೀಷನ್‍ಗಳು ಹಾಗೂ ಪಾವತಿ ಮುಂತಾದವುಗಳನ್ನು ನಿರ್ವಹಿಸಬಹುದು.
ರಿಬೋಲ್ಟ್‍ನ ಬೆಳವಣಿಗೆ ಯೋಜನೆಯ ಕುರಿತು ಸುನೀಲ್ ಅವರು ಮಾತನಾಡಿ, `ನಾವು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದೇವೆ. ಈಗ ನಾವು ಪ್ರಾಥಮಿಕವಾಗಿ ಕರ್ನಾಟಕದಲ್ಲಿ ಇದ್ದರೂ ಶೀಘ್ರದಲ್ಲಿಯೇ ನಾವು ಇತರೆ ರಾಜ್ಯಗಳಿಗೆ ವಿಸ್ತರಣೆ ಕೈಗೊಳ್ಳಲಿದ್ದೇವೆ. ನಮ್ಮ ಇವಿ ಚಾರ್ಜರ್‍ಗಳ ಆನ್‍ಲೈನ್ ಮಾರಾಟಕ್ಕೆ ನಮ್ಮ ವೆಬ್‍ಸೈಟ್ (www.reboltnetwork.com) ಮೂಲಕ ಅವಕಾಶ ಮಾಡಿಕೊಡುತ್ತಿದ್ದೇವೆ. ಜಾಲವನ್ನು ಬೆಳೆಸುವಲ್ಲಿ ಅತ್ಯುನ್ನತವಾಗಿ ಪ್ರೇರೇಪಿತವಾದ ಮತ್ತು ಸಮರ್ಪಣಾ ಮನೋಭಾವ ಹೊಂದಿರುವ ಅದ್ಭುತವಾದ ತಂಡವನ್ನು ನಾವು ಹೊಂದಿದ್ದೇವೆ. ಆದರೆ ಅದಕ್ಕೂ ಮುಖ್ಯವಾಗಿ ಹೋಸ್ಟ್‍ಗಳು ಮತ್ತು ಇವಿ ಮಾಲೀಕರಿಗೆ ಸರಾಗವಾದ ಸ್ಥಾಪನೆ ಮತ್ತು ಒಟ್ಟಾರೆ ಚಾರ್ಜಿಂಗ್ ಅನುಭವ ಪೂರೈಸುವ ಉದ್ದೇಶವನ್ನು ನಾವು ಹೊಂದಿದ್ದೇವೆ’’ ಎಂದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…