ಬಿಸಿ ಬಿಸಿ ಸುದ್ದಿ

ಲ್ಯಾಂಬತ್‌ ಬಸವೇಶ್ವರ ಮೂರ್ತಿಗೆ ಶಾಸಕ ಮತ್ತಿಮಡು ನಮನ ನಾಳೆ

ಕಮಲಾಪುರ: ಲಂಡನ್ ನ ಲ್ಯಾಂಬೇತ್ ನಗರದಲ್ಲಿ ಸ್ಥಾಪಿಸಿರುವ ಮಹಾತ್ಮ ಬಸವೇಶ್ವರರ ಮೂರ್ತಿಗೆ ಶಾಸಕ ಬಸವರಾಜ ಮತ್ತಿಮಡು ರವಿವಾರ ಜ.1 ರಂದು ಮಧ್ಯಾಹ್ನ 12ಕ್ಕೆ ವಿಶೇಷ ನಮನ ಸಲ್ಲಿಸುವ ಮೂಲಕ ಹೊಸ ವರ್ಷಾಚರಣೆ ಮಾಡಲಿದ್ದಾರೆ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.

‘ಅನುಭವ ಮಂಟಪದ ಸ್ಥಾಪನೆ ಮೂಲಕ 12ನೇ ಶತಮಾನದಲ್ಲೆ ಸಂಸತ್ತಿನ ಮಾದರಿಯನ್ನು ಪರಿಚಯಿಸಿದ್ದಲ್ಲೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ಕಟ್ಟಿಕೊಟ್ಟವರು ವಿಶ್ವಗುರು ಬಸವಣ್ಣ. ಕಾಯಕ, ದಾಸೋಹ ತತ್ವವದ ಜೊತೆಗೆ ಸಮಾನತೆ ತಳಹದಿಯ ಮೇಲೆ ಸಮಾಜವನ್ನು ಕಟ್ಟಲು ಬಯಿಸಿದ್ದ ಕ್ರಾಂತಿಕಾರಿ.

ಭಾರತದಲ್ಲಿ ವಿಶೇಷವಾಗಿ ಕನ್ನಡ ನೆಲದಲ್ಲಿ ಬಾಳಿ ಬದುಕಿದ ಮಾಹಾತ್ಮ ಬಸವೇಶ್ವರರ ಸಂದೇಶ, ಸಾಧನೆಯನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಲಂಡನ್‌ನ ಲ್ಯಾಂಬತ್‌ ನಗರದಲ್ಲಿ ಮೂರ್ತಿ ಸ್ಥಾಪಿಸಲಾಗಿದೆ. ಮೂರ್ತಿ ಸ್ಥಾಪನೆಗೆ ಶ್ರಮಿಸಿದ ಡಾ.ನೀರಜ್‌ ಪಾಟೀಲ ಅವರ ಕಾರ್ಯ ಪ್ರಶಂಸನೀಯ. ಅವರು ನಮ್ಮ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಮಲಾಪುರ ನಿವಾಸಿಯಾಗಿರುವುದು ಹೆಮ್ಮೆಯ ಸಂಗತಿ.

ವಿಶ್ವಗುರು ಭಾರತದ ಕನಸು ಹೊತ್ತ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಅನಾವರಣಗೊಂಡ, ನನ್ನ ಮತಕ್ಷೇತ್ರದ ಮಹಾನುಭಾವರಾದ ಲ್ಯಾಂಬತ್‌ನ ಮಾಜಿ ಮೇಯರ ಡಾ.ನೀರಜ ಪಾಟೀಲ ಅವರಿಂದ ಸ್ಥಾಪಿನೆಗೊಂಡಿರುವ ನಮ್ಮ ನಾಡಿನ ಸಮಾಜ ಸುಧಾರಕ ಮಾಹಾತ್ಮ ಬಸವೇಶ್ವರರ ಮೂರ್ತಿಗೆ ನಮನಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಪೂರ್ವಜನ್ಮದ ಪುಣ್ಯ.

ಮಗಳ ಉನ್ನತ ಅಧ್ಯಯನದ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ನಾನು ಲಂಡನ್ ಗೆ ಆಗಮಿಸಿದ್ದೇನೆ. ಲ್ಯಾಂಬೇತ್ ಬಸವೇಶ್ವರ ಫೌಂಡೇಷನ್ ಮತ್ತು ಬಸವ ಸಮಿತಿ ಆಫ್ ಯುನೈಟೆಡ್ ಕಿಂಗಡಮ್ ಸಂಸ್ಥೆ ನನಗೆ ಈ ಸದವಕಾಶ ಮಾಡಿಕೊಟ್ಟಿದೆ. ಹೊಸ ವರ್ಷದ ದಿನದಂದು ನನಗೆ ದೊರೆತ ಈ ಅಪರೂಪದ ಅವಕಾಶ ಜೀವನದಲ್ಲಿ ಮರೆಯಲಾಗದ ಸಂಗತಿಯಾಗಲಿದೆ ಎಂದು ಶಾಸಕ ಮತ್ತಿಮಡು ತಿಳಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

15 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago