ಕಲಬುರಗಿ: ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಅಕ್ಕ ಮಹಾದೇವಿಯವರು ಬಹುಮುಖ ವ್ಯಕ್ತಿತ್ವದ ಮಹಿಳಾ ಮೇರು ಶಿಖರವಾಗಿದ್ದು, ಅವರ ಕೊಡುಗೆ ಅನನ್ಯವಾಗಿದೆ. ಮೂಢನಂಬಿಕೆ, ಕಂದಾಚಾರ, ಅಂದಶೃದ್ಧೆ, ಅಧರ್ಮ, ಅನ್ಯಾಯ, ಅಸಮಾನತೆ ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಅಕ್ಕ ಮಹಾದೇವಿಯರ ವಚನಗಳಲ್ಲಿ ಪರಿಹಾರ ದೊರೆಯುತ್ತದೆ ಎಂದು ಮಕ್ತಂಪುರ ಗದ್ದುಗೆ ಮಠದ ಪೂಜ್ಯ ವಿಜಯಮಹಾಂತ ಶ್ರೀಗಳು ಹೇಳಿದರು.
ನಗರದ ಜಗತ್ ಬಡಾವಣೆಯ ಮೇಲಕೇರಿಯಲ್ಲಿರುವ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಜರುಗಿದ 60ನೇ ಜಾತ್ರಾ ಮಹೋತ್ಸವ, ರಥೋತ್ಸವ, ಧರ್ಮಸಭೆ, ಅಕ್ಕಮಹಾದೇವಿ ಮಹಿಳಾ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಪ್ರಕೃತಿ ನಮಗೆ ವಾಯು, ನೀರು, ಬೆಳಕು ಎಲ್ಲವು ಉಚಿತವಾಗಿ ನೀಡಿದೆ. ನಮಗೆ ಅದರ ಋಣ ತೀರಿಸಲು ಸಾಧ್ಯವಿಲ್ಲ. ಮನಷ್ಯನಿಗೆ ಅಹಂಕಾರ, ಸ್ವಾರ್ಥ ಸಲ್ಲದು. ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಿ, ಮಾನವ ಜೀವನದ ಸಾರ್ಥಕತೆಯನ್ನು ಪಡೆಯುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು. ಜಾತ್ರೆ, ಉತ್ಸವಗಳು, ಧಾರ್ಮಿಕ ಕಾರ್ಯಕ್ರಮಗಳಿಂದ ಪರಸ್ಪರ ಸಾಮರಸ್ಯ ಬೆರೆಯಲು ಸಾಧ್ಯವಾಗುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಯುವ ಒಕ್ಕೂಟಗಳ ಸಂಘದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಯಾಂತ್ರಿಕೃತ ಇಂದಿನ ಜಂಜಾಟದ ಬದುಕಿನಲ್ಲಿ ಎಲ್ಲೆಡೆ ಅಶಾಂತಿ ತಾಂಡವಾಡುತ್ತಿದ್ದೆ. ಇಂತಹ ಸಂದರ್ಭದಲ್ಲಿ ಪುರಾಣ-ಪ್ರವಚನಗಳ ಆಲಿಸುವುದರಿಂದ ಮಾನಸಿಕ ಶಾಂತಿ ದೊರೆಯಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಅಕ್ಕ ಮಹಾದೇವಿ ವಚನಗಳನ್ನು ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಮಹಿಳಾ ಸಂಘಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಉಪನ್ಯಾಸಕ ಎಚ್.ಬಿ.ಪಾಟೀಲ, ಮುಖಂಡ ಶರಣು ಪಪ್ಪಾ ಮಾತನಾಡಿದರು. ‘ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕøತಿಕ ಮಹಿಳಾ ಸಂಘ’, ಮತ್ತು ‘ಅಕ್ಕಮಹಾದೇವಿ ಸ್ವಸಹಾಯ ಮಹಿಳಾ ಸಂಘ’ಗಳಿಗೆ ಚಾಲನೆ ನೀಡಲಾಯಿತು. ವಿಜಯಲಕ್ಷ್ಮೀ ಕೆಂಗನಾಳ, ಶಿವಲಿಂಗಪ್ಪ ಕೆಂಗನಾಳ, ಸಂತೋಷ ಕೋಡ್ಲಿ, ರಮೇಶ ಯಾಳಗಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಡಾವಣೆಯ ನೂರಾರು ಭಕ್ತರ ಉಪಸ್ಥಿತಿ, ‘ಅಕ್ಕ ಮಹಾದೇವಿ ಮಾತಾ ಕಿ ಜೈ’ ಎಂಬ ಜಯಘೋಷ, ಬಾಜಾ-ಭಜಂತ್ರಿಗಳ ಮೇಳ, ಪೂರ್ಣಕುಂಭದೊಂದಿಗೆ ಸಂಭ್ರಮದಿಂದ 60ನೇ ರಥೋತ್ಸವ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗಭೂಷಣ ಅಗಸ್ಥ್ಯತೀರ್ಥ, ಶಿವಯೋಗಪ್ಪ ಬಿರಾದಾರ, ಶಾಂತಾಬಾಯಿ ಅಗಸ್ಥ್ಯತೀರ್ಥ, ಮಹಾದೇವಿ ಅಗಸ್ಥ್ಯತೀರ್ಥ, ಸರಸ್ವತಿ ಬುಳ್ಳಾ, ಜಗದೇವಿ ಪಾಟೀಲ, ಪಾರ್ವತಿ ತೆಗನೂರ, ಮಲ್ಲಿಕಾರ್ಜುನ ಅಗಸ್ಥ್ಯತೀರ್ಥ, ರವಿ ಶೇರಿಕಾರ, ಸಂಗಮೇಶ ಚೀಲಶೆಟ್ಟಿ, ಈರಣ್ಣ, ಈರಯ್ಯಸ್ವಾಮಿ, ರುದ್ರಮುನಿಸ್ವಾಮಿ, ಜಯಶ್ರೀ ಎಸ್.ವಂಟಿ, ಮಾಲಾ ಕಣ್ಣಿ, ಮಾಲಾ ದಣ್ಣುರ ಸೇರಿದಂತೆ ಬಡಾವಣೆ ಹಾಗೂ ಸುತ್ತಲಿನ ನೂರಾರು ಜನ ಭಕ್ತರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…