ಬಿಸಿ ಬಿಸಿ ಸುದ್ದಿ

ಎಚ್‌ಐವಿ ಸೋಂಕಿತರ ಮಕ್ಕಳಿಗೆ ಶಿಕ್ಷಣ ಸಾಮಾಗ್ರಿ ವಿತರಣೆ

ವಾಡಿ: ಎಸಿಸಿ ಕಂಪನಿ ಹಾಗೂ ಎಆರ್‌ಟಿ ಸೆಂಟರ್ ಸಹಯೋಗದಲ್ಲಿ ಪಟ್ಟಣದ ಆಯುಷ್ಮಾನ್ ಟ್ರಸ್ಟ್ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಎಚ್‌ಐವಿ ಸೋಂಕಿತರ ಮಕ್ಕಳಿಗೆ ಮತ್ತು ಎಚ್‌ಐವಿ ಪೀಡಿತ ಒಟ್ಟು 152 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಾಗ್ರಿಗಳಾದ ಬ್ಯಾಗ್, ನೋಟ್‌ಬುಕ್, ಪೆನ್ನುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸಿಸಿ ಕಂಪನಿಯ ಎಚ್‌ಆರ್ ವಿಭಾಗದ ಮುಖ್ಯಸ್ಥ ಪುಷ್ಕರ್ ಚೌಧರಿ, ಎಚ್‌ಐವಿ ಸೋಂಕಿತ ರೋಗಿಗಳು ಜೀವನವನ್ನು ಜಯಿಸುವ ಸ್ಪೂರ್ತಿದಾಯಕ ಚಿಂತನೆಗಳೊಂದಿಗೆ ಬದುಕಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಅವರು ಘನತೆಯಿಂದ ಬದುಕುವಂತೆ ಪ್ರೇರೇಪಿಸಬೇಕು. ರೋಗ ದೊಡ್ಡದಲ್ಲ. ರೋಗವನ್ನು ಜಯಸುವ ಗುಣ ಮತ್ತು ಗುರಿ ನಮ್ಮಲ್ಲಿರಬೇಕು. ಎಚ್‌ಐವಿ ಪೀಡಿತರ ಮಕ್ಕಳ ಶಿಕ್ಷಣಕ್ಕಾಗಿ ಎಸಿಸಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮುಜುಗರವಿಲ್ಲದೆ ಅದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆಯುಷ್ಮಾನ ಆಸ್ಪತ್ರೆ (ಎಆರ್‌ಟಿ ಸೆಂಟರ್)ಯ ವೈದ್ಯಾಧಿಕಾರಿ ಸಂಜಯಕುಮಾರ ಅಳ್ಳೊಳ್ಳಿ ಮಾತನಾಡಿ, ಎಚ್‌ಐವಿ ಸೋಂಕಿತ ರೋಗಿಗಳನ್ನು ಅಸ್ಪೃಶ್ಯರಂತೆ ಕಾಣದೆ ಅವರೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳುವ ಮೂಲಕ ಆತ್ಮಸ್ತೈರ್ಯ ತುಂಬಿ ಗೌರವದ ಬದುಕು ನೀಡಬೇಕು. ದೇಹದೊಳಗಿನ ಬಿಳಿ ಮತ್ತು ಕೆಂಪು ರಕ್ತ ಕಣಗಳ ಕ್ರೀಯೆ ಮಹತ್ವದ್ದಾಗಿದೆ. ಆಹಾರದ ಮೂಲಕ ದೇಹ ಪ್ರವೇಶ ಪಡೆಯುವ ರೋಗಾಣುಗಳು ಈ ರಕ್ತ ಕಣಗಳನ್ನು ಸಾಯಿಸಲು ಮುಂದಾಗುತ್ತವೆ. ಬಿಳಿ ರಕ್ತ ಕಣಗಳು ರೋಗಾಣುಗಳನ್ನು ದೇಹದೊಳಕೆ ಬರದಂತೆ ಕಾವಲು ನಿಲ್ಲುತ್ತವೆ. ಆದ್ದರಿಂದ ಹೆಚ್ಚು ಪೌಷ್ಟಿಕಾಂಶದ ಆಹಾರವನ್ನೇ ಸೇವಿಸಬೇಕು ಎಂದರು.

ಎಸಿಸಿ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಬಿ.ಪೆದ್ದಣ್ಣ ಮಾತನಾಡಿದರು. ಆಸ್ಪತ್ರೆಯ ರಾಘವೇಂದ್ರ ಡಿ.ಗುತ್ತೇದಾರ, ಪ್ರೇಮಕುಮಾರ ಎಚ್.ಚವ್ಹಾಣ, ದೀಪಕ ಮಾನೆ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಜನ ಎಚ್‌ಐವಿ ಸೋಂಕಿತರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ಆಪ್ತಸಮಾಲೋಚಕ ಶಿವುಕುಮಾರ ಪುರಾಮಕರ ನಿರೂಪಿಸಿದರು. ಸಿಬ್ಬಂದಿ ಶೃತಿ ಬನ್ನಟ್ಟಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago